ನವದೆಹಲಿ:ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ವಿಷಯದಲ್ಲಿ ಪಕ್ಷದೊಳಗೆ ಭಿನ್ನಮತ, ಬಿಕ್ಕಟ್ಟು ಹೆಚ್ಚಾಗುತ್ತಿರುವಾಗಲೇ ಹೊಸ ಸುದ್ದಿಯೊಂದು ಬಹಿರಂಗವಾಗಿದೆ. ಹೊಸ ವರ್ಷ ಆರಂಭದಲ್ಲೇ ಪಕ್ಷದ ಚುಕ್ಕಾಣಿ ಹಿಡಿಯಲು ಹೊಸ ಅಧ್ಯಕ್ಷರೊಬ್ಬರು ಬರ್ತಾರಂತೆ!
ಕಾಂಗ್ರೆಸ್ ಪಕ್ಷದ ಮೂಲಗಳನ್ನು ಉಲ್ಲೇಖಿಸಿ ಇಂಡಿಯಾ ಟಿವಿ ಮಾಡಿರುವ ಪ್ರಕಾರ, ನವೆಂಬರ್ ತಿಂಗಳಲ್ಲಿ ಆಂತರಿಕ ಚುನಾವಣೆ ನಡೆಸುವುದಕ್ಕೆ ಇರುವ ಎಲ್ಲ ಪ್ರಕ್ರಿಯೆಗಳೂ ಪೂರ್ಣಗೊಳ್ಳಲಿವೆ. ಮುಂದಿನ ವರ್ಷ ಜನವರಿಯ ವೇಳೆಗೆ ಹೊಸ ಅಧ್ಯಕ್ಷರು ಪಕ್ಷವನ್ನು ಮುನ್ನಡೆಸಲಿದ್ದಾರೆ. ಇಲ್ಲೊಂದು *ಷರತ್ತು ಅನ್ವಯ ಎಂಬ ಮಾತೂ ಇದೆ. ಷರತ್ತು ಏನಪ್ಪಾ ಅಂದರೆ “ಎಲ್ಲವೂ ಯೋಜನೆಯ ಪ್ರಕಾರವೇ ನಡೆದರೆ” ಎಂಬ ಮಾತು ಅದು!
ಇದನ್ನೂ ಓದಿ:ಸಾಕಪ್ಪಾ ಸಾಕು, ಇನ್ನು ಯಾವತ್ತೂ ಕಾಂಗ್ರೆಸ್ ಅಧ್ಯಕ್ಷ ಆಗುವುದಿಲ್ಲ ಎಂದ ರಾಹುಲ್ ಗಾಂಧಿ!
ಸಿಡಬ್ಲ್ಯುಸಿಗೆ ಕೊನೆಯ ಬಾರಿ ಚುನಾವಣೆ ನಡೆದಿರುವುದು 1997ರಲ್ಲಿ. ಅಂದು ಸೀತಾರಾಮ ಕೇಸರಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು. ಈಗ ಮತ್ತೆ ನವೆಂಬರ್ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಇದಕ್ಕೆ ಸಂಬಂಧಿಸಿದ ಸೂಚನೆಯನ್ನು ಪಕ್ಷ ಶೀಘ್ರವೇ ಪ್ರಕಟಿಸಲಿದೆ. ಆಗಸ್ಟ್ ತಿಂಗಳಲ್ಲಷ್ಟೇ ಪಕ್ಷದ ಎರಡು ಡಜನ್​ ನಷ್ಟು ಹಿರಿಯ ನಾಯಕರು ನಾಯಕತ್ವ ಬದಲಾವಣೆ ಆಗ್ರಹಿಸಿ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದಿದ್ದರು. ಅದರಿಂದಾಗಿ ಪಕ್ಷದೊಳಗೆ ಒಂದಷ್ಟು ಅಲ್ಲೋಲಕಲ್ಲೋಲ ಉಂಟಾಗಿತ್ತು. (ಏಜೆನ್ಸೀಸ್)
ವಿವೇಕ ಧಾರೆ: ಸಾಮರ್ಥ್ಯದ ನಿಧಿಯಾಗಲಿ ಯೌವನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 11 =
Remember me
