ತೆಲಂಗಾಣ:ಭಾನುವಾರ (ಡಿ.5) ನಡೆದ ನಾಲ್ಕು ರಾಜ್ಯಗಳ 2023ರ ವಿಧಾನಸಭೆ ಚುನಾವಣಾ ಫಲಿತಾಂಶಗಳ ಪೈಕಿ ತೆಲಂಗಾಣದಲ್ಲಿ ಕಾಂಗ್ರೆಸ್ ಭರ್ಜರಿ​ ಜಯವನ್ನು ದಾಖಲಿಸಿತು. ವಿಧಾನಸಭಾ ಚುನಾವಣೆಯಲ್ಲಿ ಡಿ. ಶ್ರೀಧರ್ ಬಾಬು ಅವರ ಗೆಲುವಿನ ಸಂಭ್ರಮಾಚರಣೆಯಲ್ಲಿ ಮಾಡಲಾಗುತ್ತಿದ್ದ ಟ್ರ್ಯಾಕ್ಟರ್‌ ಸ್ಟಂಟ್ ಎಡವಟ್ಟಿನಿಂದ ಕಾಂಗ್ರೆಸ್ ಪಕ್ಷದ ಬೆಂಬಲಿಗರೊಬ್ಬರಿಗೆ ತೀವ್ರವಾಗಿ ಗಾಯವಾಗಿದ್ದು, ಸದ್ಯ ಆಸ್ಪತ್ರೆ ಪಾಲಾಗಿದ್ದಾರೆ.
ಇದನ್ನೂ ಓದಿ:ಬೆಂಗಳೂರು: ನೋಡ ನೋಡುತ್ತಿದ್ದಂತೆ ಧಗಧಗನೆ ಹೊತ್ತಿ ಉರಿದ ಕಾರು!
ಮಂಥನಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶ್ರೀಧರ್ ಬಾಬು ಚುನಾವಣಾ ಫಲಿತಾಂಶದಲ್ಲಿ ಮುನ್ನಡೆ ಸಾಧಿಸಿ, ಭರ್ಜರಿ ಗೆಲುವನ್ನು ದಾಖಲಿಸಿದರು. ಈ ಜಯವನ್ನು ಸಂಭ್ರಮಿಸಲು ಮುಂದಾದ ಕಾಂಗ್ರೆಸ್​ ಕಾರ್ಯಕರ್ತರು, ಟ್ರ್ಯಾಕ್ಟರ್‌ಗಳಲ್ಲಿ ವಿಜಯೋತ್ಸವ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಅನಿರೀಕ್ಷಿತ ಘಟನೆಯೊಂದು ಸಂಭವಿಸಿದ್ದು, ಟ್ರಾಕ್ಟರ್‌ ಉರುಳಿ ಓರ್ವ ಬೆಂಬಲಿಗ ಗಂಭೀರವಾಗಿ ಗಾಯಗೊಂಡಿದ್ದಾರೆ.
https://twitter.com/KP_Aashish/status/1731324890152866178?ref_src=twsrc%5Etfw%7Ctwcamp%5Etweetembed%7Ctwterm%5E1731324890152866178%7Ctwgr%5Ec44957aca0dd3208dac6e6b4c4e63c2ea851027b%7Ctwcon%5Es1_&ref_url=https%3A%2F%2Fwww.freepressjournal.in%2Findia%2Fwatch-congress-supporter-critically-injured-as-tractor-turns-turtle-while-celebrating-manthani-candidates-win-in-telangana
ಘಟನೆಯ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ವೇಗದಲ್ಲಿ ತೀಕ್ಷ್ಣವಾದ ಎಡ ತಿರುವು ತೆಗೆದುಕೊಳ್ಳುವ ಪ್ರಯತ್ನದ ವೇಳೆ ಟ್ರಾಕ್ಟರ್ ವ್ಯಕ್ತಿಯ ಮೇಲೆ ಉರುಳಿದೆ. ಸದ್ಯ ಗಾಯಗೊಂಡ ಬೆಂಬಲಿಗನನ್ನು ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆ ಕೊಡಿಸಲಾಗಿದೆ. ತೆಲಂಗಾಣದ ಮಂಥನಿ ಕ್ಷೇತ್ರದಲ್ಲಿ ಐಎನ್‌ಸಿಯ ಡಿ. ಶ್ರೀಧರ್ ಬಾಬು ಚುನಾವಣೆಯಲ್ಲಿ 1,03,822 ಮತಗಳಿಂದ ಜಯಗಳಿಸಿದ್ದು, ಬಿಆರ್‌ಎಸ್‌ನ ಮಧುಕರ್ ಅವರನ್ನು 72,442 ಮತಗಳಿಂದ ಮಣಿಸಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ನೋಡ ನೋಡುತ್ತಿದ್ದಂತೆ ಧಗಧಗನೆ ಹೊತ್ತಿ ಉರಿದ ಕಾರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + nine =
Remember me
