ಉತ್ತರಪ್ರದೇಶದ:ಹೊಸದಾಗಿ ಡಾಂಬರ್​ನಿಂದ ನಿರ್ಮಿಸಲಾದ ಮುಖ್ಯ ರಸ್ತೆಯನ್ನು ನೋಡಿ ಸಾರ್ವಜನಿಕರು ಖಷಿ ಪಡುತ್ತಾರೆ ಎಂದು ಅಧಿಕಾರಿಗಳು ಭಾವಿಸಿದ್ದರು. ಆದ್ರೆ, ಹೊಸ ರಸ್ತೆಯ ಗುಣಮಟ್ಟವನ್ನು ಪರಿಶೀಲಿಸಿದ ನಗರ ನಿವಾಸಿಗಳು, ಅದನ್ನು ವಿಡಿಯೋ ಮಾಡುವ ಮೂಲಕ ಪ್ರಶ್ನಿಸಿ, ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಭಾರೀ ವೈರಲ್​​ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ:19 ವಯೋಮಿತಿಯ ಐಸಿಸಿ ಏಕದಿನ ವಿಶ್ವಕಪ್​ನಲ್ಲಿ ಭಾರತ ಕಿರಿಯರಿಗೆ ಇಂದು ಕಿವೀಸ್​ ಸವಾಲು
ಇತ್ತೀಚೆಗೆ ನಿರ್ಮಿಸಿದ ರಸ್ತೆಯ ಡಾಂಬರ್​ ಕೈಗೆ ಬರುತ್ತಿರುವುದನ್ನು ವಿಡಿಯೋ ಮಾಡಿದ ಸ್ಥಳೀಯರೊಬ್ಬರು, ನೂತನ ರಸ್ತೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದ್ರೆ, ಇದರ ಕಳಪೆ ಗುಣಮಟ್ಟ ಹೇಗಿದೆ? ಎಷ್ಟರ ಮಟ್ಟಿಗಿದೆ ಎಂಬುದನ್ನು ಒಮ್ಮೆ ಪರಿಶೀಲಿಸಿ ಎಂದು ಉತ್ತರಪ್ರದೇಶ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.
उन्नाव में भाजपाई भ्रष्टाचार की उधड़ती परतें। इसकी जाँच होगी या मिल-बाँटकर ये मामला भी भाजपा सरकार रफ़ा-दफ़ा कर देगी।pic.twitter.com/wM5TWlZdSk
— Akhilesh Yadav (@yadavakhilesh)January 29, 2024

ಉನ್ನಾವೋದ ಬೇಥಾರ್‌ನಿಂದ ಸೈದ್‌ಪುರ ಮಾರ್ಗದಲ್ಲಿ ನಿರ್ಮಿಸಲಾದ ರಸ್ತೆಯ ಗುಣಮಟ್ಟದ ಬಗ್ಗೆ ಪ್ರಶ್ನೆಗಳು ಮುನ್ನೆಲೆಗೆ ಬಂದಿದ್ದು, 39 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ರಸ್ತೆಯು ಉನ್ನಾವೋ ಜಿಲ್ಲೆಯ ಭಗವಂತನಗರ ವಿಧಾನಸಭೆಯಲ್ಲಿ ಸುಮಾರು ಎರಡೂವರೆ ಕಿಲೋಮೀಟರ್‌ಗಳಷ್ಟು ವ್ಯಾಪಿಸಿದೆ. ಈ ವಿಡಿಯೋವನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ತಮ್ಮ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಕೈ ನಾಯಕರಿಗೆ ಕಡೇ ಎಚ್ಚರಿಕೆ : ರಾಜಣ್ಣ, ಶಾಮನೂರು ಕಿವಿ ಹಿಂಡಿದ ದೆಹಲಿ ನಾಯಕರು
ಈ ವಿಚಾರದಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕೈವಾಡವನ್ನು ಪ್ರಶ್ನಿಸಿದ ಅವರು, “ಉನ್ನಾವೋದಲ್ಲಿ ಬಿಜೆಪಿ ಭ್ರಷ್ಟಾಚಾರದ ಪದರಗಳನ್ನು ಅನಾವರಣಗೊಳಿಸಲಾಗುತ್ತಿದೆ. ಇದನ್ನು ತನಿಖೆ ಮಾಡಲಾಗುತ್ತದೆಯೇ ಅಥವಾ ಬಿಜೆಪಿ ಸರ್ಕಾರವು ಒಳಸಂಚು ಮೂಲಕ ವಿಷಯವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತದೆಯೇ?” ಎಂದು ವ್ಯಂಗ್ಯವಾಡಿದ್ದಾರೆ,(ಏಜೆನ್ಸೀಸ್).
ಕೇಬಲ್ ಸರಿಮಾಡುವುದಾಗಿ ಮನೆಯೊಳೆಗೆ ಖದೀಮನ ಎಂಟ್ರಿ! ಸಿಸಿಟಿವಿಯಲ್ಲಿ ಸೆರೆಯಾಯ್ತು ಆಘಾತಕಾರಿ ದೃಶ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
