ಹೈದರಾಬಾದ್:ಓಲಾ ಕ್ಯಾಬ್ ಚಾಲಕನ ನಡೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದ ಗ್ರಾಹಕರೊಬ್ಬರು, ತಮ್ಮ ದೂರದ ಪ್ರಯಾಣವನ್ನು ಆತನ ನಡವಳಿಕೆಯಿಂದ ಒತ್ತಾಯ ಪೂರ್ವಕವಾಗಿ ರದ್ದುಪಡಿಸುವಂತಾಗಿದೆ. ಈ ಬೆನ್ನಲ್ಲೇ ಅವರು ನೀಡಿದ ದೂರಿನ ಮೇರೆಗೆ ಇದೀಗ ಜಿಲ್ಲಾ ಗ್ರಾಹಕ ವೇದಿಕೆ​ ಸಂಸ್ಥೆಗೆ ಬರೋಬ್ಬರಿ ಒಂದು ಲಕ್ಷ ರೂ. ಹಣವನ್ನು ದಂಡವಾಗಿ ನೀಡುವಂತೆ ಆದೇಶಿಸಿದೆ.
ಇದನ್ನೂ ಓದಿ:ಅರುಣಾಚಲ ಪ್ರದೇಶದ 8 ಮತಗಟ್ಟೆಗಳಲ್ಲಿ ಏ.26ರಂದು ಮರು ಮತದಾನ
ದೂರು ದಾಖಲಿಸಿದ ವ್ಯಕ್ತಿ ಜಬೇಜ್​ ಸಾಮ್ಯುಲ್, ತನ್ನ ಪತ್ನಿ ಮತ್ತು ಸಹಾಯಕನೊಂದಿಗೆ ನಗರದ ಪ್ರದೇಶದಲ್ಲಿ ತಮ್ಮ ವೈಯಕ್ತಿಕ ಕೆಲಸದ ಮೇರೆಗೆ ಸಂಚರಿಸಬೇಕಿತ್ತು. ಈ ಕಾರಣದಿಂದ ಓಲಾ ಕ್ಯಾಬ್​ನ ಬುಕ್ ಮಾಡಿದ ಅವರು, ಬೆಳಗ್ಗೆ 10 ಗಂಟೆ ಸುಮಾರಿಗೆ ಕಾರನ್ನು ಹತ್ತಿದ್ದಾರೆ. ಈ ವೇಳೆ ಪ್ರಯಾಣ ಆರಂಭಗೊಂಡ ಕೆಲವೇ ನಿಮಿಷಗಳಲ್ಲಿ ಕಾರನ್ನು ಒಳಗಿನಿಂದಲೇ ಕಣ್ಣಾಯಿಸಿದ ಸಾಮ್ಯುಲ್​ಗೆ ಅಚ್ಚರಿ ಎದುರಾಗಿದ್ದು, ಕಾರಿನಲ್ಲಿದ್ದ ಧೂಳು, ಸ್ವಚ್ಛತೆ ಮತ್ತು ದುರ್ವಾಸನೆ. ಇದೆಲ್ಲವೂ ಗಮನಕ್ಕೆ ಬರುತ್ತಿದ್ದಂತೆ ಚಾಲಕನನ್ನು ಪ್ರಶ್ನಿಸಿದ ಜಬೇಜ್, ಎಸಿ ಅನ್ ಮಾಡುವಂತೆ ಕೋರಿದ್ದಾರೆ. ಆದರೆ, ಇದಕ್ಕೆ ಕ್ಯಾರೇ ಎನ್ನದ ಚಾಲಕ, ತನ್ನ ದುರ್ವರ್ತನೆ ತೋರಿದ್ದಾನೆ.
ಈ ವಿಷಯಕ್ಕೆ ಡ್ರೈವರ್​ ಮತ್ತು ಸಾಮ್ಯುಲ್ ನಡುವೆ ಮಾತಿನ ಚಕಮಕಿ ನಡೆದಿದೆ. ತನ್ನದೇ ತಪ್ಪಿದ್ದರೂ ಒಪ್ಪದ ಚಾಲಕ, ಕೂಡಲೇ ಅವರನ್ನು ಕಾರಿನಿಂದ ಕೆಳಗಿಳಿಯುವಂತೆ ಹೇಳಿದ್ದಾನೆ. ಚಾಲಕನ ಅಶಿಸ್ತು, ಅಸಭ್ಯ ವರ್ತನೆಗೆ ಶಾಕ್ ಆದ ಸಾಮ್ಯುಲ್ ದಂಪತಿ, ಹೆಚ್ಚು ಮಾತನಾಡದೆ, ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಅಲ್ಲಿಂದ ಹೋಗಿದ್ದಾರೆ.
ಇದನ್ನೂ ಓದಿ:ಮುಖೇಶ್ ಅಂಬಾನಿಯ ಫೈನಾನ್ಸ್​ ಕಂಪನಿ ತ್ರೈಮಾಸಿಕ ಲಾಭ ಹೆಚ್ಚಳ: ಷೇರು ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ
ಚಾಲಕನ ಅಸಭ್ಯ ವರ್ತನೆಗೆ ಕೋಪಗೊಂಡ ಜಬೇಜ್​, ತಕ್ಷಣವೇ ಸಂಸ್ಥೆಗೆ ದೂರು ನೀಡಿ, ವಿಚಾರಣೆ ಮಾಡುವಂತೆ ಆಗ್ರಹಿಸಿದ್ದಾರೆ. ಆದರೆ, ಓಲಾ ಸಂಸ್ಥೆಯವರು ಮಾತ್ರ ಕರೆ ಮಾಡಿ, ಹಣ ಪಾವತಿ ಮಾಡುವಂತೆ ತಿಳಿಸಿದ್ದಾರೆ. ಇದರಿಂದ ತಾಳ್ಮೆ ಕಳೆದುಕೊಂಡ ಗ್ರಾಹಕ ಸಾಮ್ಯುಲ್ ತನಗೆ ಹಣ ಹಾಗೂ ಪರಿಹಾರ ಎರಡು ಕೂಡ ವಾಪಾಸ್ ಬರಬೇಕು ಎಂದು ಗ್ರಾಹಕ ಕೋರ್ಟ್​​ ಮೊರೆ ಹೋಗಿದ್ದಾರೆ.
ಇಬ್ಬರ ವಾದವನ್ನು ಆಲಿಸಿದ ಜಿಲ್ಲಾ ಗ್ರಾಹಕ ವೇದಿಕೆ​, ಅಂತಿಮವಾಗಿ ಸಬೇಜ್ ಅವರಿಗೆ ಚಾಲಕ ತೋರಿದ ಅಸಭ್ಯ ವರ್ತನೆ, ಕಾರಿನಲ್ಲಿ ಇಲ್ಲದ ಸ್ವಚ್ಛತೆ ಮತ್ತು ದಾರಿಯ ಮಧ್ಯೆಯೇ ಅವರ ಟ್ರಿಪ್ ರದ್ದುಪಡಿಸುವಂತೆ ಹೇಳಿ, ಕೆಳಗಿಳಿಸಿದ್ದಕ್ಕೆ 1 ಲಕ್ಷ ರೂ. ದಂಡ ಕೊಡಬೇಕು ಎಂದು ಓಲಾ ಸಂಸ್ಥೆಗೆ ತಿಳಿಸಿತು,(ಏಜೆನ್ಸೀಸ್).
4 ಗಂಟೆಗಳ ಕಾಲ ಅವರಿಬ್ಬರು ಹೀಗೆ ಇದ್ರು! ಅದನ್ನು ನೋಡಿ… ಪ್ರಯಾಣಿಕ ಹರಿಬಿಟ್ಟ ದೃಶ್ಯ ನೋಡಿ ದಂಗಾದ ನೆಟ್ಟಿಗರು

ನೀನೆಂದಿಗೂ ನನ್ನ ಜತೆಯಲ್ಲೇ ಇರ್ತೀಯಾ ಮಗನೇ; ಭಾವುಕರಾದ ಶಿಖರ್ ಧವನ್​ಗೆ ಫ್ಯಾನ್ಸ್​ ಆಸರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + eight =
Remember me
