ಇಂದು ಉತ್ತರಪ್ರದೇಶದ ನೋಯ್ಡಾದಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಪಾಲ್ಗೊಳ್ಳುವ ಸಮಾರಂಭವೊಂದಿತ್ತು. ಈ ಕಾರ್ಯಕ್ರಮದಲ್ಲಿ ಕರ್ತವ್ಯ ನಿರತ ಮಹಿಳಾ ಪೇದೆಯೋರ್ವರು ಅನೇಕರ ಗಮನ ಸೆಳೆದಿದ್ದಾರೆ.
ಈ ಮಹಿಳಾ ಪೇದೆ ಹೆಸರು ಪ್ರೀತಿ ರಾಣಿ. ಗ್ರೇಟರ್​ ನೋಯ್ಡಾದ ದಾದ್ರಿ ಠಾಣೆಯವರು. ಇಂದು ಮುಖ್ಯಮಂತ್ರಿ ಆದಿತ್ಯನಾಥ್​ ಪಾಲ್ಗೊಳ್ಳುವ ಕಾರ್ಯಕ್ರಮ ನಡೆಯಬೇಕಿದ್ದ ಸ್ಥಳದಲ್ಲಿ ಕರ್ತವ್ಯಕ್ಕೆ ಇವರನ್ನೂ ನಿಯೋಜಿಸಲಾಗಿತ್ತು. ಮುಂಜಾನೆ ಆರು ಗಂಟೆಯಿಂದಲೇ ಅವರ ಡ್ಯೂಟಿ ಶುರುವಾಗಿತ್ತು.
ಹೀಗೆ ಕರ್ತವ್ಯಕ್ಕೆ ಬರುವಾಗ ಆ ಪೇದೆ ತಮ್ಮ ಒಂದೂವರೆ ವರ್ಷದ ಮಗನನ್ನೂ ಎತ್ತಿಕೊಂಡು ಬಂದಿದ್ದರು. ತನ್ನ ಪುಟ್ಟ ಮಗುವಿನೊಂದಿಗೆ ಕರ್ತವ್ಯ ನಿರ್ವಹಿಸಿದರು.
ಈ ಬಗ್ಗೆ ಅವರನ್ನು ಕೇಳಿದಾಗ, ನನ್ನ ಪತಿಗೆ ಇವತ್ತು ಪರೀಕ್ಷೆ ಇದೆ. ಹಾಗಾಗಿ ಅವರಿಗೆ ಮಗುವನ್ನು ನೋಡಿಕೊಳ್ಳಲು ಆಗುವುದಿಲ್ಲ. ಹಾಗಾಗಿ ಅನಿವಾರ್ಯವಾಗಿ ನಾನೇ ಮಗುವನ್ನು ಎತ್ತಿಕೊಂಡು ಬರಬೇಕಾಯಿತು ಎಂದು ಹೇಳಿದರು.ನನಗೆ ನನ್ನ ಕೆಲಸವೂ ತುಂಬ ಮುಖ್ಯ. ಮಗುವನ್ನು ನೋಡಿಕೊಳ್ಳಲೆಂದು ಕರ್ತವ್ಯ ತಪ್ಪಿಸಲು ಆಗುವುದಿಲ್ಲ. ಹಾಗಾಗಿ ಮಗನನ್ನೇ ಕರೆದುಕೊಂಡು ಬಂದೆ ಎಂದರು.
ಮಹಿಳಾ ಪೇದೆಯ ಈ ಫೋಟೋ ಮಾತ್ರ ತುಂಬ ಜನರಿಗೆ ಖುಷಿಕೊಟ್ಟಿದೆ. ಮಹಿಳೆ ಲಾಲಿ ಹಾಡೋಕು ಸೈ, ಲಾಠಿ ಹಿಡಿಯೋಕು ಸೈ ಎಂಬುದಕ್ಕೆ ಇವರು ಸಾಕ್ಷಿಯಾಗಿದ್ದಾರೆ.
ಯೋಗಿ ಆದಿತ್ಯನಾಥ್​ ಅವರು ಇಂದು ನೊಯ್ಡಾದಲ್ಲಿ ಸುಮಾರು 1,452 ಕೋಟಿ ರೂಪಾಯಿ ವೆಚ್ಚದ ಯೋಜನೆಗಳನ್ನು ಉದ್ಘಾಟನೆ ಮಾಡಿದ್ದಾರೆ. 1369 ಕೋಟಿ ರೂ.ವೆಚ್ಚದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 12 =
Remember me
