ಭೋಪಾಲ್​:ರೈತ ಹೋರಾಟಕ್ಕೆ ಬೆಂಬಲ ಸೂಚಿಸಿರುವ ಕಾಂಗ್ರೆಸ್​ ಇದೀಗ ಮತ್ತೊಂದು ಹಾಸ್ಯಸ್ಪದ ಕೆಲಸ ಮಾಡಿ, ಆಡಳಿತ ಪಕ್ಷದಿಂದ ವ್ಯಂಗ್ಯವಾಡಿಸಿಕೊಂಡಿದೆ. ಮಧ್ಯಪ್ರದೇಶ ಕಾಂಗ್ರೆಸ್ ಟ್ರ್ಯಾಕ್ಟರ್​ ಮೆರವಣಿಗೆ ಆಯೋಜನೆ ಮಾಡಿದ್ದು ಆದರೆ ಮೆರವಣಿಗೆಯ ದಿನ ಪ್ಲಾಸ್ಟಿಕ್​ ಟ್ರ್ಯಾಕ್ಟರ್​ ಪ್ರದರ್ಶಿಸುವ ಮೂಲಕ ನಗೆಪಾಟಲಿಗೆ ಸಿಲುಕಿಕೊಂಡಿದೆ.
ಇದನ್ನೂ ಓದಿ:ಸರ್ಪೈಸ್​ ನೀಡಲು ಮನೆಗೆ ಬಂದ ಗಂಡನಿಗೆ ಕಾದಿತ್ತು ಬಿಗ್​ ಶಾಕ್​! ಹೆಂಡತಿಯ ಇನ್ನೊಂದು ರೂಪ ನೋಡಿದ ಗಂಡ ಮಾಡಿದ್ದೇನು?
ಮಧ್ಯಪ್ರದೇಶದಲ್ಲಿ ಸೋಮವಾರದಂದು ವಿಧಾನಸಭಾ ಅಧಿವೇಶನ ನಿಗದಿ ಮಾಡಲಾಗಿತ್ತು. ಇದೇ ಸಮಯದಲ್ಲಿ ಟ್ರ್ಯಾಕ್ಟರ್​ ಮೆರವಣಿಗೆ ಮಾಡಿ, ವಿಧಾನಸಭೆಗೆ ಮುತ್ತಿಗೆ ಮಾಡಲು ಕಾಂಗ್ರೆಸ್​ ನಿರ್ಧರಿಸಿತ್ತು. ಆದರೆ ಅಧಿವೇಶನವನ್ನು ಮುಂದೂಡಲಾಗಿದೆ. ಅದೇ ಹಿನ್ನೆಲೆಯಲ್ಲಿ ಮೆರವಣಿಗೆಯನ್ನೂ ಮುಂದೂಡಲಾಗಿದೆ. ಆದರೆ ಮಕ್ಕಳ ಆಟಿಕೆಯ ಟ್ರ್ಯಾಕ್ಟರ್​ಗಳನ್ನು ಹಿಡಿದ ಕಾಂಗ್ರೆಸ್​ ನಾಯಕರು ವಿಧಾನಸಭೆಯ ಗಾಂಧಿ ಪ್ರತಿಮೆ ಮುಂದೆ ಕುಳಿತು ಆಟಿಕೆ ಪ್ರದರ್ಶಿಸಿದ್ದಾರೆ.
ಇದನ್ನೂ ಓದಿ:ಇಡಿ ಕಚೇರಿಯೀಗ ಬಿಜೆಪಿ ಕಾರ್ಯಾಲಯ! ಇಡಿ ಕಚೇರಿ ಮುಂದೆ ಬಿಜೆಪಿ ಪೋಸ್ಟರ್​ ಹಾಕಿದ ಶಿವಸೇನೆ
ಕಾಂಗ್ರೆಸ್​ನ ಈ ವಿಶೇಷ ಪ್ರದರ್ಶನವನ್ನು ಕಂಡ ಬಿಜೆಪಿ ವ್ಯಂಗ್ಯವಾಡಿದೆ. ಕಾಂಗ್ರೆಸ್​ನ ಹಿರಿಯ ಮಗ ರಾಹುಲ್​ ಗಾಂಧಿ ವಿದೇಶಕ್ಕೆ ಹೋಗಿ ಕುಳಿತಿದ್ದಾರೆ. ಅವರ ಮನವೊಲಿಸಲಿ ಮತ್ತು ವಾಪಾಸು ಕರೆಸಲು ಕಮಲ ನಾಥ ಅವರು ಹೊಸ ಮಾರ್ಗ ಕಂಡುಕೊಂಡಿದ್ದಾರೆ. ಈ ರೀತಿ ಆಟಿಕೆ ತೋರಿಸಿದರೆ ಆಲೂಗಡ್ಡೆಯನ್ನು ಇಷ್ಟಪಡುವ ರಾಹುಲ್​ ಗಾಂಧಿ ಅವರು ಇದನ್ನೂ ಇಷ್ಟ ಪಡುತ್ತಾರೆ ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ವ್ಯಂಗ್ಯವಾಡಿದ್ದಾರೆ. (ಏಜೆನ್ಸೀಸ್​)
ಡಾಕ್ಟರ್​ ಕನಸು ಕಟ್ಟಿದ್ದ ಯುವತಿ ಆತ್ಮಹತ್ಯೆ; ಶೇ. 96 ಅಂಕ ತೆಗೆದರೂ ಸಿಗಲಿಲ್ಲ ಸರ್ಕಾರಿ ಸೀಟು!

2021ರಲ್ಲಿ ಭೂಮಿಯನ್ನ ಡ್ರ್ಯಾಗನ್​ ವಶಪಡಿಸಿಕೊಳ್ಳತ್ತೆ! ಭೀಕರವಾಗಿರುತ್ತೆ ಈ ವರ್ಷ ಎಂದ ಬಲ್ಗೇರಿಯನ್ ನಿಗೂಢ ಮಹಿಳೆ ಬಾಬಾ ವಂಗಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
