ನವದೆಹಲಿ: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಶಿಲಾನ್ಯಾಸಕ್ಕೆ ಇನ್ನು ಕೆಲವೇ ಗಂಟೆಗಳು ಉಳಿದಿವೆ. ಇಂಥ ಹೊತ್ತಲ್ಲಿ ಕಾಂಗ್ರೆಸ್ಸಿಗರಿಗೆ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರ ಸುದ್ದಿಗೋಷ್ಠಿ ನೆನಪಾಗಿದೆ! ಅಯೋಧ್ಯೆ ರಾಮಮಂದಿರ ಕ್ರೆಡಿಟ್ ನಮಗೂ ಒಂಚೂರು ಸಿಗಲಿ, ಚುನಾವಣಾ ರಾಜಕೀಯಕ್ಕೆ ಬೇಕಾಗುವುದೆಂಬ ಪ್ರಯತ್ನದಲ್ಲಿದ್ದಾರೆ ಕಾಂಗ್ರೆಸ್ಸಿಗರು!
ಭೂಮಿ ಪೂಜೆ ಮಾಡುತ್ತಿರುವಂತೆ ಬಿಜೆಪಿ ಭಾರಿ ರಾಜಕೀಯ ಲಾಭವಾಗಲಿದೆ ಎಂಬುದನ್ನು ಮನಗಂಡ ಕಾಂಗ್ರೆಸ್ಸಿಗರಿಗೆ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರ ಸುದ್ದಿಗೋಷ್ಠಿ ನೆನಪಾಗಿದೆ. 1986ರಲ್ಲಿ ರಾಮಜನ್ಮಭೂಮಿಯ ಬೀಗ ತೆರೆದು ದೇವರ ಪೂಜೆಗೆ ಅವಕಾಶ ಮಾಡಿ ನಂತರ ರಾಮಮಂದಿರ ನಿರ್ಮಾಣದ ಘೋಷಣೆಯನ್ನೂ ಮಾಡಿದ್ದಲ್ಲದೆ, ಶಿಲಾನ್ಯಾಸವನ್ನೂ ನೆರವೇರಿಸಿದ್ದರು. ಹಾಗೆ ರಾಜಕೀಯ ಲಾಭಕ್ಕೆ ಶ್ರೀರಾಮಮಂದಿರ ವಿಚಾರವನ್ನು ತಂದ ಅವರಿಗೆ 1989ರಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷದ ಸೋಲನ್ನು ನೋಡಬೇಕಾಗಿ ಬಂತು.
ಇದನ್ನೂ ಓದಿ:ಶ್ರೀರಾಮ ಮಂದಿರ ಭೂಮಿ ಪೂಜೆ ರಾಷ್ಟ್ರೀಯ ಏಕತೆಯ ಹಬ್ಬವಾಗಲಿ ಎಂದ ಕಾಂಗ್ರೆಸ್ !
ಆದರೆ ಕಾಂಗ್ರೆಸ್ಸಿಗರು ಈಗ ರಾಜೀವ್ ಗಾಂಧಿಯವ ಘೋಷಣೆ ಇತ್ಯಾದಿಯನ್ನು ನೆನಪಿಸುತ್ತ ರಾಮಮಂದಿರದ ಜಪ ಮಾಡಲಾರಂಭಿಸಿದ್ದಾರೆ. ನಿನ್ನೆಯಷ್ಟೇ ಪ್ರಿಯಾಂಕಾ ಗಾಂಧಿ ಹೇಳಿಕೆ ನೀಡಿದ್ದು, ಈ ಕಾರ್ಯಕ್ರಮ ರಾಷ್ಟ್ರದ ಏಕತೆಯ ಕಾರ್ಯಕ್ರಮವಾಗಲಿ ಎಂದು ಹಾರೈಸಿ ಗಮನಸೆಳೆದಿದ್ದರು. ಇನ್ನೊಂದೆಡೆ, ಮಧ್ಯಪ್ರದೇಶದ ಮಾಜಿ ಸಿಎಂ ಕಮಲನಾಥ್ ಅವರು ಹನುಮಾನ್ ಚಾಲೀಸಾ ಪಠಿಸುವಂತೆ ಹೇಳಿ ಗಮನಸೆಳೆದಿದ್ದಾರೆ. ಇವೆಲ್ಲವೂ ಈಗ ಕಾಂಗ್ರೆಸ್ಸಿಗರ ಕೊನೆಯ ಕ್ಷಣದ ರಾಜಕೀಯ ಲಾಭ ಗಿಟ್ಟಿಸಿಕೊಳ್ಳುವ ಕಸರತ್ತಿನಂತೆ ಭಾಸವಾಗತೊಡಗಿದೆ ಎಂಬ ಟೀಕೆ ವ್ಯಾಪಕವಾಗಿ ಕೇಳಿದೆ. (ಏಜೆನ್ಸೀಸ್)
ರಾಮಜನ್ಮಭೂಮಿಗೆ ಭೇಟಿ ನೀಡ್ತಿರೋ ಮೊದಲ ಪ್ರಧಾನಿ ನರೇಂದ್ರ ಮೋದಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
