ನವದೆಹಲಿ:ಇಂದು ಕಾಂಗ್ರೆಸ್​ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿಯವರು ರಾಜ್ಯಸಭಾ ಸದಸ್ಯರೊಂದಿಗೆ ವರ್ಚ್ಯುವಲ್​ ಮೀಟಿಂಗ್​ ನಡೆಸಿದ್ದಾರೆ.
ಆದರೆ ಈ ಸಭೆಯಲ್ಲೂ ಮತ್ತೆ ರಾಹುಲ್​ ಗಾಂಧಿಯವರೇ ಕಾಂಗ್ರೆಸ್​ ಅಧ್ಯಕ್ಷರಾಗಬೇಕು ಎಂಬ ಬೇಡಿಕೆಯನ್ನು ಬಹುತೇಕ ನಾಯಕರು ಮುಂದಿಟ್ಟಿದ್ದಾರೆ.ಕಾಂಗ್ರೆಸ್​ ಹಿರಿಯ ನಾಯಕ, ರಾಜ್ಯಸಭಾ ಎಂಪಿ ದಿಗ್ವಿಜಯ ಸಿಂಗ್​ ಅವರು ಸಭೆಯಲ್ಲಿ ಮೊದಲು ರಾಹುಲ್​ ಗಾಂಧಿ ಮತ್ತೆ ಪಕ್ಷದ ಜವಾಬ್ದಾರಿ ವಹಿಸಿಕೊಳ್ಳಲಿ ಎಂಬ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ.
ಸದ್ಯ ದೇಶದಲ್ಲಿ ಹೆಚ್ಚುತ್ತಿರುವ ಕೊವಿಡ್​-19 ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಈ ಸಭೆ ಕರೆಯಲಾಗಿತ್ತು. ಇದರಲ್ಲಿ ಮಾತನಾಡಿದ ದಿಗ್ವಿಜಯ ಸಿಂಗ್​ ಅವರು, ಕೇಂದ್ರ ಸರ್ಕಾರದ ವಿಫಲತೆಗಳನ್ನು ರಾಹುಲ್​ ಗಾಂಧಿಯವರು ಎತ್ತಿ ತೋರಿಸುತ್ತಿದ್ದಾರೆ. ಅವರೇ ಮತ್ತೊಮ್ಮೆ ಪಕ್ಷದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿ ಎಂದು ಹೇಳಿದ್ದಾರೆ.ಇದನ್ನೂ ಓದಿ:ಸುರೇಶ್​ ರೈನಾ ಭಾರತ ಪರ ಪದಾರ್ಪಣೆ ಮಾಡಿ 15 ವರ್ಷ, ಪತ್ನಿಯಿಂದ ವಿಶೇಷ ಸಂದೇಶ
ದಿಗ್ವಿಜಯ್​ ಸಿಂಗ್​ ಅವರ ಮಾತಿಗೆ, ರಾಜ್ಯಸಭಾ ಎಂಪಿಗಳಾದ ಶಕ್ತಿಸಿನ್ಹ್​ ಗೋಹಿಲ್​, ನೀರಜ್​ ಡಾಂಗಿ ಮತ್ತಿತರರೂ ಧ್ವನಿಗೂಡಿಸಿದ್ದಾರೆ.
ಈ ಹಿಂದೆ ಜು.11ರಂದು ಲೋಕಸಭಾ ಸಂಸದರ ಜತೆಗೂ ಸೋನಿಯಾ ಗಾಂಧಿ ಸಭೆ ನಡೆಸಿದ್ದರು. ಆಗ ಲೋಕಸಭಾ ಸದಸ್ಯರೂ ಕೂಡ ಇದೇ ಹೇಳಿದ್ದರು.
ಸೋನಿಯಾಗಾಂಧಿಯವರ ಮಧ್ಯಂತರ ಅಧ್ಯಕ್ಷ ಸ್ಥಾನದ ಅವಧಿ ಆಗಸ್ಟ್​ 10ರಂದು ಮುಕ್ತಾಯಗೊಳ್ಳಲಿದೆ. ಅದರ ನಂತರ ಮುಂದೇನು ಎಂಬ ಪ್ರಶ್ನೆ ಶುರುವಾಗಿದ್ದು, ರಾಹುಲ್​ ಗಾಂಧಿಯವರೇ ಮತ್ತೆ ಅಧ್ಯಕ್ಷರಾಗುವರಾ ಎಂಬ ಕುತೂಹಲವೂ ಶುರುವಾಗಿದೆ.ಆದರೆ ರಾಹುಲ್​ ಗಾಂಧಿ ಮಾತ್ರ ಈ ವಿಚಾರದ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನೂ ನೀಡುತ್ತಿಲ್ಲ. (ಏಜೆನ್ಸೀಸ್​)
ಸರ್ಕಾರಿ ಬಂಗಲೆಗೆ ಪ್ರಿಯಾಂಕಾ ಗಾಂಧಿ ಗುಡ್‌ಬೈ- ವಿವಾದಕ್ಕೆ ಅಂತ್ಯ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × two =
Remember me
