ನವದೆಹಲಿ :ಪಂಜಾಬ್​ ಸಿಎಂ ಕ್ಯಾಪ್ಟನ್​ ಅಮರೀಂದರ್​ ಸಿಂಗ್ ಬಗ್ಗೆ ಸಿಡಿಮಿಡಿಗೊಂಡಿರುವ ಮಾಜಿ ರಾಜ್ಯ ಸಚಿವ ನವಜೋತ್​ ಸಿಂಗ್​ ಸಿಧು ಅವರು ಇಂದು ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದರು. ಈ ಬಗ್ಗೆ ಖುದ್ದು ಸಿಧು ಅವರು, ಪ್ರಿಯಾಂಕಾರೊಂದಿಗೆ ನಿಂತಿರುವ ಫೋಟೋ ಟ್ವೀಟ್​ ಮಾಡಿ ತಿಳಿಸಿದ್ದಾರೆ.
ಈ ಸಭೆಯ ಬಗ್ಗೆ ನಿನ್ನೆ ರಾಹುಲ್​ ಗಾಂಧಿ ಅವರನ್ನು ಕೇಳಿದಾಗ, ಯಾವುದೇ ಮೀಟಿಂಗ್​ ಇಲ್ಲ ಎಂದಿದ್ದರು ಎನ್ನಲಾಗಿದೆ. ಇದೀಗ ಪ್ರಿಯಾಂಕಾ ಅವರೊಂದಿಗೆ ‘ದೀರ್ಘ ಸಭೆ’ ನಡೆಸಿದ್ದಾಗಿ ಕಾಂಗ್ರೆಸ್​ ನಾಯಕ ಹಾಗೂ ಮಾಜಿ ಕ್ರಿಕೆಟಿಗ ಸಿಧು ಹೇಳಿದ್ದಾರೆ. ಅವರ ತಂಡದ ಪ್ರಕಾರ 4 ಗಂಟೆಗಳ ಕಾಲ ಈರ್ವರ ನಡುವೆ ಮಾತುಕತೆ ನಡೆದಿದೆ. ಆದರೆ ಸಭೆಯ ಮುಖ್ಯಾಂಶಗಳೇನೆಂದು ಇನ್ನೂ ತಿಳಿದುಬಂದಿಲ್ಲ.
ಇದನ್ನೂ ಓದಿ:ರಿಯಲ್ ಎಸ್ಟೇಟ್ ಉದ್ಯಮಿ ಪ್ರಭಾಕರ್ ರೆಡ್ಡಿ ಆತ್ಮಹತ್ಯೆಗೆ ಯತ್ನ
ಮುಂದಿನ ವರ್ಷ ವಿಧಾನಸಭಾ ಚುನಾವಣೆ ಎದುರಿಸಲಿರುವ ಪಂಜಾಬ್​ನ ರಾಜಕೀಯ ಬೆಳವಣಿಗೆಗಳು ಕುತೂಹಲಕಾರಿಯಾಗಿವೆ. ಪಂಜಾಬಿನಲ್ಲಿ ಸಿಎಂ ಅಮರಿಂದರ್​ ಸಿಂಗ್​ ಬಗ್ಗೆ ಪಕ್ಷದ ಕೆಲವು ನಾಯಕರಲ್ಲಿ ಮೂಡಿರುವ ಅಸಮಾಧಾನವನ್ನು ನೀಗಿಸಲು ಪ್ರಿಯಾಂಕಾ ಮತ್ತು ರಾಹುಲ್​ ಗಾಂಧಿ ಪ್ರಯತ್ನಿಸುತ್ತಿದ್ದಾರೆ. ಪಂಜಾಬಿನ ಕಾಂಗ್ರೆಸ್​ ಶಾಸಕರು ಮತ್ತು ಸಂಸದರ ಅಭಿಪ್ರಾಯಗಳನ್ನು ಕಲೆಹಾಕಲು ಮೂವರು ಹಿರಿಯ ನಾಯಕರ ತಂಡ ರಚಿಸಲಾಗಿದೆ. ಈ ತಂಡವು ರಾಜ್ಯ ಸರ್ಕಾರ ಮತ್ತು ಪಕ್ಷದ ರಾಜ್ಯ ಘಟಕ ಎರಡರಲ್ಲೂ ಬದಲಾವಣೆಗಳನ್ನು ಮಾಡಲು ಸೂಚಿಸಿದೆ ಎನ್ನಲಾಗಿದೆ.(ಏಜೆನ್ಸೀಸ್)
ಐಸ್​ಕ್ರೀಂನಲ್ಲಿ ಇಲಿ ಪಾಷಾಣ ಬೆರೆಸಿದ ಕಿರಾತಕ! ಗಂಡಹೆಂಡತಿ ಜಗಳಕ್ಕೆ ಮಕ್ಕಳಿಗೆ ಸಜೆ!

ಕಾಂಗ್ರೆಸ್​ ಸೇರುವ ಬಗ್ಗೆ ಜೆಡಿಎಸ್​ ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 1 =
Remember me
