ದೇಶದ ಬಹುತೇಕ ಉಪಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದರೂ ಹರ್ಯಾಣಾದ ಬರೋಡಾದಲ್ಲಿ ಕಮಲ ಬಾಡಿದೆ. ಇಲ್ಲಿ ಜಯ ಕೈ ಪಾಲಿಗೆ ದಕ್ಕಿದೆ.
ಹರ್ಯಾಣದ ಸೋನಿಪತ್ ಜಿಲ್ಲೆಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಇಂದು ರಾಜ್​ ನರ್ವಾಲ್​ ಅವರು ಬಿಜೆಪಿಯ ಯೋಗೇಶ್ವರ್​ ದತ್​ (ಒಲಿಂಪಿಯನ್ ಕುಸ್ತಿಪಟು)ಅವರನ್ನು ಸೋಲಿಸಿದ್ದಾರೆ.ಈ ವಿಧಾನಸಭೆಯ ಕಾಂಗ್ರೆಸ್​ ಶಾಸಕರಾಗಿದ್ದ ಶ್ರೀಕೃಷ್ಣ ಹೂಡಾ ನಿಧನ ಹೊಂದಿದ ಕಾರಣ ಚುನಾವಣೆ ನಡೆಸಲಾಗಿತ್ತು. ಯೋಗೇಶ್ವರ್​ ದತ್​ ಅವರು 2019ರ ವಿಧಾನಸಭಾ ಚುನಾವಣೆಯಲ್ಲಿ ಕೂಡ ಶ್ರೀಕೃಷ್ಣ ಹೂಡಾ ವಿರುದ್ಧ ಸೋತಿದ್ದರು. ಇದೀಗ ಮತ್ತೆ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸೋಲುಂಡಿದ್ದಾರೆ.
ಕೃಷಿ ಮಸೂದೆ ಪಾಸ್ ಆದಾಗ ಅತಿ ಹೆಚ್ಚು ಪ್ರತಿಭಟನೆ ಆಗಿದ್ದು ಹರ್ಯಾಣ ಮತ್ತು ಪಂಜಾಬ್​ಗಳಲ್ಲಿ. ಕಾಂಗ್ರೆಸ್ ಗೆಲುವಿಗೆ ಈ ಬಿಲ್ ಪಾಸ್​ ಆಗಿದ್ದು ವರವಾಯಿತು. ಬಿಜೆಪಿಗೆ ಅದೇ ಮುಳ್ಳಾಯಿತು ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.
ಕಳೆದ ವರ್ಷ ವಿಧಾನಸಭಾ ಚುನಾವಣೆಯ ಪೂರ್ವ ಬಿಜೆಪಿ ಸೇರ್ಪಡೆಯಾಗಿದ್ದ, 2012ರ ಒಲಿಂಪಿಕ್ ಕಂಚಿನ ಪದಕ ವಿಜೇತ ಕುಸ್ತಿಪಟು ದತ್​ ಅವರಿಗೆ ಈ ಬಾರಿಯೂ ನಿರಾಸೆಯೇ ಆಗಿದೆ. ಕಾಂಗ್ರೆಸ್​ ಪರ ಮಾಜಿ ಮುಖ್ಯಮಂತ್ರಿ ಭೂಪಿಂದರ್​ ಸಿಂಗ್​ ಹೂಡಾ, ಅವರ ಪುತ್ರ, ಮಾಜಿ ಸಂಸದ ದೀಪೇಂದರ್​ ಸಿಂಗ್ ಹೂಡಾ, ರಾಜ್ಯ ಕಾಂಗ್ರೆಸ್ ಮುಖ್ಯಸ್ಥರಾದ ಕುಮಾರಿ ಸೆಲ್ಜಾ ಭರ್ಜರಿ ಪ್ರಚಾರ ನಡೆಸಿದ್ದರು. (ಏಜೆನ್ಸೀಸ್​)
ಪಟಾಕಿ ಹೊಡೆಯಿರಿ, ರಾಮ ಬಂದಿದ್ದನ್ನು ಸಂಭ್ರಮಿಸಿ! ಪಟಾಕಿ ಬ್ಯಾನ್​ ಮಾಡಲಾಗದು ಎಂದು ಸಿಎಂ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
