ನವದೆಹಲಿ:ಸದ್ಯ ರಾಜಸ್ಥಾನ ರಾಜಕೀಯದ ಮೇಲೆಯೇ ಎಲ್ಲರ ಕಣ್ಣು ನೆಟ್ಟಿದೆ. ಅದರಲ್ಲೂ ರಾಜಕೀಯ ಪಕ್ಷಗಳಂತೂ ಸೂಕ್ಷ್ಮವಾಗಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸುತ್ತಿವೆ.
ಇದೀಗ ಆಮ್​ ಆದ್ಮಿ ಪಕ್ಷವೂ ಕೂಡ(ಆಪ್​) ಸಿಕ್ಕಿದ್ದೇ ಅವಕಾಶ ಎಂದು ಕಾಂಗ್ರೆಸ್​ನ್ನು ಅಪಹಾಸ್ಯ ಮಾಡಿದೆ.ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವೇ ಇಲ್ಲ. ಕೊನೇ ಉಸಿರು ಎಳೆಯುತ್ತಿದೆ. ಸದ್ಯ ವೆಂಟಿಲೇಟರ್​​ನಲ್ಲಿ ಇದೆ ಎಂದು ಆಪ್​ ಶಾಸಕ ಮತ್ತು ರಾಷ್ಟ್ರೀಯ ವಕ್ತಾರ ರಾಘವ್​ ಚಧಾ ವ್ಯಂಗ್ಯವಾಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿದ ಅವರು, ಈ ಕೊವಿಡ್​-19 ಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಆಸ್ಪತ್ರೆಗಳಲ್ಲಿ ಐಸಿಯು ಬೆಡ್​ಗಳನ್ನು ಹೆಚ್ಚಿಸುವ ಬಗ್ಗೆ, ಕರೊನಾ ಚೇತರಿಕೆ ಪ್ರಮಾಣ ಹೆಚ್ಚಿಸುವ ಬಗ್ಗೆ ಯೋಚನೆ ಮಾಡುತ್ತಿವೆ. ಎಲ್ಲರೂ ಒಗ್ಗಟ್ಟಾಗಿ ಕರೊನಾ ವಿರುದ್ಧ ಹೋರಾಟ ನಡೆಸುತ್ತಿವೆ. ಆದರೆ ರಾಜಸ್ಥಾನದಲ್ಲಿ ಶಾಸಕರ ಖರೀದಿ, ಮಾರಾಟ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.ರಾಜಸ್ಥಾನದಲ್ಲಿ ಕಾಂಗ್ರೆಸ್​ ಅತ್ಯಂತ ಕೆಟ್ಟ ರಾಜಕಾರಣ ನಡೆಸುತ್ತಿದೆ. ಇದರಿಂದ ದೇಶದ ಭವಿಷ್ಯಕ್ಕೆ ಏನಾದರೂ ಉಪಯೋಗ ಇದೆಯಾ ಎಂದು ಪ್ರಶ್ನಿಸಿದ್ದಾರೆ.ಇದನ್ನೂ ಓದಿ:ಬೆಡ್​ ಬಾಕ್ಸ್​ನಲ್ಲಿ ಬಿದ್ದ 84ವರ್ಷದ ಅಜ್ಜಿ ಬದುಕುಳಿಯಲು ಕಾರಣವಾಯ್ತು ಸಿಸಿಟಿವಿ…!
15 ವರ್ಷ ಇತಿಹಾಸ ಇರುವ ಕಾಂಗ್ರೆಸ್ ಪಕ್ಷ ಇದೀಗ ವೆಂಟಿಲೇಟರ್​​ನಲ್ಲಿದೆ. ಈ ಪಕ್ಷವನ್ನು ಪ್ಲಾಸ್ಮಾ ಥೆರಪಿಯಾಗಲಿ, ಹೈಡ್ರೋಕ್ಸಿಕ್ಲೊರೊಕ್ವಿನ್​ ಆಗಲಿ ಉಳಿಸಲು ಸಾಧ್ಯವಿಲ್ಲ ಎಂದಿದ್ದಾರೆ.ಜನರು ತಮ್ಮ ಮತವನ್ನು ಕಾಂಗ್ರೆಸ್​ಗೆ ಕೊಡುತ್ತಾರೆ. ಆ ಪಕ್ಷ ಅಧಿಕಾರವನ್ನು ಬಿಜೆಪಿಗೆ ಮಾರಾಟ ಮಾಡುತ್ತದೆ ಎಂದು ಕುಟುಕಿದ್ದಾರೆ.(ಏಜೆನ್ಸೀಸ್​)
200 ಅಡಿ ಆಳದ ಕಂದಕಕ್ಕೆ ಉರುಳಿದ ಕಾರು; 5 ಮಂದಿ ಸ್ಥಳದಲ್ಲೇ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − five =
Remember me
