ಚಂಡೀಗಢ:ಬಿಜೆಪಿಯ ನೂತನ ಸಂಸದೆ, ನಟಿ ಕಂಗನಾ ರಾಣಾವತ್​ ಅವರ ಮೇಲೆ ಹಲ್ಲೆ ನಡೆಸಿದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಮಹಿಳಾ ಸಿಬ್ಬಂದಿ ಕುಲ್ವಿಂದರ್ ಕೌರ್‌ ಅವರನ್ನ ಕರ್ತವ್ಯದಿಂದ ಅಮಾನತುಗೊಳಿಸಿ, ಚಂಡೀಗಡ ಏರ್​ಪೋರ್ಟ್​​ನಲ್ಲಿ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಬಾಂಗ್ಲಾ ಪ್ರಧಾನಿ ಹಸೀನಾ ಭಾಗಿ ಸಾಧ್ಯತೆ
ಆರೋಪಿ ಕುಲ್ವಿಂದರ್‌ ಕೌರ್‌ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕಂಗನಾ ರಣಾವತ್‌ ಅವರಿಗೆ ಕಪಾಳಮೋಕ್ಷ ಮಾಡಿದ್ದರಿಂದ ಅವರ ವಿರುದ್ಧ ಪೊಲೀಸ್‌ ಪ್ರಕರಣ ದಾಖಲಾಗಿತ್ತು.
ಸದ್ಯ ಅನುಚಿತ ವರ್ತನೆ ಆರೋಪದ ಮೇಲೆ ಮಹಿಳಾ ಸಿಐಎಸ್‌ಎಫ್ ಜವಾನ ಕುಲ್ವಿಂದರ್ ಕೌರ್ ಅವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದ್ದು, ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿಯ ನೂತನ ಸಂಸದೆ ಹಾಗೂ ನಟಿ ಕಂಗನಾ ರನೌತ್‌ ಜೊತೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ದುರ್ವರ್ತನೆ ತೋರಿದ ಆರೋಪದ ಮೇಲೆ ಆಕೆಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಏನಿದು ಕಂಗನಾ ರಾಣಾವತ್ ಕಪಾಳ ಮೋಕ್ಷ ಪ್ರಕರಣ?ಸಂಸದೆ ಕಂಗನಾ ರಾಣಾವತ್ ಅವರು ಮಂಡಿ ಲೋಕಸಭಾ ಕ್ಷೇತ್ರದ ಸಂಸದೆಯಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಬಿಜೆಪಿಯ ಹಲವು ಸಭೆಗಳಲ್ಲಿ ಭಾಗಿಯಾಗಬೇಕಿತ್ತು. ಹೀಗಾಗಿ, 2024ರ ಜೂನ್ 6 ಗುರುವಾರದಂದು ಚಂಡೀಗಢ ಏರ್‌ಪೋರ್ಟ್‌ಗೆ ಆಗಮಿಸಿದ್ದರು. ದೆಹಲಿಗೆ ತೆರಳಲು ಅವರು ಭದ್ರತಾ ತಪಾಸಣೆಗೆ ಮುಂದಾಗಿದ್ದರು. ಈ ವೇಳೆ ಭದ್ರತಾ ಸಿಬ್ಬಂದಿ ಕಂಗನಾ ರಾಣಾವತ್ ಅವರಿಗೆ ತಮ್ಮ ಮೊಬೈಲ್ ಫೋನ್‌ ಅನ್ನು ಟ್ರೇನಲ್ಲಿ ಇಡುವಂತೆ ಸೂಚಿಸಿದರು ಎನ್ನಲಾಗಿದೆ. ಆದರೆ, ಕಂಗನಾ ಅವರು ನಿರಾಕರಿಸಿದರು ಎಂಬ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಮಹಿಳಾ ಭದ್ರತಾ ಸಿಬ್ಬಂದಿ ಕಂಗನಾ ರಾಣಾವತ್ ಅವರ ಕೆನ್ನೆಗೆ ಬಾರಿಸಿದರು ಎಂದು ವರದಿಯಾಗಿತ್ತು.
ಕೆನ್ನೆಗೆ ಬಾರಿಸಿದ್ದಕ್ಕೆ ಕಾರಣವೇ ಬೇರೆ?ಕಂಗನಾ ರಾಣಾವತ್ ಅವರಿಗೆ ಕಪಾಳ ಮೋಕ್ಷ ಮಾಡಿದ ಸಿಐಎಸ್‌ಎಫ್ ಸಿಬ್ಬಂದಿ ಕಾನ್ಸ್‌ಟೆಬಲ್ ಕುಲ್ವಿಂದರ್ ಕೌರ್ ಎಂದು ತಿಳಿದು ಬಂದಿದೆ. ಈಕೆ ಪಂಜಾಬ್ ರಾಜ್ಯದ ಕಪುರ್ತಲಾದ ಸುಲ್ತಾನ್‌ ಪುರ್ ಲೋಧಿ ಪಟ್ಟಣದವರು ಎಂದು ತಿಳಿದು ಬಂದಿದೆ. ಅಷ್ಟೇ ಅಲ್ಲ, ರೈತ ಮುಖಂಡ ಶೇರ್ ಸಿಂಗ್ ಮಲ್ಹಿವಾಲ್ ಅವರ ಸಹೋದರಿ ಎಂಬ ಮಾಹಿತಿ ಹೊರ ಬಿದ್ದಿದೆ.
ಆರೋಪಿ ಕುಲ್ವಿಂದರ್ ಕೌರ್ ಅವರು ಸಂಸದೆ ಕಂಗನಾ ರಾಣಾವತ್ ವಿರುದ್ಧ ಸಿಟ್ಟಾಗಲು ಕಾರಣ ರೈತರ ಹೋರಾಟದ ಬಗ್ಗೆ ಕಂಗನಾ ಈ ಹಿಂದೆ ನೀಡಿದ್ದ ಹೇಳಿಕೆ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಈ ಕುರಿತಾಗಿ ಹೇಳಿಕೆ ನೀಡಿರುವ ಆರೋಪಿ ಕಾನ್ಸ್‌ಟೆಬಲ್ ಕುಲ್ವಿಂದರ್ ಕೌರ್, ‘ರೈತರು ಪ್ರತಿ ದಿನ ಸಿಗುವ 100 ರೂಪಾಯಿಗಾಗಿ ಪ್ರತಿಭಟನೆ ಕುಳಿತಿದ್ದರು ಎಂದು ಕಂಗನಾ ರಾಣಾವತ್ ಹೇಳಿದ್ದರು. ಹಾಗಾದ್ರೆ ಅವರು ಹೋಗಿ ಆ ರೀತಿ ಪ್ರತಿಭಟನೆಗೆ ಕುಳಿತು ಕೊಳ್ಳುತ್ತಾರಾ? ಕಂಗನಾ ಈ ರೀತಿ ಹೇಳಿಕೆ ನೀಡಿದ ವೇಳೆ ನನ್ನ ತಾಯಿ ಕೂಡಾ ಪ್ರತಿಭಟನೆ ಮಾಡುತ್ತಾ ಕುಳಿತಿದ್ದರು’ ಎಂದು 2020ರಲ್ಲಿ ನಡೆದ ರೈತ ಪ್ರತಿಭಟನೆ ವೇಳೆ ನಡೆದ ಘಟನೆಗಳನ್ನು ಕುಲ್ವಿಂದರ್ ಕೌರ್ ನೆನಪಿಸಿದರು ಎಂದು ತಿಳಿದು ಬಂದಿದೆ.
ಉತ್ತರ ಪ್ರದೇಶ: ವಿಪಕ್ಷ ನಾಯಕ ಸ್ಥಾನಕ್ಕೆ ಅಖಿಲೇಶ್ ಯಾದವ್ ರಾಜೀನಾಮೆ ಸಾಧ್ಯತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − two =
Remember me
