ಜೈಪುರ:ಎಷ್ಟೇ ಬಾರಿ ತನ್ನ ಸಮಸ್ಯೆಯನ್ನು ಹೇಳಿಕೊಳ್ಳಲು ಮುಂದಾದರು ಅದನ್ನು ಕೇಳದೆ ಇರುವ ಕಾಂಗ್ರೆಸ್​ ಶಾಸಕನನ್ನು ನಿವೃತ್ತ ಸಿಆರ್​ಪಿಎಫ್​ ಯೋಧರೊಬ್ಬರು ಮನಸೋಇಚ್ಛೆ ಥಳಿಸಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಹಲ್ಲೆಗೊಳಗಾದ ಕಾಂಗ್ರೆಸ್​ ಶಾಸಕನನ್ನು ರಫೀಕ್​ ಖಾನ್​ ಎಂದು ಗುರುತಿಸಲಾಗಿದ್ದು, ಹಲ್ಲೆ ಮಾಡಿದ ನಿವೃತ್ತ ಯೋಧನನ್ನು ವಿಕಾಸ್​ ಜಾಖಾ ಎಂದು ಗುರುತಿಸಲಾಗಿದೆ. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಕಾಂಗ್ರೆಸ್​ ಶಾಸಕನ ಮೇಲೆ ಹಲ್ಲೆ ಮಾಡಿದ ನಿವೃತ್ತ ಯೋಧನನ್ನು ಸಾರ್ವಜನಿಕರು ಹಾಗೂ ಬೆಂಬಲಿಗರು ಹಿಡಿದು ಥಳಿಸುತ್ತಿರುವುದನ್ನು ನೋಡಬಹುದಾಗಿದೆ. ಈ ವೇಳೆ ಮಧ್ಯಪ್ರವೇಶಿಸುವ ಪೊಲೀಸರು ಹಲ್ಲೆ ಮಾಡಿದ ನಿವೃತ್ತ ಯೋಧನನ್ನು ವಶಕ್ಕೆ ಪಡೆಯುವುದನ್ನು ನೋಡಬಹುದಾಗಿದೆ.
Shocking video coming from Rajasthan: Congress MLA Rafiq Khan's goons assaulted a Shaurya Chakra awardee CRPF veteran when he tried to confront the MLA.As per his statement, the MLA was harassing his wife for a long time.pic.twitter.com/wDzK2xMTHe
ಇದನ್ನೂ ಓದಿ:ಹಾರ್ದಿಕ್​-ರೋಹಿತ್​ ನಡುವಿನ ಮುನಿಸು! ದೂರಾಗಲು ಕಾರಣವಾಯ್ತು ಈ ಅಂಶ
ಈ ಕುರಿತು ಪ್ರತಿಕ್ರಿಯಿಸಿರುವ ಡಿಸಿಪಿ ಅನಿತ್​ ಕುಮಾರ್​, ಶಾಸಕರ ಮೇಲೆ ಹಲ್ಲೆ ಮಾಡಿದವರನ್ನು ವಿಕಾಸ್​ ಜಾಖಾ ಎಂದು ಗುರುತಿಸಲಾಗಿದ್ದು, ಇವರು ನಿವೃತ್ತ ಸಿಆರ್​ಪಿಎಫ್​ ಯೋಧರೆಂದು ತಿಳಿದು ಬಂದಿದೆ. ತನ್ನ ಹೆಂಡತಿ ಆರೋಗ್ಯ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದು, ಹಲವು ದಿನಗಳಿಂದ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲು ಶಾಸಕರನ್ನು ಸಂಪರ್ಕಿಸಿದ್ದರು ಯಾವುದೇ ಪ್ರಯೋಜನವಾಗಿರಲಿಲ್ಲ. ಇದರಿಂದ ಕುಪಿತಗೊಂಡ ಆತ ಹಲ್ಲೆ ಮಾಡಿದ್ದಾನೆಂದು ತಿಳಿದು ಬಂದಿದೆ. ವಿಚಾರಣೆ ನಡೆಯುತ್ತಿದ್ದು, ಮತ್ತಷ್ಟು ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಶಾಸಕ ರಫೀಕ್​ ಖಾನ್​ ಮಾತನಾಡಿ, ಮನೆ ಬಳಿ ಬಂದಿದ್ದ ಸಾರ್ವಜನಿಕರನ್ನು ಮಾತನಾಡಿಸಿ ನಾನು ಹೊರಡುವ ವೇಳೆಗೆ ವ್ಯಕ್ತಿಯೋರ್ವ ನನ್ನ ಬಳಿ ಓಡಿ ಬರುತ್ತಿರುವುದನ್ನು ನೋಡಿ ಕಾರನ್ನು ನಿಲ್ಲಿಸಲು ಸೂಚನೆ ನೀಡಿದೆ. ಆತ ಏಕಾಏಕಿ ನನ್ನ ಕುತ್ತಿಗೆಗೆ ಕೈ ಹಾಕಿ ಎದೆ ಭಾಗಕ್ಕೆ ಜೋರಾಗಿ ಹೊಡೆದ. ಕೂಡಲೇ ಅಲ್ಲಿದ್ದವರು ನನ್ನನ್ನು ರಕ್ಷಿಸಿ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ದೂರು ದಾಖಲಿಸಲಾಗಿದ್ದು, ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:20 − 18 =
Remember me
