ಜೈಪುರ/ಅಹಮದಾಬಾದ್​:ಮಹತ್ವದ ರಾಜ್ಯಸಭಾ ಚುನಾವಣೆ ಹತ್ತಿರದಲ್ಲಿರುವಾಗಲೇ ಗುಜರಾತ್​ನಲ್ಲಿ ರೆಸಾರ್ಟ್​ ರಾಜಕೀಯ ಶುರುವಾಗಿದೆ. ಕಾಂಗ್ರೆಸ್ ಪಕ್ಷದ 65 ಶಾಸಕರು ಗುಜರಾತ್ ಮತ್ತು ರಾಜಸ್ಥಾನದ ರೆಸಾರ್ಟ್​ಗಳಿಗೆ ಶಿಫ್ಟ್ ಆಗಿದ್ದಾರೆ. ಗುಜರಾತ್​ನಲ್ಲಿ ಬೆನ್ನು ಬೆನ್ನಿಗೆ ಕಾಂಗ್ರೆಸ್ ಶಾಸಕರ ರಾಜೀನಾಮೆಯಿಂದಾಗಿ ಪಕ್ಷದ ಹೈಕಮಾಂಡ್​ಗೆ ತಲೆನೋವಾಗಿತ್ತು. ಇದೇ ಕಾರಣಕ್ಕೆ ಎಲ್ಲರನ್ನು ರೆಸಾರ್ಟ್​ ಶಿಫ್ಟ್ ಮಾಡಲಾಗಿದೆ ಎಂಬ ಮಾತು ವ್ಯಾಪಕವಾಗಿದೆ.
ವರದಿಗಳ ಪ್ರಕಾರ, ಜೂನ್ 19ಕ್ಕೆ ರಾಜ್ಯಸಭಾ ಸ್ಥಾನಗಳ ಚುನಾವಣೆ ನಿಗದಿಯಾಗಿರುವ ಕಾರಣ ಈ ಶಾಸಕರು ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂಬ ಸುದ್ದಿ ದಟ್ಟವಾಗಿ ಹಬ್ಬಿತ್ತು. 65 ಶಾಸಕರನ್ನು ರಾಜಸ್ಥಾನದ ವೈಲ್ಡ್​ ವಿಂಡ್ ರೆಸಾರ್ಟ್ ಮತ್ತು ರಾಜ್​ಕೋಟ್​ನಲ್ಲಿರುವ ನೀಲ್​ ಸಿಟಿ ರೆಸಾರ್ಟ್​ ಹಾಗೂ ವಡೋದರಾದಲ್ಲಿರುವ ಅರೀಸ್ ರಿವರ್​ಸೈಡ್ ಫಾರ್ಮ್​ಹೌಸ್​ಗೆ ಶಿಫ್ಟ್ ಮಾಡಲಾಗಿದೆ. ಈ ಪೈಕಿ 40 ಶಾಸಕರು ರಾಜಸ್ಥಾನದಲ್ಲೂ 25 ಶಾಸಕರು ಇನ್ನೆರಡು ರೆಸಾರ್ಟ್​ಗಳಲ್ಲೂ ಇದ್ದಾರೆ.
ಇದನ್ನೂ ಓದಿ:ಕರೊನಾ ಸೇನಾನಿಗಳಿಗೆ ಊಟ ಬಡಿಸಿದ್ದ ಯುವಕನನ್ನೂ ಬಿಡಲಿಲ್ಲ ಜವರಾಯ!
ಈ ಪೈಕಿ ಒಬ್ಬ ಶಾಸಕ ಗುಲಾಬ್ ಸಿಂಗ್ ರಜಪೂತ್​ ಪ್ರತಿಕ್ರಿಯಿಸಿದ್ದು, ರಾಜ್ಯಸಭಾ ಚುನಾವಣೆಯ ತಂತ್ರಗಾರಿಕೆಯ ಬಗ್ಗೆ ಚರ್ಚಿಸಲು ನಾವು ಇಲ್ಲಿ ರೆಸಾರ್ಟ್​ನಲ್ಲಿ ಸೇರಿದ್ದೇವೆ. ಯಾವ ಶಾಸಕನೂ ಪಕ್ಷ ಬಿಟ್ಟು ಹೋಗಲ್ಲ. ಜನರನ್ನು ವಂಚಿಸಲು ಉದ್ದೇಶಿಸುವವರಷ್ಟೇ ಪಕ್ಷ ಬಿಟ್ಟು ಹೋಗಬಹುದಷ್ಟೆ. ಅವರಿಗೆ ಜನಾದೇಶದ ಮೇಲೆ ನಂಬಿಕೆ, ಗೌರವ ಇಲ್ಲ ಎಂದೇ ಅರ್ಥ ಎಂದು ಹೇಳಿದ್ದಾರೆ.
ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿ: ರಾಜ್ಯಸಭಾ ಚುನಾವಣೆ ಮಹತ್ವದ್ದಾಗಿದ್ದು, ಇದಕ್ಕೂ ಮೊದಲೇ 8 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡುವುದಕ್ಕೆ ಬಿಜೆಪಿಯೇ ಕಾರಣ. ಅದು ಕುದುರೆ ವ್ಯಾಪಾರಕ್ಕೆ ಇಳಿದಿದೆ ಎಂದು ಶನಿವಾರವಷ್ಟೇ ಕಾಂಗ್ರೆಸ್ ನಾಯಕರು ಆರೋಪಿಸಿದ್ದರು. ಕಾಂಗ್ರೆಸ್ ಶಾಸಕರಾಗಿದ್ದ ಜಿತು ಚೌಧರಿ, ಅಕ್ಷಯರ್ ಪಟೇಲ್​, ಬ್ರಿಜೇಶ್​ ಮೆರ್ಜಾ ಪಕ್ಷ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಕಾಂಗ್ರೆಸ್ ನಾಯಕರಿಗೆ ಇನ್ನೂ ಅರಗಿಸಿಕೊಳ್ಳಲಾಗಿಲ್ಲ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಅಭಿಷೇಕ್ ಸಿಂಘ್ವಿ ಈ ಬಗ್ಗೆ ಖಾರವಾದ ಪ್ರತಿಕ್ರಿಯೆಯನ್ನೂ ಟ್ವೀಟ್ ಮಾಡಿದ್ದಾರೆ.
ಶಿಕ್ಷಕಿಗೆ 31 ಲಕ್ಷ ರೂ. ಧೋಖಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
