ಜೈಪುರ:ರಾಜಸ್ಥಾನದಲ್ಲಿ ಸಿಎಂ ಅಶೋಕ್ ಗೆಹ್ಲೋಟ್​ ಮತ್ತು ಡಿಸಿಎಂ ಸಚಿನ್​ ಪೈಲಟ್​ ನಡುವೆ ಏನೂ ಸರಿಯಿಲ್ಲ ಎಂಬುದು ಬಹಿರಂಗವಾಗಿತ್ತು. ಆದರೆ ಸಚಿನ್​ ಪೈಲಟ್​ ಇದೀಗ ಕಾಂಗ್ರೆಸ್​ ವಿರುದ್ಧವೇ ತಿರುಗಿಬಿದ್ದಿದ್ದಾರಾ? ಅಥವಾ ಕಾಂಗ್ರೆಸ್​ ಸಚಿನ್​ ಪೈಲಟ್​ ಅವರನ್ನು ದೂರ ಇಡುತ್ತಿದೆಯಾ ಎಂಬ ಅನುಮಾನ ಮೂಡುವ ಘಟನೆಯೊಂದು ರಾಜಸ್ಥಾನದಲ್ಲಿ ನಡೆದಿದೆ.
ತನಗೆ 30 ಶಾಸಕರ ಬೆಂಬಲ ಇದೆ ಎಂದು ದೆಹಲಿಗೆ ತೆರಳಿದ್ದ ಸಚಿನ್​ ಪೈಲಟ್​​ ಅವರನ್ನು ಕಾಂಗ್ರೆಸ್​ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಭೇಟಿ ಆಗಲಿಲ್ಲ. ಬದಲಿಗೆ ವಾಪಸ್​ ಜೈಪುರಕ್ಕೆ ತೆರಳಿ, ಇಂದು ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಹಾಜರಾಗುವಂತೆ ಸೂಚಿಸಿದ್ದರು. ಆದರೆ ಸಚಿನ್​ ಪೈಲಟ್​ ಇಂದು ಸಭೆಯಲ್ಲಿ ಪಾಲ್ಗೊಳ್ಳಲಿಲ್ಲ.ಇದನ್ನೂ ಓದಿ:ಹಳ್ಳಿಗಳಲ್ಲೂ ಕರೊನಾ ದಾಂಗುಡಿ? ಬೆಂಗಳೂರು ತೊರೆಯುವವರ ಸಂಖ್ಯೆ ಹೆಚ್ಚಳ
ಇತ್ತ ಇಂದು ಬೆಳಗ್ಗೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಮತ್ತು ಅವರ ಬೆಂಬಲಿಗ ಶಾಸಕರು ವಿಜಯದ ನಗೆ ಬೀರಿದ್ದಾರೆ. ತಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶ ಸಾರಿದ್ದಾರೆ.
ಆದರೆ ಇದೇ ಹೊತ್ತಲ್ಲಿ ರಾಜಸ್ಥಾನದ ಕಾಂಗ್ರೆಸ್​ ಪ್ರಧಾನ ಕಚೇರಿಯ ಹೊರಭಾಗದಲ್ಲಿದ್ದ ಸಚಿನ್​ ಪೈಲಟ್​ ಅವರ ಪೋಸ್ಟರ್​​ನ್ನು ಅಲ್ಲಿಂದ ತೆಗೆಯಲಾಗಿದೆ. ಈ ಬೆಳವಣಿಗೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.ರಾಜಸ್ಥಾನ ಕಾಂಗ್ರೆಸ್​ ಅಧ್ಯಕ್ಷರೂ ಆಗಿದ್ದ ಸಚಿನ್​ ಪೈಲಟ್​ ಅವರ ಪೋಸ್ಟರ್​​ಗಳನ್ನೆಲ್ಲ ಪ್ರಧಾನ ಕಚೇರಿ ಹೊರಭಾಗದಲ್ಲಿ ದೊಡ್ಡದಾಗಿ ಹಾಕಲಾಗಿತ್ತು. ಆದರೆ ಅದನ್ನಿಂದು ಕೆಡವಲಾಗಿದೆ. ಕಾಂಗ್ರೆಸ್​ ಅತಿ ಶೀಘ್ರದಲ್ಲೇ ಬೇರೆ ಅಧ್ಯಕ್ಷನನ್ನು ನೇಮಕ ಮಾಡಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.ಇದನ್ನೂ ಓದಿ:ರಾಜಸ್ಥಾನ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್​ ಸರ್ಕಸ್​, ಕಾದು ನೋಡುತ್ತಿರುವ ಬಿಜೆಪಿ
ಇಂದು ಬೆಳಗ್ಗೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಚಿನ್​ ಪೈಲಟ್​ ಜತೆ 18 ಶಾಸಕರು ಗೈರಾಗಿದ್ದಾರೆ ಎನ್ನಲಾಗಿದೆ.ಇನ್ನು ರಾಜಸ್ಥಾನದಲ್ಲಿ ಕಾಂಗ್ರೆಸ್​ ಸರ್ಕಾರ ಬಹುಮತ ಕಳೆದುಕೊಂಡಿದೆ ಎಂದು ರಾಜ್ಯ ಬಿಜೆಪಿ ಪ್ರತಿಪಾದಿಸಿದೆ.ರಾಜಸ್ಥಾನ ಮುಖ್ಯಮಂತ್ರಿ ಹುದ್ದೆಗೆ ಸಚಿನ್​ ಪೈಲಟ್​ ಸೂಕ್ತವಾದ ವ್ಯಕ್ತಿ. ಆದರೆ ಅಶೋಕ್​ ಗೆಹ್ಲೋಟ್​ ಸಿಎಂ ಆದರು. ಮೊದಲಿನಿಂದಲೂ ಅವರಿಬ್ಬರ ಮಧ್ಯ ಭಿನ್ನಾಭಿಪ್ರಾಯ ಇತ್ತು. ಅದರ ಪರಿಣಾಮ ಈಗ ಕಾಣಿಸುತ್ತಿದೆ ಎಂದು ರಾಜ್ಯ ಬಿಜೆಪಿ ಮುಖ್ಯಸ್ಥ ಹೇಳಿದ್ದಾರೆ. (ಏಜೆನ್ಸೀಸ್​)
VIDEO: ಮಂಜುಗಡ್ಡೆಯನ್ನೇ ಕೇಕ್​​ನಂತೆ ಕಟ್​ ಮಾಡಿ ಬರ್ತ್​​ ಡೇ ಆಚರಿಸಿಕೊಂಡ ಯೋಧ; ಭಾವುಕರಾದ ನೆಟ್ಟಿಗರು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 − sixteen =
Remember me
