ನವದೆಹಲಿ: ಕಾಂಗ್ರೆಸ್​ ಮುಖಂಡ, ವಕ್ತಾರ ರಾಜೀವ್​ ತ್ಯಾಗಿ ಅವರು ಇಂದು ಮೃತಪಟ್ಟಿದ್ದಾರೆ.ಇಂದು ಅವರು ಟಿವಿ ಕಾರ್ಯಕ್ರಮವೊಂದರಲ್ಲಿ ಚರ್ಚೆಯಲ್ಲಿ ಭಾಗವಹಿಸಿದ್ದರು. ಅದನ್ನು ಮುಗಿಸಿ ಬಂದವರು ಒಮ್ಮೆಲೆ ಅಸ್ವಸ್ಥರಾಗಿದ್ದಲ್ಲದೆ, ತಮ್ಮ ಮನೆ ವೈಶಾಲಿಯಲ್ಲಿ ಎಚ್ಚರತಪ್ಪಿ ಬಿದ್ದಿದ್ದಾರೆ.
ಅವರನ್ನು ಕೂಡಲೇ ಘಾಜಿಯಾಬಾದ್​​ನಲ್ಲಿರುವ ಯಶೋದಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೃದಯ ಸ್ತಂಭನಕ್ಕೆ ಒಳಗಾದ ರಾಜೀವ್​ ಅವರಿಗೆ ವೈದ್ಯರು ಚಿಕಿತ್ಸೆ ನೀಡಿದರೂ ಪ್ರಯೋಜನ ಆಗಲಿಲ್ಲ. ಇಂದು ಸಂಜೆ 5ಗಂಟೆಗೆ ಟಿವಿ ಡಿಬೇಟ್​​ನಲ್ಲಿ ಪಾಲ್ಗೊಳ್ಳುತ್ತಿರುವುದಾಗಿ ರಾಜೀವ್​ ಟ್ವೀಟ್​ ಮಾಡಿದ್ದರು. ಇದೇ ಅವರ ಕೊನೇ ಟ್ವೀಟ್​ ಆಗಿದೆ.ಇದನ್ನೂ ಓದಿ:ಡಿಜೆ ಹಳ್ಳಿ ಗಲಭೆ ಹೊಣೆಯನ್ನು ಪೊಲೀಸರ ತಲೆಗೆ ಕಟ್ಟಿದ ಕಾಂಗ್ರೆಸ್… ಇಡೀ ದಿನ ರಾಜಕೀಯ ಮೇಲಾಟ
ರಾಜೀವ್​ ತ್ಯಾಗಿ ಅವರ ನಿಧನಕ್ಕೆ ಪಕ್ಷ ತೀವ್ರ ದುಃಖ ವ್ಯಕ್ತಪಡಿಸಿದೆ. ನಿಜವಾದ ದೇಶಭಕ್ತನನ್ನು ಕಳೆದುಕೊಂಡಿದ್ದೇವೆ. ರಾಜೀವ್​ ಸಾವಿನ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತ ಕರುಣಿಸಲಿ ಎಂದು ಕಾಂಗ್ರೆಸ್​ ಟ್ವೀಟ್​ ಮಾಡಿದೆ.ಹಾಗೇ, ರಾಹುಲ್​ ಗಾಂಧಿ, ಪ್ರಿಯಾಂಕಾ ಗಾಂಧಿ. ಕೆ.ಸಿ.ವೇಣುಗೋಪಾಲ್​ ಸೇರಿ ಕಾಂಗ್ರೆಸ್​ನ ಹಲವು ಮುಖಂಡರು ಟ್ವೀಟ್​ ಮೂಲಕ ರಾಜೀವ್​ ತ್ಯಾಗಿ ನಿಧನಕ್ಕೆ ದುಃಖ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಮುಖಂಡ ಸಂಬಿತ್​ ಪಾತ್ರಾ ರಾಜೀವ್​ ನಿಧನದ ಸುದ್ದಿ ಕೇಳಿ ಶಾಕ್​ ಆಯಿತು ಎಂದಿದ್ದಾರೆ. (ಏಜೆನ್ಸೀಸ್​)
ನಾನು ಅವನಪ್ಪ ಅಂತ ಗೊತ್ತಾದ್ಮೇಲೂ ಯಾಕೆ ಪ್ರತಿಕ್ರಿಯಿಸಲಿಲ್ಲ? ರಿಯಾಗೆ ಪ್ರಶ್ನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 15 =
Remember me
