ನವದೆಹಲಿ:ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ಅನುರಾಗ್ ಠಾಕೂರ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಸಂಸದ ಚರಣ್‌ಜಿತ್ ಸಿಂಗ್ ಚನ್ನಿ ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಬುಧವಾರ(ಜುಲೈ 31) ವಿಶೇಷ ಹಕ್ಕು ಉಲ್ಲಂಘನೆಯ ನೋಟಿಸ್ ನೀಡಿದ್ದಾರೆ.
ಇದನ್ನು ಓದಿ:ಜಾತಿ ಗೊತ್ತಿಲ್ಲದವರು ಜಾತಿಗಣತಿ ಬಗ್ಗೆ ಮಾತನಾಡುತ್ತಾರೆ; ಅನುರಾಗ್​ ಠಾಕೂರ್​ ಹೇಳಿಕೆಗೆ ರಾಹುಲ್​ ಉತ್ತರಿಸಿದ್ದು ಹೀಗೆ
ಚರಣ್‌ಜಿತ್ ಸಿಂಗ್ ಚನ್ನಿ ಅವರು ಈ ನೋಟಿಸ್‌ನಲ್ಲಿ, ಪ್ರಧಾನಿ ಮೋದಿ ಅವರು ಸದನದ ಕಲಾಪದಿಂದ ತೆಗೆದುಹಾಕಲಾದ ಅನುರಾಗ್​​ ಠಾಕೂರ್​​​ ಅವರ ಭಾಷಣದ ಆಯ್ದ ಭಾಗಗಳನ್ನು ಒಳಗೊಂಡಿರುವ ವೀಡಿಯೊವನ್ನು ಸಾಮಾಜಿಕ ಜಾಲತಾಣದ ಎಕ್ಸ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪ್ರಧಾನಿ ಮೋದಿಯವರ ಈ ನಡೆ ಸದನದ ವಿಶೇಷಾಧಿಕಾರದ ಉಲ್ಲಂಘನೆಯಾಗಿದೆ ಎಂದು ಅವರು ಆರೋಪಿಸಿದರು.
ನನ್ನ ಪ್ರಸ್ತಾವನೆಯನ್ನು ಅಂಗೀಕರಿಸಿ ಸದನದಲ್ಲಿ ಮಂಡಿಸಲು ಅವಕಾಶ ನೀಡುವಂತೆ ಕೋರುತ್ತೇನೆ ಎಂದು ಚನ್ನಿ ಲೋಕಸಭೆ ಸ್ಪೀಕರ್‌ಗೆ ನೀಡಿರುವ ನೋಟಿಸ್‌ನಲ್ಲಿ ತಿಳಿಸಿದ್ದಾರೆ. ಪ್ರಧಾನಮಂತ್ರಿಯವರ ವಿರುದ್ಧ ಸವಲತ್ತು ಉಲ್ಲಂಘನೆಯ ಕ್ರಮಕೈಗೊಳ್ಳುವಂತೆ ನಾನು ವಿನಂತಿಸುತ್ತೇನೆ ಎಂದು ಹೇಳಿದ್ದಾರೆ.
Congress MP Charanjit Singh Channi moves a Privilege Motion notice in Lok Sabha, against Prime Minister Narendra Modi over expunged portions of BJP MP Anurag Thakur's remarks tweeted by him on X along with the whole speech video.pic.twitter.com/pBUlWREFQg
ಪ್ರಧಾನಿ ಮೋದಿ ಅವರು, ನನ್ನ ಯುವ ಸಹೋದ್ಯೋಗಿ ಶ್ರೀ ಅನುರಾಗ್ ಠಾಕೂರ್ ಅವರ ಈ ಭಾಷಣವನ್ನು ಕೇಳಲೇಬೇಕು. ಇದು ಸತ್ಯಗಳು ಮತ್ತು ಹಾಸ್ಯದ ಪರಿಪೂರ್ಣ ಮಿಶ್ರಣ INDIA ಬಣದ ಕೊಳಕು ರಾಜಕೀಯವನ್ನು ಬಹಿರಂಗಪಡಿಸುತ್ತದೆ ಎಂದು ಬರೆದಿದ್ದಾರೆ.
This speech by my young and energetic colleague, Shri@ianuragthakuris a must hear. A perfect mix of facts and humour, exposing the dirty politics of the INDI Alliance.https://t.co/4utsqNeJqp
ಲೋಕಸಭೆಯಲ್ಲಿ ಮಂಗಳವಾರ ಬಜೆಟ್ ಚರ್ಚೆಯಲ್ಲಿ ಭಾಗವಹಿಸಿದ್ದ ಠಾಕೂರ್ ಅವರು ಜಾತಿ ಗಣತಿ ಬೇಡಿಕೆ ಕುರಿತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಜಾತಿ ಗೊತ್ತಿಲ್ಲದವರು ಜಾತಿಗಣತಿ ಬಗ್ಗೆ ಮಾತನಾಡುತ್ತಾರೆ ಎಂದು ಭಾಷಣದ ವೇಳೆ ಹೇಳಿದ್ದರು. (ಏಜೆನ್ಸೀಸ್​​)
ದೆಹಲಿ ಕೋಚಿಂಗ್ ಸೆಂಟರ್ ದುರ್ಘಟನೆ; ಎಂಸಿಡಿಗೆ ಛೀಮಾರಿ ಹಾಕಿ, ಅಧಿಕಾರಿಗಳಿಗೆ ಸಮನ್ಸ್​ ಜಾರಿ ಮಾಡಿದ ಕೋರ್ಟ್​
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twelve − 2 =
Remember me
