ಜೈಪುರ:ಮುಂಬರುವ ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್​ 43 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ.
ಬಿಡುಗಡೆಯಾಗಿರುವ ಎರಡನೇ ಪಟ್ಟಿಯಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್​ ಹಾಗೂ ಸಚಿನ್ ಪೈಲಟ್​ ಅವರ ಆಪ್ತರಿಗೂ ಕಾಂಗ್ರೆಸ್​ ಹೈಕಮಾಂಡ್​ ಮಣೆ ಹಾಕಿದೆ. ಶನಿವಾರ ಬಿಡುಗಡೆಯಾಗಿದ್ದ 33 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ 28 ಮಂದಿ ಹಾಲಿ ಶಾಸಕರಿಗೆ ಟಿಕೆಟ್​ ಘೋಷಿಸಲಾಗಿತ್ತು.
राजस्थान में होने वाले विधानसभा चुनाव, 2023 के लिए भारतीय राष्ट्रीय कांग्रेस द्वारा जारी उम्मीदवारों की दूसरी सूची।pic.twitter.com/hzuqRlirwB
ಇದನ್ನೂ ಓದಿ:ನೇಪಾಳದಲ್ಲಿ 4.3 ತೀವ್ರತೆಯ ಭೂಕಂಪ; 24 ಘಂಟೆಗಳ ಒಳಗೆ ಎರಡು ಭಾರಿ ಕಂಪಸಿದ ಭೂಮಿ
ಕೇಕ್ರಿ ಕ್ಷೇತ್ರದಿಂದ ರಘು ಶರ್ಮಾ, ಸಿವಿಲ್ ಲೈನ್ಸ್‌ನಿಂದ ಪ್ರತಾಪ್ ಖಚರಿಯಾವಾಸ್ ಮತ್ತು ದೀಗ್-ಕುಮ್ಹೆರ್‌ನಿಂದ ವಿಶ್ವೇಂದ್ರ ಸಿಂಗ್​, ಖಜುವಾಲಾ ಕ್ಷೇತ್ರದಿಂದ ಗೋವಿಂದ್ ರಾಮ್ ಮೇಘವಾಲ್, ಸದಾಶಹರ್‌ನಿಂದ ಅನಿಲ್ ಶರ್ಮಾ, ರಾಮಗಢದಿಂದ ಜುಬೇರ್ ಖಾನ್, ದೌಸಾದಿಂದ ಮುರಾರಿ ಲಾಲ್ ಮೀನಾ, ಮಂಡಲ್‌ನಿಂದ ರಾಮ್‌ಲಾಲ್ ಜಾತ್ ಮತ್ತು ಪ್ರಮೋದ್ ಜೈನ್ ಭಯಾಗೆ ಟಿಕೆಟ್​ ನೀಡಲಾಗಿದೆ.
ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚರಾಜ್ಯ ಚುನಾವಣೆ ಮುಂಬರುವ ಲೋಕಸಭೆ ಎಲೆಕ್ಷನ್​ಗೆ ಸೆಮಿಫಿನಾಲೆ ಎಂದೇ ಹೇಳಲಾಗಿದೆ. 200 ಸದಸ್ಯಬಲದ ರಾಜಸ್ಥಾನ ವಿಧಾನಸಭೆಗೆ ನವೆಂಬರ್ 25ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3ಕ್ಕೆ ಫಲಿತಾಂಶ ಪ್ರಕಟವಾಗಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
