ನವದೆಹಲಿ:ಗಡಿಯಲ್ಲಿ ನಿಯೋಜಿಸಿರುವ ಸೈನ್ಯವನ್ನು ಆದಷ್ಟು ಶೀಘ್ರ ವಾಪಸ್ ಪಡೆದುಕೊಳ್ಳುವ ಬಗ್ಗೆ ಎರಡೂ ದೇಶಗಳಿಗೆ ಸ್ವೀಕಾರಾರ್ಹವಾದ ಪರಿಹಾರವೊಂದನ್ನು ಕಂಡುಕೊಳ್ಳಲು ಭಾರತ ಮತ್ತು ಚೀನಾ ಸಮ್ಮತಿಸಿವೆ.
ಆದರೆ ಅದರ ಬೆನ್ನಲ್ಲೇ, ಲಡಾಖ್ ಮತ್ತು ಅರುಣಾಚಲ ಪ್ರದೇಶವನ್ನು ತಾನು ಮಾನ್ಯ ಮಾಡುವುದಿಲ್ಲ ಎಂದು ಚೀನಾ ಮಂಗಳವಾರ ಹೇಳುವ ಮೂಲಕ ತನ್ನ ಮೊಂಡು ಧೋರಣೆಯನ್ನು ಮುಂದುವರಿಸಿದೆ. ಭಾರತದ ಚುಶುಲ್​ನಲ್ಲಿ ನಡೆದ ಎರಡೂ ದೇಶಗಳ ಸೇನಾ ಕಮಾಂಡರ್ ಹಂತದ 7ನೇ ಸುತ್ತಿನ ಮಾತುಕತೆಯು 11 ತಾಸು ಸುದೀರ್ಘವಾಗಿ ನಡೆದು ಸೋಮವಾರ ಮಧ್ಯರಾತ್ರಿ ಮುಕ್ತಾಯವಾಯಿತು. ಉಭಯ ಸೇನೆಗಳ ಪ್ರತಿನಿಧಿಗಳು ಸೂತ್ರವೊಂದನ್ನು ರೂಪಿಸುವುದರ ಕುರಿತು ಗಮನ ಕೇಂದ್ರೀಕರಿಸಲು ಒಪ್ಪಿದ್ದಾರೆ. ‘ಚರ್ಚೆ ಧನಾತ್ಮಕ ಹಾಗೂ ರಚನಾತ್ಮಕವಾಗಿತ್ತು. ಉಭಯ ಕಡೆಗಳ ಧೋರಣೆ ಕುರಿತು ಪರಸ್ಪರರ ಅರಿವು ಹೆಚ್ಚಾಗಿದೆ’ ಎಂದು ಮಂಗಳವಾರ ಜಂಟಿ ಹೇಳಿಕೆಯಲ್ಲಿ ಉಭಯ ದೇಶಗಳು ತಿಳಿಸಿವೆ.
ಭಿನ್ನಾಭಿಪ್ರಾಯಗಳನ್ನು ಸಂಘರ್ಷವಾಗಿ ಪರಿಣಮಿಸಲು ಬಿಡಬಾರದು. ಗಡಿ ಪ್ರದೇಶಗಳಲ್ಲಿ ಜಂಟಿಯಾಗಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಬೇಕೆಂಬ ಉಭಯ ದೇಶಗಳ ನಾಯಕರ ಅಭಿಮತವನ್ನು ಅನುಷ್ಠಾನಕ್ಕೆ ತರಬೇಕೆಂದು ಸಭೆಯಲ್ಲಿ ಅಭಿಪ್ರಾಯಪಡಲಾಗಿದೆ.
ಗಡಿ ಪ್ರದೇಶಗಳಲ್ಲಿ ಭಾರತ ನಿರ್ವಿುಸಿರುವ ಸೇತುವೆಗಳು ಹಾಗೂ ಇತರ ಮೂಲ ಸೌಕರ್ಯಗಳೇ ಗಡಿ ವಿವಾದದ ಮೂಲವಾಗಿದೆ ಎಂದು ಚೀನಾ ಆರೋಪಿಸಿದೆ. ಪರಿಸ್ಥಿತಿ ಬಿಗಡಾಯಿಸುವಂಥ ಯಾವುದೇ ಕ್ರಮಗಳಿಗೆ ಉಭಯ ದೇಶಗಳು ಕೈಹಾಕಬಾರದು ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜನ್ ಹೇಳಿದ್ದಾರೆ. ಲಡಾಖ್ ಕೇಂದ್ರಾಡಳಿತ ಪ್ರದೇಶವನ್ನು ಭಾರತ ರಚಿಸಿದ್ದು ಕಾನೂನುಬಾಹಿರ ಕ್ರಮ. ಅದನ್ನು ಹಾಗೂ ಅರುಣಾಚಲ ಪ್ರದೇಶವನ್ನು ತಮ್ಮ ದೇಶ ಮಾನ್ಯ ಮಾಡುವುದಿಲ್ಲ ಎಂದೂ ಲಿಜನ್ ತಿಳಿಸಿದ್ದಾರೆ. ಸೈನಿಕರು ಹಾಗೂ ಸಮರ ವಾಹನಗಳ ಸುಗಮ ರವಾನೆಗೆ ಅನುಕೂಲವಾಗುವಂತೆ ನಿರ್ವಿುಸಿರುವ 44 ಸೇತುವೆಗಳನ್ನು ರಕ್ಷಣಾ ಸಚಿವ ರಾಜನಾಥ ಸಿಂಗ್ ಸೋಮವಾರ ಉದ್ಘಾಟಿಸಿದ್ದರು. ಲಡಾಖ್​ನಲ್ಲಿ 7 ಸೇತುವೆ ಸಹಿತ ಜಮ್ಮು-ಕಾಶ್ಮೀರ, ಅರುಣಾಚಲ ಪ್ರದೇಶ, ಸಿಕ್ಕಿಂ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಪಂಜಾಬ್ ಗಡಿಯಲ್ಲಿ ಅವುಗಳನ್ನು ನಿರ್ವಿುಸಲಾಗಿದೆ.
ಕದ್ದ ಕಲಾಕೃತಿಗಳನ್ನೆಲ್ಲ 15ವರ್ಷಗಳ ಬಳಿಕ ಹಿಂದಿರುಗಿಸಿದ ಮಹಿಳೆ; ದುರದೃಷ್ಟವೇ ಕಾರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + ten =
Remember me
