ನವದೆಹಲಿ:ಬಿಜೆಪಿ ಪಕ್ಷದ ಚಿಹ್ನೆ ಮತ್ತು ಜಿ-20 ಲಾಂಛನ ಒಂದೇ ರೀತಿ ಇದೆ ಎಂದು ಕಾಂಗ್ರೆಸ್​ ಆರೋಪಿಸಿದ್ದು ಹೊಸ ವಿವಾದವನ್ನು ಹುಟ್ಟುಹಾಕಿದೆ.
’70 ವರ್ಷ ಹಿಂದೆ ನೆಹರು ಕಾಂಗ್ರೆಸ್ ಧ್ವಜವನ್ನು ಭಾರತದ ಧ್ವಜವನ್ನಾಗಿ ಮಾಡುವ ಪ್ರಸ್ತಾಪವನ್ನು ತಿರಸ್ಕರಿಸಿದ್ದರು. ಈಗ ಬಿಜೆಪಿ ಪಕ್ಷದ ಚಿಹ್ನೆ ಜಿ-20 ಸಭೆಯಲ್ಲಿ ಭಾರತದ ಅಧ್ಯಕ್ಷ ಸ್ಥಾನಕ್ಕೆ ಅಧಿಕೃತ ಲಾಂಛನವಾಗಿದೆ. ಮೋದಿ ಮತ್ತು ಬಿಜೆಪಿ ತಮ್ಮ ಪಕ್ಷದ ಪ್ರಚಾರ ನಡೆಸಲು ಸಿಗುವ ಎಲ್ಲಾ ಅವಕಾಶಗಳನ್ನು ನಾಚಿಕೆ ಬಿಟ್ಟು ಬಳಸುತ್ತಾರೆ’ ಎಂದು ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.
ಇದಾದ ಕೆಲವೇ ಕ್ಷಣಗಳಲ್ಲಿ ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ‘ಕಮಲ್ ನಾಥ್ ಅವರ ಹೆಸರಿನಿಂದ ಕಮಲ್ ಅವರನ್ನು ತೆಗೆದುಹಾಕುತ್ತೀರಾ?’ ಟ್ವೀಟ್ ಮಾಡಿದ್ದಾರೆ.
ಟ್ವೀಟ್​ನಲ್ಲಿ ‘ಕಮಲವು ನಮ್ಮ ರಾಷ್ಟ್ರೀಯ ಹೂವು. ಇದು ತಾಯಿ ಲಕ್ಷ್ಮಿಯ ಆಸನವೂ ಹೌದು. ನೀವು ನಮ್ಮ ರಾಷ್ಟ್ರೀಯ ಹೂವನ್ನು ವಿರೋಧಿಸುತ್ತೀರಾ? ನೀವು ಕಮಲ್ ನಾಥ್ ಅವರ ಹೆಸರಿನಿಂದ ಕಮಲ್ ಅನ್ನು ತೆಗೆದುಹಾಕುತ್ತೀರಾ? ಅದಲ್ಲದೇ ರಾಜೀವ್ ಎಂದರೆ ಕಮಲ. ಅವರ ಹೆಸರಲ್ಲಿ ನೀವು ಯಾವುದೇ ಅಜೆಂಡಾ ನೋಡುವುದಿಲ್ಲ ಎಂದು ಭಾವಿಸುತ್ತೇನೆ’ ಎಂದು ಪೂನಾವಾಲ ಬರೆದಿದ್ದಾರೆ.
ಮುಂದಿನ ವರ್ಷದ ಜಿ-20 ಸಭೆಯನ್ನು ಭಾರತ ಆಯೋಜಿಸಿದ್ದು ಅದಕ್ಕೆ ಸಂಬಂಧಿಸಿದ ಲಾಂಛನವನ್ನು ಪ್ರಧಾನಿ ಮೋದಿ ನಿನ್ನೆ (ನ.8) ಬೆಳಗ್ಗೆ ಬಿಡುಗಡೆ ಮಾಡಿದ್ದರು.
ಭಾರತದ G20 ಅಧ್ಯಕ್ಷತೆಯನ್ನು ವಹಿಸಿದ ಐತಿಹಾಸಿಕ ಸಂದರ್ಭದಲ್ಲಿ ದೇಶದ ನಾಗರಿಕರನ್ನು ಅಭಿನಂದಿಸಿದ ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ‘ಕಮಲ ಜಗತ್ತನ್ನು ಒಟ್ಟುಗೂಡಿಸುತ್ತಾ ಭಾರತದ ಸಾಂಸ್ಕೃತಿಕ ಪರಂಪರೆ ಮತ್ತು ನಂಬಿಕೆಯನ್ನು ಜಗತ್ತಿನಾದ್ಯಂತ ಪಸರಿಸುತ್ತಿದೆ. ಭಾರತವು ಈಗ G20 ನ ನಾಯಕತ್ವವನ್ನು ವಹಿಸಿಕೊಳ್ಳಲಿದೆ. ಇದು ಸ್ವಾತಂತ್ರ್ಯದ 75 ನೇ ವರ್ಷದಲ್ಲಿ ಭಾರತಕ್ಕೆ ಸಿಕ್ಕಿದ ಅದ್ಭುತ ಅವಕಾಶ’ ಎಂದು ಹೇಳಿದ್ದರು.(ಏಜೆನ್ಸೀಸ್​)
Lotus happens to be our National Flower! It also happens to be the aasan of Maa Lakshmi – Are you opposed to our national flower? Will you remove Kamal from name of Kamal Nath?Btw Rajiv also means Kamal ! Hope you see no agenda there !!!pic.twitter.com/Y62kiHkjxR
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
