ಮುಂಬೈ:ಮಹಾದೇವ್ ಆನ್‌ಲೈನ್ ಬುಕ್‌ ಅಕ್ರಮ ಬೆಟ್ಟಿಂಗ್ ಹಗರಣವನ್ನು ಷೇರು ಮಾರುಕಟ್ಟೆಯೊಂದಿಗೆ ಥಳಕು ಹಾಕಿದ ಸುದ್ದಿಯ ನಂತರ, ಅನೇಕ ಸ್ಮಾಲ್‌ಕ್ಯಾಪ್ ಮತ್ತು ಪೆನ್ನಿ ವರ್ಗದ ಷೇರುಗಳಲ್ಲಿ ದೊಡ್ಡ ಕುಸಿತ ಕಂಡುಬಂದಿದೆ.
ಮಾರ್ಚ್‌ನ ಮೊದಲ 15 ದಿನಗಳಲ್ಲಿ ಈ ವಿಭಾಗದ ಷೇರುಗಳಲ್ಲಿ 37% ವರೆಗೆ ಕುಸಿತ ಕಂಡುಬಂದಿದೆ. ಸ್ಮಾಲ್‌ಕ್ಯಾಪ್ ಮತ್ತು ಪೆನ್ನಿ ವಿಭಾಗದ ಷೇರುಗಳ ಕುಸಿತದಿಂದಾಗಿ ಹೂಡಿಕೆದಾರರು ಭಾರಿ ನಷ್ಟ ಅನುಭವಿಸಿದ್ದಾರೆ.
ವಾಸ್ತವವಾಗಿ, ಮಹಾದೇವ್ ಆ್ಯಪ್ ಹಗರಣದ ತನಿಖೆಯಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ಡಮ್ಮಿ ಕಂಪನಿಗಳ ಬ್ಯಾಂಕ್ ನಮೂದುಗಳನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬಳಸಲಾಗಿದೆ ಎಂಬ ಸಂಗತಿಯನ್ನು ಪತ್ತೆ ಮಾಡಿದೆ. ಈ ಪ್ರಕರಣದಲ್ಲಿ ಹರಿ ಶಂಕರ್ ಟಿಬರೆವಾಲ್​ ಎಂಬ ಹವಾಲಾ ವ್ಯಾಪಾರಿಯನ್ನು ಇ.ಡಿ. ಗುರುತಿಸಿದೆ. ಈತ ಕೋಲ್ಕತ್ತಾದ ನಿವಾಸಿಯಾಗಿದ್ದು, ದುಬೈನಲ್ಲಿ ನೆಲೆಸಿದ್ದಾನೆ. ಟಿಬರೆವಾಲ್​ ಅವರು ಮಹಾದೇವ್ ಆ್ಯಪ್‌ನ ಪ್ರವರ್ತಕರೊಂದಿಗೆ ಪಾಲುದಾರಿಕೆ ಹೊಂದಿದ್ದಾರೆ. ಅಲ್ಲದೆ, ಅಕ್ರಮ ಬೆಟ್ಟಿಂಗ್ ಅಪ್ಲಿಕೇಶನ್ ಆಗಿರುವ ‘ಸ್ಕೈಎಕ್ಸ್‌ಚೇಂಜ್’ ಮಾಲೀಕರು ಮತ್ತು ನಿರ್ವಾಹಕರೂ ಆಗಿದ್ದಾರೆ ಎಂದು ಇಡಿ ಆರೋಪಿಸಿದೆ.
ಟಿಬರೆವಾಲ್​ ತನ್ನ ದುಬೈ ಮೂಲದ ಕಂಪನಿಗಳ ಮೂಲಕ ವಿದೇಶಿ ಬಂಡವಾಳ ಹೂಡಿಕೆಯ ಮೂಲಕ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದರು. ಷೇರು ಮಾರುಕಟ್ಟೆಯಲ್ಲಿ ಸಹಾಯ ಮಾಡುತ್ತಿದ್ದ ಅನೇಕ ಕಂಪನಿಗಳಲ್ಲಿ ತನ್ನ ಸಹಚರರನ್ನು ನಿರ್ದೇಶಕರನ್ನಾಗಿ ನೇಮಿಸಿದ್ದರು ಎಂದು ಆರೋಪಿಸಲಾಗಿದೆ.
ತನಿಖಾ ಸಂಸ್ಥೆಯ ಪ್ರಕಾರ, ಟಿಬರೆವಾಲ್ ಮತ್ತು ಆತನ ಸಂಬಂಧಿತ ಸಂಸ್ಥೆಗಳು 30ಕ್ಕೂ ಹೆಚ್ಚು ಕಂಪನಿಗಳ ಷೇರುಗಳನ್ನು ಹೊಂದಿವೆ. ಇವುಗಳಲ್ಲಿ ಹೆಚ್ಚಿನವು ಮಾರಾಟದ ಕ್ರಮದಲ್ಲಿವೆ. ಇದೇ ಸಮಯದಲ್ಲಿ, ಷೇರುಗಳ ಬೆಲೆ ಕುಸಿತದ ನಂತರ ಕನಿಷ್ಠ ಆರು ಕಂಪನಿಗಳು ಸ್ಪಷ್ಟೀಕರಣವನ್ನು ನೀಡಿವೆ. ಈ ಕಂಪನಿಗಳು ಆರೋಪಿಗಳೊಂದಿಗೆ ಯಾವುದೇ ಸಂಪರ್ಕ ಇರುವುದನ್ನು ನಿರಾಕರಿಸಿ ಷೇರು ವಿನಿಮಯ ಕೇಂದ್ರಕ್ಕೆ ಮಾಹಿತಿ ನೀಡಿವೆ.
ಆರೋಪಿಗಳ ಪೋರ್ಟ್‌ಫೋಲಿಯೊದಲ್ಲಿ ಇರುವ ಅನೇಕ ಷೇರುಗಳು ಮಲ್ಟಿಬ್ಯಾಗರ್ ರಿಟರ್ನ್ಸ್ ನೀಡಿವೆ. ಉದಾಹರಣೆಗೆ, ಜೆನ್ಸೋಲ್ ಎಂಜಿನಿಯರಿಂಗ್ ಕಂಪನಿಯ ಷೇರು. ಕೇವಲ 2 ವರ್ಷಗಳಲ್ಲಿ ಶೇ. 800ರಷ್ಟು ಭಾರೀ ಆದಾಯವನ್ನು ಇದು ನೀಡಿದೆ. ಈಗ ಮಾರ್ಚ್ 1 ರಿಂದ ಈ ಷೇರು ಬೆಲೆ ಮೂರನೇ ಒಂದು ಭಾಗದಷ್ಟು ಕುಸಿತ ಕಂಡಿದೆ. ಇದೇ ರೀತಿ, ಸೆಲೆಕಾರ್ ಗ್ಯಾಜೆಟ್‌ಗಳು 37%, ಟೋಯಾಮ್ ಸ್ಪೋರ್ಟ್ಸ್ 31% ಮತ್ತು ಸೀಗಾಚಿ ಇಂಡಸ್ಟ್ರೀಸ್ 29% ರಷ್ಟು ಕುಸಿತ ಕಂಡಿವೆ.
ಹೈದರಾಬಾದ್ ಮೂಲದ ಸಿಗಾಚಿ ಕೂಡ ಟ್ಯಾನೋ ಇನ್ವೆಸ್ಟ್‌ಮೆಂಟ್ ಆಪರ್ಚುನಿಟೀಸ್ ಫಂಡ್ ಮತ್ತು ಕ್ಯಾಟರ್‌ಫೀಲ್ಡ್ ಗ್ಲೋಬಲ್ ಕಂಪನಿಗಳು ಆರೋಪಿಗಳೊಂದಿಗೆ ಯಾವುದೇ ಸಂಬಂಧ ಇರುವುದನ್ನು ನಿರಾಕರಿಸಿವೆ. ಹರಿ ಶಂಕರ್ ಟಿಬರೆವಾಲ್​ ಅವರ ಸಂಪರ್ಕಗಳನ್ನು ಹೊಂದಿರುವ ಕಂಪನಿಗಳು ಇವುಗಳಾಗಿವೆ ಎನ್ನಲಾಗಿದೆ. ನಾರ್ತ್ ಈಸ್ಟರ್ನ್ ಕ್ಯಾರಿಯಿಂಗ್ ಕಾರ್ಪೊರೇಷನ್, ಪ್ರತೀಕಾ ಆಟೋ ಇಂಡಸ್ಟ್ರೀಸ್, ಸೆಲೆಕಾರ್ ಮತ್ತು ಸರ್ವೋಟೆಕ್ ಪವರ್ ಸೇರಿದಂತೆ ಇತರ ಅನೇಕ ಕಂಪನಿಗಳು ಪ್ರಕರಣದ ಆರೋಪಿಗಳಿಂದ ಅಂತರವನ್ನು ಕಾಯ್ದುಕೊಂಡಿವೆ.

ಪೇಟಿಎಂ ಷೇರುಗಳಿಗೆ ಮಾರುಕಟ್ಟೆಯಲ್ಲಿ ಮತ್ತೆ ಬೇಡಿಕೆ: ಅಪ್ಪರ್​ ಸರ್ಕ್ಯೂಟ್​ ಹಿಟ್​ ಆಗಿದ್ದೇಕೆ?

ಪೆಟ್ರೋಲ್​, ಡೀಸೆಲ್​ ಬೆಲೆ ಕಡಿತ: ತೈಲ ಕಂಪನಿಗಳ ಷೇರು ಬೆಲೆ ಕುಸಿತವಾಗಿದ್ದೇಕೆ?

ದುರ್ಬಲ ಜಾಗತಿಕ ಪ್ರವೃತ್ತಿ, ವಿದೇಶಿ ನಿಧಿ ಹೊರಹರಿವು: ಷೇರುಪೇಟೆ ಕುಸಿತದ ನಡುವೆಯೂ ಸ್ಮಾಲ್​ ಕ್ಯಾಪ್​ ಸೂಚ್ಯಂಕ ಏರಿಕೆಯಾಗಿದ್ದೇಕೆ?

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:fifteen + 10 =
Remember me
