ನವದೆಹಲಿ:ಸಂಸತ್​ ಅಧಿವೇಶನದ ವೇಳೆ ತಮ್ಮ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಬಿಜೆಪಿ ಸದಸ್ಯ ರಮೇಶ್​ ಬಿಧೂರಿ ವಿರುದ್ಧ ಸ್ಪೀಕರ್​ ಕಠಿಣ ಕ್ರಮ ಜರುಗಿಸದಿದ್ದರೆ ಸಂಸದನ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಬಿಎಸ್​ಪಿಯ ಡ್ಯಾನಿಶ್​ ಅಲಿ ಹೇಳಿದ್ದಾರೆ.
ಚಂದ್ರಯಾನ-3ರ ಕುರಿತು ಸಂಸತ್​ ಅಧಿವೇಶನದಲ್ಲಿ ಚರ್ಚೆಯಾಗುತ್ತಿದ್ದ ವೇಳೆ ಮಾತನಾಡಿದ ಸಂಸದ ರಮೇಶ್​ ಬಿಧೂರಿ ಡ್ಯಾನಿಶ್​ ಅಲಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಡ್ಯಾನಿಶ್​ ಅಲಿ ಸಂಸದ ರಮೇಶ್​ ಬಿಧೂರಿ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ಲೋಕಸಭೆ ಸ್ಪೀಕರ್​ ಓಂ ನಿರ್ಲಾ ಅವರಿಗೆ ಪತ್ರ ಬರೆದಿದ್ದೇನೆ. ಘಟನೆಗೆ ಸಂಬಂಧಿಸಿದಂತೆ ಅವರು ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂಬ ವಿಶ್ವಾಸ ನನಗಿದೆ. ಒಂದು ವೇಳೆ ಅವರು ಕ್ರಮಕೈಗೊಳ್ಳದಿದ್ದರೆ ನಾನು ಸಂಸತ್​ ಸದಸ್ಯತ್ವಕ್ಕೆ ರಾಜೀನಾಮೆ ಕೊಡುತ್ತೇನೆ.
#WATCH| On BJP MP Ramesh Bidhuri's remarks, BSP MP Danish Ali says, "When this is the condition of an elected member like me then what will be the condition of a normal person. I hope, I will get justice, Speaker will conduct an enquiry or else with a heavy heart, I'm also…pic.twitter.com/5lMoLSkTEU
ಇದನ್ನೂ ಓದಿ:ಮೈಸೂರು ದಸರಾ ಅಂದರೆ ಕಾಂಗ್ರೆಸ್​ ಸರ್ಕಾರ ಮೂಗು ಮುರಿಯುವುದೇಕೆ: ಬಿಜೆಪಿ
ಸಂಸದ ಬಿಧೂರಿ ಮಾತನಾಡುವ ವೇಳೆ ಬಳಸಿರುವ ಪದಗಳು ಇಡೀ ಮುಸ್ಲಿಂ ಸಮುದಾಯಕ್ಕೆ ಮಾಡಿದ ಅವಮಾನ. ಚುನಾಯಿತ ಜನಪ್ರತಿನಿಧಿಯಾದ ನನಗೆ ಈ ರೀತಿಯ ಪದಗಳನ್ನು ಬಳಸಿ ಮಾತನಾಡಿರುವುದು ಇದೇ ಮೊದಲು ಎಂದುಕೊಂಡಿದ್ದೇನೆ. ನನಗೆ ಈ ರೀತಿಯಾದರೆ ಇನ್ನೂ ಸಾಮಾನ್ಯ ಜನರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದ್ದಾರೆ.
ಸಂಸತ್​ ಅಧಿವೇಶನದ ವೇಳೆ ನನಗೆ ಆ ರೀತಿಯ ಮಾತುಗಳನ್ನು ಕೇಳಿದ ಮೇಲೆ ರಾತ್ರಿಯೆಲ್ಲಾ ನಿದ್ದೆ ಬರಲಿಲ್ಲ. ಒಬ್ ಚುನಾಯಿತ ಜನಪ್ರತಿನಿಧಿಗೆ ಸಂಸತ್​ ಅಧಿವೇಶನದಲ್ಲಿ ಈ ರೀತಿಯಾಗಿರುವುದು ಇದೇ ಮೊದಲು ಎಂದು ಮಾತನಾಡುವ ವೇಳೆ ಭಾವುಕರಾಗಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × 2 =
Remember me
