ಛತ್ತೀಸ್​ಗಢ:ಬಾಲಿವುಡ್​ ನಟ ರಣಬೀರ್ ಕಪೂರ್​ ಮತ್ತು ನಟಿ ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿರುವ ‘ಅನಿಮಲ್’​ ಚಿತ್ರವು ಇದೀಗ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದ್ದು, ಉತ್ತಮ ಪ್ರತಿಕ್ರಿಯೆ ಪಡೆಯುವ ಬದಲಿಗೆ ವಿವಾದದ ಅಲೆಯಲ್ಲಿ ಸಿಲುಕಿದೆ.
ಇದನ್ನೂ ಓದಿ:ಪಿಯು ಪಾಸಾದವರಿಗೆ ಬಾಲಭವನದಲ್ಲಿ ಉದ್ಯೋಗ; ಅರ್ಜಿ ಪಡೆಯಲು ಡಿ.26 ಕೊನೆಯ ದಿನ
ರಿಲೀಸ್ ಆದ ಮೊದಲ ದಿನದಿಂದಲೂ ಚಿತ್ರದಲ್ಲಿ ಹಿಂಸಾಚಾರ, ಸ್ತ್ರೀದ್ವೇಷ ತೋರಿಸಲಾಗಿದೆ ಎಂಬ ಆರೋಪಗಳು ಸಿನಿಮಾ ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವ್ಯಕ್ತವಾಗುತ್ತಿದೆ. ಸದ್ಯ ಈ ವಿಚಾರ ಇದೀಗ ರಾಜ್ಯಸಭೆಯಲ್ಲೂ ಕೇಳಿಬಂದಿದ್ದು, ಸಂಸದರೊಬ್ಬರು ಚಿತ್ರವನ್ನು ಖಂಡಿಸಿ ಮಾತನಾಡಿದ್ದಾರೆ.
ಭಾರೀ ಟೀಕೆಗಳಿಗೆ ಗುರಿಯಾಗಿರುವ ರಣಬೀರ್​ ಸಿನಿಮಾ ಇದೀಗ ರಾಜಕೀಯ ವಲಯದಿಂದಲೂ ನೆಗಟಿವ್ ಪ್ರತಿಕ್ರಿಯೆ ಪಡೆದುಕೊಂಡಿದೆ. ಚಿತ್ರದ ಕುರಿತು ರಾಜ್ಯಸಭೆಯಲ್ಲಿ ಧ್ವನಿ ಎತ್ತಿದ ಕಾಂಗ್ರೆಸ್ ಸಂಸದೆ ರಂಜೀತ್ ರಂಜನ್, ಇದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ:ಮೂರು ರಾಜ್ಯಗಳಲ್ಲಿ ಯಾರಾಗಲಿದ್ದಾರೆ ಸಿಎಂ?: ವೀಕ್ಷಕರ ನೇಮಕಕ್ಕೆ ಬಿಜೆಪಿ ಸಜ್ಜು
ಈ ಸಿನಿಮಾದಲ್ಲಿ ಸ್ತ್ರೀದ್ವೇಷ, ಹಿಂಸಾಚಾರವನ್ನು ಚಿತ್ರಿಸಲಾಗಿದೆ ಎಂದು ಕಳವಳ ವ್ಯಕ್ತಪಡಿಸಿದ ಸಂಸದೆ,  “ಸಿನಿಮಾ ಎನ್ನುವುದು ಸಮಾಜಕ್ಕೆ ಕನ್ನಡಿ. ನಾವೆಲ್ಲರೂ ಚಲನಚಿತ್ರಗಳ ನೋಡುತ್ತ ಬೆಳೆದಿದ್ದೇವೆ. ಸಮಾಜದ ಮೇಲೆ ಸಿನಿಮಾದ ಪ್ರಭಾವವಿದೆ, ಅದರಲ್ಲೂ ವಿಶೇಷವಾಗಿ ಯುವಜನತೆಯಲ್ಲಿ. ಇತ್ತೀಚಿನ ದಿನಗಳಲ್ಲಿ ‘ಕಬೀರ್’ (ಸಿಂಗ್), ‘ಪುಷ್ಪ’ ಮತ್ತು ಈಗ ‘ಅನಿಮಲ್’ ಚಿತ್ರಗಳು ಪ್ರೇಕ್ಷಕರ ಎದುರು ಬಂದಿವೆ” ಎಂದರು.
“ನನ್ನ ಮಗಳು ಮತ್ತು ಇತರೆ ಮಕ್ಕಳು ಸಿನಿಮಾವನ್ನು ವೀಕ್ಷಿಸುತ್ತಿದ್ದರು. ಈ ವೇಳೆ ಚಿತ್ರದ ಮೊದಲಾರ್ಧದಲ್ಲಿ ಅಳುತ್ತಾ ಥಿಯೇಟರ್‌ನಿಂದ ಹೊರಬಂದಿದ್ದಾರೆ. ಹಿಂಸೆ ಮತ್ತು ಸ್ತ್ರೀದ್ವೇಷದ ಚಿತ್ರದ ಸಮರ್ಥನೆಯು ನಾಚಿಕೆಗೇಡಿನ ಸಂಗತಿ” ಎಂದು ರಂಜೀತ್ ಆರೋಪಿಸಿದ್ದಾರೆ,(ಏಜೆನ್ಸೀಸ್).
‘NTR31’: ಜೂ. ಎನ್​ಟಿಆರ್​ ಸಿನಿಮಾ ಬಗ್ಗೆ ಪ್ರಶಾಂತ್ ನೀಲ್ ಕೊಟ್ರು ಸುಳಿವು!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:13 − 6 =
Remember me
