ಪಣಜಿ:ದೇಶದಲ್ಲಿ ಸಾರ್ವತ್ರಿಕ ಚುನಾವಣೆಯ ಭರಾಟೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರಾಜಕೀಯ ಪಕ್ಷಗಳ ನಾಯಕರು ಬಿರುಸಿನ ಮತಬೇಟೆಯಲ್ಲಿ ನಿರತರಾಗಿದ್ದಾರೆ. ಚುನಾವಣೆಯ ಸಮಯದಲ್ಲಿ ಅಭ್ಯರ್ಥಿಗಳು ಮಾತನಾಡುವ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡುವುದು ಸಹಜ, ಅದರಂತೆ ಈಗ ಕಾಂಗ್ರೆಸ್​ ಅಭ್ಯರ್ಥಿಯೊಬ್ಬರು ಸಂವಿಧಾನವನ್ನು ನಮ್ಮ ಮೇಲೆ ಬಲವಂತವಾಗಿ ಹೇರಲಾಗಿದೆ ಎಂದು ಹೇಳುವ ಮೂಲಕ ವಿವಾದದ ಕಿಡಿಯನ್ನು ಹೊತ್ತಿಸಿದ್ದಾರೆ.
ಗೊವಾ ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿರಿಯಾಟೊ ಫರ್ನಾಂಡಿಸ್​ ಪ್ರಚಾರದ ವೇಳೆ ಈ ಹೇಳಿಕೆ ನೀಡಿದ್ದು, ಎಲ್ಲರ ಕಣ್ಣು ಕೆಂಪಗಾಗಿಸಿದೆ. ಇತ್ತ ಈ ಕುರಿತು ಪ್ರತಿಕ್ರಿಯಿಸಿರುವ ಗೋವಾ ಸಿಎಂ ಪ್ರಮೋದ್​ ಸಾವಂತ್ ಕಾಂಗ್ರೆಸ್​ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂಬುದನ್ನು ಮೊತ್ತಮ್ಮೆ ನಿರೂಪಿಸಲಾಗಿದೆ ಎಂದು ಕಿಡಿಕಾರಿದ್ದಾರೆ.
1987ರಲ್ಲಿ ಗೋವಾ ಸ್ವತಂತ್ರ ರಾಜ್ಯವಾದ ಬಳಿಕ ಅಂದಿನ ಪ್ರಧಾನಿ ಜವಾಹರ್​ಲಾಲ್​ ನೆಹರೂ ಅವರು ಈ ರಾಜ್ಯ ತನ್ನ ಭವಿಷ್ಯವನ್ನು ತಾನೇ ನಿರ್ಧರಿಸುತ್ತದೆ ಎಂದು ಹೇಳಿದ್ದರು. ಆದರೆ, ಅದು ಎಂದಿಗೂ ಸಂಭವಿಸಲಿಲ್ಲ. 1961ರಲ್ಲಿ ಗೋವಾ ವಿಮೋಚನೆಗೊಳಿಸಿದಾಗ ನಮ್ಮ ಮೇಲೆ ಬಲವಂತವಾಗಿ ಸಂವಿಧಾನವನ್ನು ಹೇರಲಾಯಿತು.
Congress South Goa candidate Viriato Fernandez says Indian Constitution was forced upon Goans without consultation and he says this was part of conversation with Rahul Gandhi on a dual citizenship issue in 2019.pic.twitter.com/RDPqRmRhXy
ಇದನ್ನೂ ಓದಿ:ಫಯಾಜ್​ ಜತೆಗಿರುವ ಫೋಟೋಗಳು ವೈರಲ್​; ನೇಹಾ ತಾಯಿ ಹೇಳಿದ್ದೇನು?
ನಾವು ರಾಹುಲ್​ ಗಾಂಧಿ ಅವರ ಬಳಿ ದ್ವಿಪೌರತ್ವ ಸೇರಿದಂತೆ 12 ಬೇಡಿಕೆಗಳನ್ನು ಇರಿಸಿದ್ದೇವೆ. ಈ ಬೇಡಿಕೆಗಳು ಸಾಂವಿಧಾನಿಕವಾಗಿದ್ದರೆ ಮಾತ್ರ ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ. ಆಗ ನಾನು ಅವರಿಗೆ ಹೇಳಿದೆ 1961ರಲ್ಲಿ ಪೋರ್ಚುಗೀಸ್​ ಆಡಳಿತದಿಂದ ಗೋವಾ ವಿಮೋಚನೆಗೊಂಡ ಬಳಿಕ ಸಂವಿಧಾನವನ್ನು ನಮ್ಮ ಮೇಲೆ ಬಲವಂತವಾಗಿ ಹೇರಲಾಯಿತು ಎಂದು ವಿವರಿಸಿದೆ. ಆದರೆ, ಅದರಲ್ಲಿ ನಮ್ಮನ್ನು ಸೇರಿಸಲಾಗಲಿಲ್ಲ ಎಂದು ಹೇಳಿರುವುದಾಗಿ ಗೋವಾ ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ವಿರಿಯಾಟೊ ಫರ್ನಾಂಡಿಸ್ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.
ಇತ್ತ ಕಾಂಗ್ರೆಸ್​ ಅಭ್ಯರ್ಥಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಗೀವಾ ಸಿಎಂ ಪ್ರಮೋದ್​ ಸಾವಂತ್, ಕಾಂಗ್ರೆಸ್​ ಅಭ್ಯರ್ಥಿಯ ಈ ಮಾತುಗಳನ್ನು ಕೇಳಿ ನಾನು ಆಘಾತಕ್ಕೊಳಗಾಗಿದ್ದೇನೆ. ಸ್ವಾತಂತ್ರ್ಯ ಹೋರಾಟಗಾರರು ಗೊವಾ ಭಾರತದ ಅವಿಭಾಜ್ಯ ಅಂಗ ಎಂದು ವಾದಿಸಿ ಅದಕ್ಕಾಗಿ ಹೋರಾಟ ನಡೆಸಿದರು. 14 ವರ್ಷಗಳ ಸತತ ಹೋರಾಟದ ಫಲವಾಗಿ ಇಂದು ಗೋವಾ ಭಾರತದ ಅವಿಭಾಜ್ಯ ಅಂಗವಾಗಿದೆ. ಇತ್ತ ಕಾಂಗ್ರೆಸ್​ನವರು ನೀಡುತ್ತಿರುವ ಹೇಳಿಕೆಯನ್ನು ನೋಡಿದರೆ ಅವರು ದೇಶದ ಸಂವಿಧಾನವನ್ನು ದುರ್ಬಲಗೊಳಿಸಲು ಮುಂದಾಗಿದೆ ಎಂದು ಕಿಡಿಕಾರಿದ್ದಾರೆ.
I am appalled by the comments from Congress's South Goa candidate claiming the Indian Constitution was forcefully imposed upon Goans. Our freedom fighters believed wholeheartedly that Goa is an inseparable part of India. Congress delayed Goa's liberation by 14 years. Now, their…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + twenty =
Remember me
