ನವದೆಹಲಿ:ಕಳೆದ 10 ವರ್ಷಗಳಿಂದ ದೇಶದಲ್ಲಿ ಮುಸ್ಲಿಂ ಸಮುದಾಯವನ್ನು ಹೆದರಿಸಲಾಗುತ್ತಿದ್ದು, 22 ಕೋಟಿ ಜನಸಂಖ್ಯೆ ಪೈಕಿ ಒಂದು ಅಥವಾ ಎರಡು ಕೋಟಿ ಜನ ಸತ್ತರೆ ಏನೂ ನಷ್ಟವಾಗುವುದಿಲ್ಲ ಎಂದು ಹೇಳುವ ಮೂಲಕ ಉತ್ತರಪ್ರದೇಶ, ಉತ್ತರಾಖಂಡ, ಮಿಜೋರಾಂನ ಮಾಜಿ ರಾಜ್ಯಪಾಲ, ಕಾಂಗ್ರೆಸ್​ ನಾಯಕ ಅಜೀಜ್​ ಖುರೇಷಿ ಹೊಸ ವಿವಾದ ಒಂದನ್ನು ಹುಟ್ಟುಹಾಕಿದ್ದಾರೆ.
ಕಾರ್ಯಕ್ರಮ ಒಂದನ್ನು ಉದ್ಧೇಶಿಸಿ ಮಾತನಾಡುವ ವೇಳೆ ಅವರು ಈ ಹೇಳಿಕೆ ನೀಡಿದ್ದು, ಇದಕ್ಕೆ ಸಂಬಂಧಿಸಿದಂತೆ ನಾನು ವಿಷಾದ ವ್ಯಕ್ತಪಡಿಸುವುದಿಲ್ಲ. ಬೇಕಿದ್ದರೆ ನನ್ನನ್ನು ಪಕ್ಷದಿಂದ ಉಚ್ಛಾಟಿಸಲಿ ಎಂದು ಕಾಂಗ್ರೆಸ್​ ಹೈಕಮಾಂಡ್​ಗೆ ಸವಾಲೆಸೆದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಕಾಂಗ್ರೆಸ್​ ಪಕ್ಷದ ಕೆಲವು ನಾಯಕರು ಧಾರ್ಮಿಕ ಪ್ರವಾಸಗಳ ಬಗ್ಗೆ ಮಾತನಾಡುತ್ತ ತಾವೊಬ್ಬ ಹೆಮ್ಮೆಯ ಹಿಂದು ಎಂದು ಹೇಳಿಕೊಳ್ಳುತ್ತಾ ವಿವಾದವನ್ನು ಹುಟ್ಟುಹಾಕುತ್ತಿದ್ದಾರೆ. ಜನರು ಜೈ ಗಂಗಾ, ಜೈ ನರ್ಮದಾ ಎಂದು ಘೋಷಣೆಗಳನ್ನು ಕೂಗುತ್ತಿದ್ದಾರೆ. ಜವಾಹರಲಾಲ್​ ನೆಹರೂ ಅವರ ಜಾತ್ಯಾತೀತ ಪರಿಕಲ್ಪನೆಯ ಕಾಂಗ್ರೆಸ್​ ಪಕ್ಷವನ್ನು ರಾಜಕೀಯಕ್ಕಾಗಿ ಬಲಿಕೊಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.
ये कांग्रेस पार्टी के सीनियर नेता पूर्व राज्यपाल श्रीमान क़ुरैशी साहब है ।सुनिए भाई साहब के वक्तव्य विदिशा ज़िले के लटेरी में आयोजित कार्यक्रम में ,कांग्रेस की नीतियों के बारे में ।इसीलिए कांग्रेस के लोगों को चुनावी हिन्दू कहते हैं ।बंटाधार और करप्शन नाथ यदि कहीं हों तो सुन लें।…pic.twitter.com/EkmWs9a0Xe
ಇದನ್ನೂ ಓದಿ:ಮಧ್ಯಪ್ರದೇಶದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಜಾತಿ ಸಮೀಕ್ಷೆ ಮಾಡಿಸುತ್ತೇವೆ: ಮಲ್ಲಿಕಾರ್ಜುನ ಖರ್ಗೆ
ಕಾಂಗ್ರೆಸ್​ ಸೇರಿದಂತೆ ದೇಶದ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಸಮುದಾಯದವರನ್ನು ಗುಲಾಮರೆಂದುಕೊಂಡಿದ್ಧಾರೆ. ಆದರೆ,ಇವರೆಲ್ಲರೂ ಒಂದು ಅರ್ಥ ಮಾಡಿಕೊಳ್ಳಬೇಕಾಗಿರುವುದು ಏನೆಂದರೆ ನಾವು ಯಾರಿಗೂ ಗುಲಾಮರಲ್ಲ. ನೀವು ನಮಗೆ ಸೇನೆ, ನೌಕೆ ಅಥವಾ ಪೊಲೀಸ್​ ಇಲಾಖೆಯಲ್ಲಿ ಕೆಲಸ ಕೊಡಿಸಿದ್ದೀರಾ. ಯಾವ ಆಧಾರದ ಮೇಲೆ ಮುಸ್ಲಿಮರು ನಿಮಗೆ ಮತ ಹಾಕಬೇಕು ಎಂದು ಪ್ರಶ್ನಿಸಿದ್ಧಾರೆ.
ದೇಶದ ಪ್ರಧಾನಿ ಹಾಗೂ ಅವರ ಸಚಿವ ಸಂಪುಟದ ಸದಸ್ಯರು ತಮ್ಮ ಭಾಷಣದ ಮೂಲಕ ಮುಸ್ಲಿಂ ಸಮುದಾಯವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಆದರೆ, ತಮಗೆ ಅನ್ಯಾಯವಾದರೆ ಮುಸ್ಲಿಂ ಸಮುದಾಯದವರು ಸಿಡಿದೇಳದೆ ಬೇರೆ ಅವರಿಗೆ ಬೇರೆ ವಿಧಿಯಿಲ್ಲ. ಸಮುದಾಯವು ಇಂದು ಭಯದ ನೆರಳಿನಲ್ಲಿ ಬದುಕುವ ವಾತಾವರಣ ನಿರ್ಮಾಣವಾಗಿದೆ. ಬುಲ್ಡೋಜರ್‌ಗಳು ಮತ್ತು ಎನ್‌ಕೌಂಟರ್‌ಗಳು ಮುಸ್ಲಿಮರ ಮೇಲೆ ಮಾತ್ರ ಯಾಕೆ ಪ್ರಯೋಗಿಸಲಾಗುತ್ತಿದೆ ಎಂದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಅಜೀಜ್​ ಖುರೇಷಿ ವಾಗ್ದಾಳಿ ನಡೆಸಿದ್ಧಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − five =
Remember me
