ಉದ್ಯಮಿಗಳಿಗೆ ನೂರಾರು ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಜೈಲು ಸೇರಿರುವ ಸುಕೇಶ್​ ಚಂದ್ರಶೇಖರ್​ ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಆಗುತ್ತಲೇ ಇರುತ್ತಾನೆ. ಈತನ ಜೊತೆ ನಂಟು ಹೊಂದಿದ್ದ ಕಾರಣಕ್ಕೆ ನಟಿ ಜಾಕ್ವೆಲಿನ್​ ಫರ್ನಾಂಡಿಸ್​ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜೈಲು ಪಾಲಾದರೂ ಕೂಡ ಸುಕೇಶ್​ ಚಂದ್ರಶೇಖರ್​ಗೆ ಜಾಕ್ವೆಲಿನ್​ ಫರ್ನಾಂಡಿಸ್​ ಮೇಲೆ ಇರುವ ಪ್ರೀತಿ ಕಡಿಮೆ ಆಗಿಲ್ಲ. ಪದೇಪದೇ ಆತ ತನ್ನ ಪ್ರೇಯಸಿಗೆ ಪತ್ರ ಬರೆಯುತ್ತಾನೆ. ಇಂದು (ಆಗಸ್ಟ್​ 11) ಜಾಕ್ವೆಲಿನ್​ ಫರ್ನಾಂಡಿಸ್​ ಅವರ ಹುಟ್ಟುಹಬ್ಬ. ಆ ಪ್ರಯುಕ್ತ ಕೈ ಬರಹದಲ್ಲೇ ಪ್ರೇಮಪತ್ರವನ್ನು ಬರೆದು ಕಳಿಸಿದ್ದಾನೆ ಸುಕೇಶ್​ ಚಂದ್ರಶೇಖರ್​. ಸೋಶಿಯಲ್​ ಮೀಡಿಯಾದಲ್ಲಿ ಈ ಪತ್ರ ವೈರಲ್​ ಆಗಿದೆ.
ಸುಕೇಶ್​ ಚಂದ್ರಶೇಖರ್​ ಮತ್ತು ಜಾಕ್ವೆಲಿನ್​ ಫರ್ನಾಂಡಿಸ್​ ಅವರು ಆಪ್ತವಾಗಿದ್ದರು ಎಂಬುದಕ್ಕೆ ಕೆಲವು ಫೋಟೋಗಳೇ ಸಾಕ್ಷಿ ಒದಗಿಸಿವೆ. ಜೈಲಿನಿಂದ ಬಂದ ಬಳಿಕ ಮತ್ತೆ ಜಾಕ್ವೆಲಿನ್​ ಫರ್ನಾಂಡಿಸ್​ ಜೊತೆ ಕಾಲ ಕಳೆಯಲು ಸುಕೇಶ್​ ತೀರ್ಮಾನಿಸಿದ್ದಾನೆ.ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ಸಲುವಾಗಿ ಪತ್ರದಲ್ಲಿ ಪದಗಳ ಜೊತೆ ಚಿತ್ರವನ್ನೂ ಬರೆದು ಕಳಿಸಿದ್ದಾನೆ. ಈ ಮೊದಲು ಕೂಡ ಆತ ಪತ್ರ ಬರೆದು ಸುದ್ದಿಯಾಗಿದ್ದ.
‘ಶೀಘ್ರದಲ್ಲೇ ಈ ಎಲ್ಲ ತೊಂದರೆಗಳು ಮುಗಿಯಲಿವೆ. ಬೇಗ ಬರುತ್ತೇನೆ. ಮುಂದಿನ ವರ್ಷ ಜನ್ಮದಿನವನ್ನು ಒಟ್ಟಿಗೆ ಆಚರಿಸೋಣ. ಅದನ್ನು ತುಂಬ ವಿಶೇಷವಾಗಿಸುತ್ತೇನೆ ಅಂತ ನಿನಗೆ ನಾನು ಪ್ರಾಮಿಸ್​ ಮಾಡುತ್ತೇನೆ. ಜಗತ್ತಿಗೆ ಹೊಟ್ಟೆಕಿಚ್ಚು ಆಗಬಹುದು. ನನ್ನ ಗೊಂಬೆಯೇ.. ನೀನು ಸ್ಪೆಷಲ್​, ನೀನು ಸೂಪರ್​ ಸ್ಟಾರ್​. ನನ್ನ ಬದುಕಿನ ವಿಶೇಷ ನೀನು. ಈ ದಿನವನ್ನು ಎಂಜಾಯ್​ ಮಾಡು. ಯಾವುದಕ್ಕೂ ಹೆದರಬೇಡ. ನಿನಗಾಗಿ ನಾನಿದ್ದೇನೆ. ನನಗಾಗಿ ಒಂದು ಪೀಸ್​ ಕೇಕ್​ ಹೆಚ್ಚು ತಿನ್ನು’ ಎಂದು ಸುಕೇಶ್​ ಚಂದ್ರಶೇಖರ್​ ಪತ್ರದಲ್ಲಿ ಬರೆದಿದ್ದಾನೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + eighteen =
Remember me
