ನವದೆಹಲಿ:ಜನಾಂಗೀಯ ಘರ್ಷಣೆಗೆ ಒಳಗಾಗಿ ಸುಧಾರಿಸಿಕೊಳ್ಳುತ್ತಿರುವ ಮಣಿಪುರದಿಂದ ರಾಹುಲ್​ ಗಾಂಧಿ ನೇತೃತ್ವದಲ್ಲಿ ನಡೆಸಲು ಉದ್ಧೇಶಿಸಲಾಗಿದ್ದ ಭಾರತ್ ನ್ಯಾಯ್ ಯಾತ್ರೆಯನ್ನು ಮರುನಾಮಕರಣ ಮಾಡಿರುವುದಾಗಿ ಕಾಂಗ್ರೆಸ್​ ಪಕ್ಷ ತಿಳಿಸಿದೆ. ಭಾರತ್ ಜೋಡೋ ನ್ಯಾಯ್ ಯಾತ್ರೆ ಎಂದು ಮರುನಾಮಕರಣ ಮಾಡಲಾಗಿದೆ ಎಂದು ಎಐಸಿಸಿ ವಕ್ತಾರ ಜೈರಾಮ್​ ರಮೇಶ್​ ತಿಳಿಸಿದ್ದಾರೆ.
2022-23ರಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಭಾರತ್​ ಜೋಡೋ ಯಾತ್ರೆಯನ್ನು ಮುನ್ನಡೆಸಿದ ರಾಹುಲ್ ಈ ಬಾರಿ ಪೂರ್ವದಿಂದ ಪಶ್ಚಿಮಕ್ಕೆ ಯಾತ್ರೆಯನ್ನು ಮುನ್ನಡೆಸಲಿದ್ದಾರೆ. ಮಣಿಪುರದಿಂದ ಯಾತ್ರೆ ಆರಂಭವಾಗಿ ಗಾಂಧೀಜಿ ಜನ್ಮಸ್ಥಳ ವಾದ ಗುಜರಾತ್‌ನ ಪೋರಬಂದರ್‌ನಲ್ಲಿ ಮುಕ್ತಾಯಗೊಳ್ಳಲಿದೆ. ಯಾತ್ರೆ 15 ರಾಜ್ಯಗಳು ಮತ್ತು 100 ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದೆ ಎಂದು ತಿಳಿಸಿದ್ದಾರೆ.
'भारत जोड़ो न्याय यात्रा' का रूट मैप📍मणिपुर से मुंबई तक6700 किमी | 66 दिन | 110 जिलेpic.twitter.com/uSO6jGfY3i
ಇದನ್ನೂ ಓದಿ:ಔಟಾದಾಗ ಸಂಭ್ರಮಿಸಬೇಡಿ… ಎಲ್ಲರ ಗಮನ ಸೆಳೆಯುತ್ತಿದೆ ವಿರಾಟ್​ ಕೊಹ್ಲಿಯ ಈ ವಿಡಿಯೋ
ಭಾರತ್ ಜೋಡೋ ನ್ಯಾಯ್ ಯಾತ್ರೆಯು ಜನವರಿ 14ರಂದು ಇಂಫಾಲ್‌ನಿಂದ ಮಧ್ಯಾಹ್ನ 12.30 ಕ್ಕೆ ಪ್ರಾರಂಭವಾಗಲಿದೆ. ಇದು ಮಣಿಪುರ, ನಾಗಾಲ್ಯಾಂಡ್, ಅಸ್ಸಾಂ, ಅರುಣಾಂಚಲ್ ಪ್ರದೇಶ, ಮೇಘಾಲಯ ಮೂಲಕ ಹಾದುಹೋಗುತ್ತದೆ. ಇದು ಮಧ್ಯ ಭಾರತವನ್ನು ತಲುಪುವ ಮೊದಲು ಬಂಗಾಳವನ್ನು ತಲುಪುತ್ತದೆ.
ಪಕ್ಷದ ಹಿರಿಯ ನಾಯಕರ ಆರೋಗ್ಯದ ಕಾಳಜಿಯಂತೆ ಸಾರ್ವತ್ರಿಕ ಚುನಾವಣೆಯ ಸಮಯದ ನಿರ್ಬಂಧದಿಂದಾಗಿ ಬದಲಾವಣೆಯಾಗಿದೆ. ನಾವು ಇಂಡಿಯಾ ಮೈತ್ರಿಕೂಟದ ಎಲ್ಲಾ ಪಕ್ಷಗಳ ನಾಯಕರು, ಅವರ ಬೆಂಬಲಿಗರು, ಸಾರ್ವಜನಿಕರು ಮತ್ತು ಎನ್‌ಜಿಒಗಳನ್ನು ಯಾತ್ರೆಯಲ್ಲಿ ಭಾಗವಹಿಸಲು ಆಹ್ವಾನಿಸುತ್ತಿದ್ದೇವೆ ಎಂದು ಎಐಸಿಸಿ ವಕ್ತಾರ ಜೈರಾಮ್​ ರಮೇಶ್​ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − six =
Remember me
