ಹೈದರಾಬಾದ್​​:ಮದುವೆಯಾದರೂ ಬೇರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಕಾನ್​ಸ್ಟೆಬಲ್​ ತನ್ನ ಹೆಂಡತಿ ಕೊಲೆಗೆ ಸುಪಾರಿ ನೀಡಿ ಹತ್ಯೆ ಮಾಡಿಸಿರುವ ಘಟನೆ ತೆಲಂಗಾಣದ ಮಂಚೇರಿಯಲ್ ಜಿಲ್ಲೆಯಲ್ಲಿ ನಡೆದಿದೆ.
ಶರಣ್ಯಾ (31) ಎಂಬಾಕೆಯೇ ಮೃತ ದುರ್ದೈವಿಯಾಗಿದ್ದು, ಇದೇ ತಿಂಗಳ 10ರಂದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಈ ಪ್ರಕರಣದ ಪ್ರಮುಖ ಆರೋಪಿಯನ್ನು ಆಕೆಯ ಪತಿ ಸೈಯದ್ ಜಿಯಾ-ಉಲ್-ಹಕ್ ಎಂದು ಪೊಲೀಸರು ಗುರುತಿಸಿದ್ದು, ಆತನ ಜತೆಗೆ ಚಂದ್ರಗಿರಿ ಸಾಯಿ ಕುಮಾರ್, ದರಂಗುಲ ರಾಜ್ ಕುಮಾರ್, ಆತನ ಸಹೋದರ ಶಿವ, ಪಳ್ಳಿಕೊಂಡ ಅನಿಲ್ ಕುಮಾರ್, ಶಿವಕೃಷ್ಣ, ವೇಮುಲ, ಸಾಯಿ, ಅಮೇರ್ ಗೌರಿ ಎಂಬುವರನ್ನು ಬಂಧಿಸಲಾಗಿದೆ.
ಇದನ್ನೂ ಓದಿ:ದೆವ್ವ ಹಿಡಿದಿದೆ ಎಂದು ತಾಂತ್ರಿಕನಿಂದ ಭೂತೋಚ್ಚಾಟನೆ: ಮೂಡನಂಬಿಕೆಯಿಂದಾಗಿ ಪ್ರಾಣಬಿಟ್ಟ ಗರ್ಭಿಣಿ
ಬೇರೊಬ್ಬ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಸೈಯದ್ ಪತ್ನಿಗೆ ಸುಪಾರಿ ನೀಡಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಸಿಐಎಸ್ ಎಫ್ ಕಾನ್ ಸ್ಟೆಬಲ್ ಸೈಯದ್ ಜಿಯಾ ಉಲ್ಹಾಕ್ ತನ್ನ ಮನೆಯ ಬಳಿ ಶರಣ್ಯ ಎಂಬಾಕೆಯನ್ನು ಪ್ರೀತಿಸಿ 2013ರಲ್ಲಿ ವಿವಾಹವಾಗಿದ್ದು, ಮನಸ್ವಿನಿ ಎಂಬ ಮಗಳಿದ್ದಳು. ಸೈಯದ್ ಹೈದರಾಬಾದ್​​ನಲ್ಲಿ ಕೆಲಸ ಮಾಡುತ್ತಿದ್ದಾಗ ಅಲ್ಲಿನ ಮತ್ತೊಬ್ಬ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದು, ಈ ವಿಚಾರ ಪತ್ನಿ ಶರಣ್ಯ ಅವರಿಗೆ ತಿಳಿದು ದಂಪತಿ ನಡುವೆ ಜಗಳವಾಗಿದೆ.
ವಿಚ್ಛೇದನ ನೀಡದಿದ್ದರೆ ಶರಣ್ಯಾಗೆ ಸಾಯಿಸುವುದಾಗಿಯೂ ಸೈಯದ್ ಬೆದರಿಕೆ ಹಾಕಿದ್ದು, ಆದರೆ ಆಕೆ ವಿಚ್ಛೇದನ ನೀಡಲು ನಿರಾಕರಿಸಿದ್ದಳು. ಬಕ್ರೀದ್ ನಿಮಿತ್ತ ತನ್ನ ಸ್ನೇಹಿತ ಚಂದ್ರಗಿರಿ ಸಾಯಿಕುಮಾರ್ ಜತೆ ಮಂಚೇರಿಯಲ್​ಗೆ ಬಂದಿದ್ದ ಆತ ಪತ್ನಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿ ಸಾಯಿಕುಮಾರ್ ಮತ್ತಿತರರಿಗೆ ಸುಪಾರಿ ನೀಡಿ 9 ಲಕ್ಷ ರೂ. ನೀಡಿದ್ದ. ಇದೇ ತಿಂಗಳ 10ರಂದು ಸಂಜೆ 6 ಗಂಟೆಗೆ ಶರಣ್ಯಾ ರೈಲ್ವೆ ಹಳಿ ಬಳಿಯಿದ್ದಾಗ ಪೊದೆಯಲ್ಲಿದ್ದ ರಾಜ್‌ಕುಮಾರ್ ಮತ್ತು ಶಿವ ಆಕೆಯ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಮನಬಂದಂತೆ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
ಇದನ್ನೂ ಓದಿ:ಹಿಂದೂ ಧರ್ಮ ಇಸ್ಲಾಂಗಿಂತ ಹಳೆಯದು, ಮುಸ್ಲಿಮರೂ ಹಿಂದೂಗಳಾಗಿದ್ದರು: ಗುಲಾಂ ನಬಿ ಆಜಾದ್
ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪತಿ ಸೈಯದ್‌ನ ಮೇಲೆ ಅನುಮಾನ ವ್ಯಕ್ತಪಡಿಸಿ ತನಿಖೆ ಆರಂಭಿಸಿದ್ದಾರೆ. ತಂತ್ರಜ್ಞಾನದ ಸಹಾಯದಿಂದ ತನಿಖೆ ನಡೆಸಿದಾಗ ವಿಷಯ ಬೆಳಕಿಗೆ ಬಂದಿದೆ. ಶರಣ್ಯಳನ್ನು ತಾನೇ ಕೊಂದಿರುವುದಾಗಿ ಕಾನ್‌ಸ್ಟೆಬಲ್ ಸೈಯದ್ ತಪ್ಪೊಪ್ಪಿಕೊಂಡಿದ್ದಾನೆ. ಈತನ ನೆರವಿನಿಂದ ಪೊಲೀಸರು ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಇದರಲ್ಲಿ ರವಿತೇಜ ಎಂಬ ಆರೋಪಿ ಪರಾರಿಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.(ಏಜೆನ್ಸೀಸ್​)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
