ನವದೆಹಲಿ:2019ರ ಲೋಕಸಭೆ ಚುನಾವನನೆ ಪ್ರಚಾರದ ವೇಳೆ ಮೊದಿ ಉಪನಾಮದ ಕುರಿತು ವ್ಯಂಗ್ಯವಾಡಿ ಸಂಸತ್​ ಸ್ಥಾನದಿಂದ ಅನರ್ಹಗೊಂಡು ಜೈಲು ಶಿಕ್ಷೆಗೆ ಗುರಿಯಾಗಿದ್ದ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಗೆ ಸುಪ್ರೀಂ ಕೋರ್ಟ್​ ದೊಡ್ಡ ರಿಲೀಫ್​ ನೀಡಿದ್ದು, ಇದರಿಂದ ಅವರು ತಮ್ಮ ಸಂಸತ್​ ಸ್ಥಾನವನ್ನು ಮರಳಿ​ ಪಡೆಯಲಿದ್ದಾರೆ.
ಸೂರತ್​ ನ್ಯಾಯಾಲಯ ವಿಧಿಸಿದ್ದ ಜೈಲು ಶಿಕ್ಷೆಗೆ ಸುಪ್ರೀಂ ಕೋರ್ಟ್​ ತಡೆ ನೀಡಿರುವುದನ್ನು ಸ್ವಾಗತಿಸಿರುವ ಕಾಂಗ್ರೆಸ್​ ಪಕ್ಷದ ನಾಯಕರು ಟ್ವೀಟ್​ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್​ ಮಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸುಪ್ರೀಂ ಕೋರ್ಟ್​ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ನಮಗೆ ನ್ಯಾಯ ಸಿಕ್ಕಿದ್ದು, ಪ್ರಜಾಪ್ರಭುತ್ವ ಗೆದ್ದಿದೆ. ಸಂವಿಧಾನವನ್ನು ಎತ್ತಿ ಹಿಡಿಯಲಾಗಿದೆ.
Truth Alone Triumphs!We welcome the verdict by the Hon’ble Supreme Court giving relief to Shri@RahulGandhi.Justice has been delivered. Democracy has won. The Constitution has been upheld.BJP’s conspiratorial hounding of Shri Gandhi has been thoroughly exposed.Time for…
ರಾಹುಲ್​ ಗಾಂಧಿಯವರ ಪ್ರಕರಣದಲ್ಲಿ ಬಿಜೆಪಿಯ ಸಂಪೂರ್ಣ ಪಿತೂರಿ ಬಯಲಾಗಿದೆ. ವಿರೋಧ ಪಕ್ಷದ ನಾಯಕರನ್ನು ದುರುದ್ದೇಶಪೂರ್ವಕವಾಗಿ ಗುರಿ ಮಾಡುತ್ತಿರುವ ಬಿಜೆಪಿಗೆ ಇದು ನಿಲ್ಲಿಸಲು ಸೂಕ್ತ ಸಮಯವಾಗಿದೆ. ಕಳೆದ 10 ವರ್ಷಗಳಲ್ಲಿ ವೈಫಲ್ಯ ಕಂಡಿರುವ ಇವರು ಇನ್ನಾದರು ಜನಾದೇಶವನ್ನು ಗೌರವಿಸಿ ಆಡಳಿತ ನಡೆಸುವುದು ಉತ್ತಮ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟ್ವೀಟ್​ ಮಾಡಿದ್ದಾರೆ.
ಇದನ್ನೂ ಓದಿ:IPL 2024; RCB ತಂಡದ ಮುಖ್ಯ ಕೋಚ್​ ಆಗಿ ಆ್ಯಂಡಿ ಪ್ಲವರ್​ ನೇಮಕ
ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಮಾತನಾಡಿ ಸತ್ಯಕ್ಕೆ ಯಾವಾಗಲೂ ಜಯ ನಿಶ್ಚಿತ. ಏನೇ ಅಡ್ಡ ಬಂದರು ನನ್ನ ಕರ್ತವ್ಯ ಹಾಗೆಯೇ ಉಳಿದಿದೆ. ಭಅರತದ ಕಲ್ಷಪನೆಯನ್ನು ರಕ್ಷಿಸಿ. ಪ್ರಕರಣದ ವಿಚಾರವಾಗಿ ನನ್ನನ್ನು ಬೆಂಬಲಿಸಿದ ಪ್ರತಿಯೊಬ್ಬರಿಗು ಧನ್ಯವಾದಗಳು ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಪ್ರೀಂ ಕೋರ್ಟ್​ ಆದೇಶವನ್ನು ನಾವು ಸ್ವಾಗತಿಸುತ್ತೇವೆ. ಅಭಿವ್ಯಕ್ತಿ ಸ್ವಾತಂತ್ರ್ಯ ಇರಬೇಕೆಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇದು ಪ್ರಜಾಪ್ರಭುತ್ವಕ್ಕೆ ಸಂದ ಜಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇದು ದ್ವೇಷದ ವಿರುದ್ಧ ಪ್ರೀತಿಯ ಗೆಲುವಾಗಿದ್ದು, ಸತ್ಯಮೇವ ಜಯತೆ- ಜೈ ಹಿಂದ್​ ಎಂದು ಎಐಸಿಸಿ ಟ್ವೀಟ್​ ಮಾಡಿದೆ.
Come what may, my duty remains the same.Protect the idea of India.
यह नफरत के खिलाफ मोहब्बत की जीत है।सत्यमेव जयते – जय हिंद 🇮🇳pic.twitter.com/wSTVU8Bymn
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 11 =
Remember me
