ಜೈಪುರ: ಪಡಿತರ ವಿತರಣೆ ಸಂದರ್ಭದಲ್ಲಿ ರಾಜಸ್ಥಾನದ ಬೇಗುಣ ವಿಧಾನಸಭಾ ಕ್ಷೇತ್ರದ ಶಾಸಕ ಕಾಂಗ್ರೆಸ್ ನಾಯಕ ರಾಜೇಂದ್ರ ಸಿಂಗ್​ ಬಿಧೂರಿ ಅವರು ಅಲ್ಲಿದ್ದ ಮಹಿಳೆಯರಿಗೆ ಎರಡು ಆಯ್ಕೆ ನೀಡಿದರು.ಯಾರು ಉತ್ತಮರು ಮೋದಿಯೋ ಅಥವಾ ಗೆಹ್ಲೋಟೋ ಎಂಬ ಪ್ರಶ್ನೆ ಅದಾಗಿತ್ತು. ಅದಕ್ಕೆ ಅವರು ನೀಡುವ ಉತ್ತರ ನೋಡಿ ರೇಷನ್ ವಿತರಿಸಿದ ಬಿಧೂರಿ ಅವರ ಕ್ರಮ ಈಗ ದೇಶವ್ಯಾಪಿ ಟೀಕೆಗೆ ಒಳಗಾಗಿದೆ.
ಈ ಘಟನೆಗೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿದ್ದು, ವಿವಾದಕ್ಕೀಡಾಗಿದೆ. ಈ ಘಟನೆ ಏಪ್ರಿಲ್ 17ರಂದು ಬೇಗುಣ ತಾಲೂಕಿನ ಸೋನಿಯಾನ ಗ್ರಾಮದಲ್ಲಿ ರೇಷ್​ ಕಿಟ್ ವಿತರಣೆ ಸಂದರ್ಭದಲ್ಲಿ ನಡೆದಿದೆ. ವಿಡಿಯೋದಲ್ಲಿ ಕಂಡು ಬಂದ ದೃಶ್ಯಾವಳಿ ಪ್ರಕಾರ, ಶಾಸಕ ಬಿಧೂರಿ ಅವರು ಮೈಕ್ರೋಫೋನ್ ಹಿಡಿದುಕೊಂಡು ರೇಷನ್ ಕಿಟ್​ ಪಡೆಯಲು ಬಂದ ಮಹಿಳೆ ಒಬ್ಬರಲ್ಲಿ ಆ ದೀಪ ಬೆಳಗಲು ಹೇಳಿದ ಮೋದಿಯೋ ಅಥವಾ ರೇಷನ್ ವಿತರಣೆಗೆ ಕ್ರಮ ಕೈಗೊಂಡ ಗೆಹ್ಲೋಟ್ ಉತ್ತಮರೋ? ಎಂದು ಕೇಳಿದರು. ಅದಕ್ಕೆ ಅವರು ಮೋದಿ ಎಂದು ಹೇಳಿದ್ರು. ಕೂಡಲೇ ಪ್ರತಿಕ್ರಿಯಿಸಿದ ಶಾಸಕ ಬಿಧೂರಿ, ಹಾಗಾದರೆ ನೀವು ಮೋದಿ ಹೇಳಿದ ಹಾಗೆ ದೀಪ ಬೆಳಗಿ. ಈ ರೇಷನ್ ಇಲ್ಲೇ ಬಿಟ್ಟು ಹೋಗಿ ಎಂದು ಹಿಂದಕ್ಕೆ ಕಳುಹಿಸಿದರು.
ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ.ಶಾಸಕರ ನಡೆ ಟೀಕೆಗೂ ಒಳಗಾಗಿದೆ. ಆದರೆ, ಅವರು ಪ್ರತಿಕ್ರಿಯೆಗೆ ಸಿಕ್ಕಿಲ್ಲ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ನಡುವೆ, ಶಾಸಕ ಬಿಧೂರಿ ಅವರ ವಿವಾದಾತ್ಮಕ ನಡೆ ಇದೇ ಮೊದಲನೆಯದಲ್ಲ. ವಾರದ ಹಿಂದಷ್ಟೇ ಲಾಕ್​ಡೌನ್ ನಿಯಮ ಯಲ್ಲಂಘಿಸಿ ದಂಡ ಹಾಕಿಸಿಕೊಂಡ ಮರುದಿನವೇ ದಂಡ ಹಾಕಿದ ಅಧಿಕಾರಿಯನ್ನು ವರ್ಗಾವಣೆ ಮಾಡಿಸಿ ತೀವ್ರ ಟೀಕೆಗೂ ಗುರಿಯಾಗಿದ್ದಾರೆ. (ಏಜೆನ್ಸೀಸ್)
ಮುಂಬೈ, ಕೋಲ್ಕತ, ಜೈಪುರ, ಇಂದೋರ್​ಗಳಲ್ಲಿ COVID19 ಸೋಂಕು ಗಂಭೀರ ಎಂದ ಕೇಂದ್ರ ಆರೋಗ್ಯ ಸಚಿವಾಲಯ

ಪಾದರಾಯನಪುರ ಗಲಭೆ ರಾಜಕೀಯ ಪಿತೂರಿ ಎಂದು ಟ್ವೀಟ್ ಮಾಡಿದ್ರು ಶಾಸಕ ಜಮೀರ್ ಅಹಮದ್​ ಖಾನ್​!
Meet Rajendra Singh Bidhuri –#RajasthanCong MLA who denied rations to Modi fanThis week itself he got the SDM transferredThe IAS had challaned his car for violating lockdown norms@fpjindia@BJP4India@INCIndia@DrSatishPoonia@IASassociation#COVIDhttps://t.co/fUYOIMVQsk— Dr Sangeeta Pranvendra (@sangpran)April 19, 2020
Meet Rajendra Singh Bidhuri –#RajasthanCong MLA who denied rations to Modi fanThis week itself he got the SDM transferredThe IAS had challaned his car for violating lockdown norms@fpjindia@BJP4India@INCIndia@DrSatishPoonia@IASassociation#COVIDhttps://t.co/fUYOIMVQsk

This is@INCIndiaMLA#RajendraBidhuri's 2nd controversy in a week. On April 14 – SDM Tejaswi Rana challaned his car for violating lockdown. He got the IAS officer transferred next day. 2/3@fpjindia#LockdownVVIPspic.twitter.com/KhRb9Eo3PF— Dr Sangeeta Pranvendra (@sangpran)April 19, 2020
This is@INCIndiaMLA#RajendraBidhuri's 2nd controversy in a week. On April 14 – SDM Tejaswi Rana challaned his car for violating lockdown. He got the IAS officer transferred next day. 2/3@fpjindia#LockdownVVIPspic.twitter.com/KhRb9Eo3PF


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 1 =
Remember me
