ನವದೆಹಲಿ:ಧಾರ್ವಿುಕ ಸ್ವಾತಂತ್ರ್ಯದ ಹಕ್ಕು ಇತರೆ ನಾಗರಿಕರನ್ನು ನಿರ್ದಿಷ್ಟ ಧರ್ಮಕ್ಕೆ ಪರಿವರ್ತಿಸುವ ಮೂಲಭೂತ ಹಕ್ಕನ್ನು ಒಳಗೊಂಡಿಲ್ಲ. ವಂಚನೆ, ಒತ್ತಾಯ ಅಥವಾ ಆಮಿಷದ ಮೂಲಕ ವ್ಯಕ್ತಿಯನ್ನು ಮತ್ತೊಂದು ಧರ್ಮಕ್ಕೆ ಪರಿವರ್ತಿಸುವ ಕೆಲಸ ಖಂಡಿತವಾಗಿಯೂ ಸ್ವೀಕಾರಾರ್ಹವಲ್ಲ ಎಂದು ಸುಪ್ರೀಂಕೋರ್ಟ್​ಗೆ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ಮೂಲಕ ಬಲವಂತದ ಮತಾಂತರದ ವಿರುದ್ಧ ದೇಶಾದ್ಯಂತ ಪ್ರಬಲ ಕಾನೂನು ಜಾರಿಗೆ ತರುವ ಬಗ್ಗೆ ಕೇಂದ್ರ ಯೋಚನೆ ನಡೆಸಿರುವ ಸುಳಿವನ್ನು ನೀಡಿದೆ.
ಮಹಿಳೆಯರು, ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳು ಸೇರಿದಂತೆ ಸಮಾಜದ ದುರ್ಬಲ ವರ್ಗಗಳ ಹಕ್ಕುಗಳನ್ನು ರಕ್ಷಿಸಲು ಮತ್ತು ಇಂಥಾ ಕೃತ್ಯಗಳನ್ನು ನಿಯಂತ್ರಿಸಲು ಕಾನೂನುಗಳ ಅಗತ್ಯವಿದೆ. ಈ ರೀತಿಯ ಮತಾಂತರದಿಂದುಂಟಾಗುವ ಅಪಾಯದ ಬಗ್ಗೆ ತಮಗೆ ಅರಿವಿದೆ ಎಂದು ತಿಳಿಸಿದೆ.
ಮೋಸದ ಅಥವಾ ಪ್ರೇರಿತ ಮತಾಂತರವು ವ್ಯಕ್ತಿಯ ಆತ್ಮಸಾಕ್ಷಿಯ ಸ್ವಾತಂತ್ರ್ಯದ ಹಕ್ಕನ್ನು ಪ್ರತಿಬಂಧಿಸುತ್ತದೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಅಡ್ಡಿಪಡಿಸುತ್ತದೆ. ಅದನ್ನು ನಿಯಂತ್ರಿಸಲು ಅಥವಾ ನಿರ್ಬಂಧಿಸಲು ರಾಜ್ಯಗಳು ಪೂರ್ಣ ಅಧಿಕಾರವನ್ನು ಹೊಂದಿವೆ. ನಿಸ್ಸಂದೇಹವಾಗಿ ಧರ್ಮದ ಸ್ವಾತಂತ್ರ್ಯದ ಹಕ್ಕು, ದೇಶದ ಎಲ್ಲಾ ನಾಗರಿಕರ ಆತ್ಮಸಾಕ್ಷಿಯ ಹಕ್ಕು ಎಲ್ಲರೂ ಪಾಲಿಸಲೇಬೇಕಾದ ಮೌಲ್ಯಯುತವಾದ ಹಕ್ಕಾಗಿದೆ. ಇದನ್ನು ಕಾರ್ಯಾಂಗ, ಶಾಸಕಾಂಗವು ರಕ್ಷಿಸಬೇಕು ಎಂದು ಕೇಂದ್ರ ಅಭಿಪ್ರಾಯಪಟ್ಟಿದೆ.
ಕಳೆದ ವಿಚಾರಣೆ ವೇಳೆ ನ್ಯಾಯಮೂರ್ತಿ ಎಂ.ಆರ್. ಶಾ ನೇತೃತ್ವದ ನ್ಯಾಯಪೀಠ ಒತ್ತಾಯದ ಮತಾಂತರ ದೇಶಾದ್ಯಂತ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ, ಇದು ರಾಷ್ಟ್ರೀಯ ಭದ್ರತೆಗೂ ಹಾನಿ ಮಾಡುವ ಸಾಧ್ಯತೆ ಇದೆ ಎಂದು ಆತಂಕ ಹೊರಹಾಕಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರದ ನಿಲುವು ಕೇಳಿದ್ದ ನ್ಯಾಯಪೀಠ, ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿತ್ತು.
ರಾಜ್ಯಗಳಲ್ಲಿ ಕೈಗೊಂಡ ಕ್ರಮದ ಉಲ್ಲೇಖ:ಗೃಹ ಸಚಿವಾಲಯದ ಉಪಕಾರ್ಯದರ್ಶಿ ಮೂಲಕ ಸಲ್ಲಿಸಲಾದ ಅಫಿಡವಿಟ್​ನಲ್ಲಿ ಒಡಿಶಾ, ಮಧ್ಯಪ್ರದೇಶ, ಗುಜರಾತ್, ಛತ್ತೀಸ್​ಗಢ, ಉತ್ತರಾಖಂಡ, ಉತ್ತರ ಪ್ರದೇಶ, ಜಾರ್ಖಂಡ್, ಕರ್ನಾಟಕ ಮತ್ತು ಹರಿಯಾಣ ರಾಜ್ಯಗಳು ಬಲವಂತದ ಮತಾಂತರ ತಡೆಗೆ ಕಾನೂನುಗಳನ್ನು ಅಂಗೀಕರಿಸಿವೆ ಎಂದು ತಿಳಿಸಲಾಗಿದೆ. ಅರ್ಜಿದಾರರು ವಂಚನೆ, ಒತ್ತಾಯ, ಆಮಿಷ ಅಥವಾ ಇತರ ವಿಧಾನಗಳ ಮೂಲಕ ದುರ್ಬಲ ನಾಗರಿಕರನ್ನು ವ್ಯವಸ್ಥಿತ ಮತ್ತು ಅತ್ಯಾಧುನಿಕ ರೀತಿಯಲ್ಲಿ ಪರಿವರ್ತಿಸುವ ಹೆಚ್ಚಿನ ಸಂಖ್ಯೆಯ ನಿದರ್ಶನಗಳನ್ನು ಎತ್ತಿ ತೋರಿಸಿದ್ದಾರೆ ಎಂದು ವಿವರಿಸಲಾಗಿದೆ.
ಅಶ್ವಿನಿ ಹೆಚ್ಚುವರಿ ಅಫಿಡವಿಟ್:ಅರ್ಜಿದಾರ ಅಶ್ವಿನಿ ಉಪಾಧ್ಯಾಯ ಹೆಚ್ಚುವರಿ ಅಫಿಡವಿಟ್ ಸಲ್ಲಿಸುವುದಾಗಿ ನ್ಯಾಯಪೀಠಕ್ಕೆ ತಿಳಿಸಿದ್ದಾರೆ. ಧಾರ್ವಿುಕ ಬೋಧಕರು ಮತ್ತು ವಿದೇಶಿ ಮಿಷನರಿಗಳಿಗೆ ವೀಸಾ ನಿಯಮಗಳನ್ನು ಪರಿಶೀಲಿಸಲು, ಎನ್​ಜಿಒಗಳಿಗೆ ವಿದೇಶಿ ಕೊಡುಗೆ ನಿಯಮಗಳನ್ನು ಪರಿಶೀಲಿಸಲು ಮತ್ತು ಹವಾಲಾ ಹಣ ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲು ಮನವಿ ಮಾಡಿದ್ದಾರೆ. ಬೆದರಿಕೆ, ಉಡುಗೊರೆ, ವಿತ್ತೀಯ ಪ್ರಯೋಜನ ಮೂಲಕ ಮೋಸದ ಧಾರ್ವಿುಕ ಮತಾಂತರವನ್ನು ನಿಯಂತ್ರಿಸಲು ಕಟ್ಟುನಿಟ್ಟಾದ ಕ್ರಮ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಉಪಾಧ್ಯಾಯ ಅರ್ಜಿಯಲ್ಲಿ ಕೋರಿದ್ದಾರೆ.
ಇವಿಎಂ ಸುಳ್ಳುದೂರಿನ ವಿರುದ್ಧ ಎಚ್ಚರಿಕೆ:ವಿದ್ಯುನ್ಮಾನ ಮತ ಯಂತ್ರಗಳ (ಇವಿಎಂ) ಅಸಮರ್ಪಕ ಕಾರ್ಯನಿರ್ವಹಣೆ ಬಗ್ಗೆ ಸುಳ್ಳು ಸುಳ್ಳೇ ದೂರುಗಳನ್ನು ಸಲ್ಲಿಸಿದರೆ ಅದರ ಪರಿಣಾಮ ಏನಾಗುತ್ತದೆ ಎನ್ನುವುದು ಗೊತ್ತಿರಬೇಕು ಎಂದು ಸುಪ್ರೀಂಕೋರ್ಟ್ ಸೋಮವಾರ ಎಚ್ಚರಿಕೆ ನೀಡಿದೆ. ಈ ರೀತಿಯ ಮಿಥ್ಯಾರೋಪದಿಂದ ಇಡೀ ಚುನಾವಣೆ ಪ್ರಕ್ರಿಯೆ ಸ್ಥಗಿತವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದೆ. ಇವಿಎಂ ಅಸಮರ್ಪಕ ಕಾರ್ಯನಿರ್ವಹಣೆ ಬಗೆಗಿನ ಚುನಾವಣಾ ನಿಯಮವೊಂದು ಅಸಾಂವಿಧಾನಿಕವೆಂದು ಸಲ್ಲಿಕೆಯಾದ ಅರ್ಜಿಯ ವಿಚಾರಣೆ ವೇಳೆ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ನಿಯಮ ಯಾಕೆ ಸಮಸ್ಯಾತ್ಮಕವಾಗಿದೆ ಎನ್ನುವುದನ್ನು ಲಿಖಿತವಾಗಿ ತಿಳಿಸುವಂತೆ ನ್ಯಾಯಮೂರ್ತಿ ಅಜಯ್ ರಸ್ತೋಗಿ ನೇತೃತ್ವದ ನ್ಯಾಯ ಪೀಠ ಅರ್ಜಿದಾರರಿಗೆ ಸೂಚಿಸಿತು. ಈ ನಿಲುವನ್ನು ಒಪು್ಪವುದಿಲ್ಲ ಎಂದಿತು.
ಒತ್ತಾಯದ ಮತಾಂತರವು ದೇಶಕ್ಕೆ ಗಂಭೀರ ಅಪಾಯ ತಂದೊಡ್ಡುವ ಭೀತಿಯಿದೆ. ಇದು ರಾಷ್ಟ್ರೀಯ ಸಮಸ್ಯೆ. ಕಾನೂನು ಸುವ್ಯವಸ್ಥೆ ರಾಜ್ಯದ ವಿಷಯವಾಗಿರುವುದರಿಂದ ಈ ಕುರಿತು ರಾಜ್ಯ ಸರ್ಕಾರಗಳು ಕ್ರಮಕೈಗೊಳ್ಳಲು ಸ್ವತಂತ್ರವಾಗಿವೆ.
|ತುಷಾರ್ ಮೆಹ್ತಾಸಾಲಿಸಿಟರ್ ಜನರಲ್
ಹಿಂದಿನ ತೀರ್ಪುಗಳು:ಸಂವಿಧಾನದ 25ನೇ ವಿಧಿಯ ಅಡಿಯಲ್ಲಿ ಪೊ›ಪೊಗೇಟ್ (ಪ್ರಚಾರ) ಎಂಬ ಪದವು ವ್ಯಕ್ತಿಯನ್ನು ಪರಿವರ್ತಿಸುವ ಹಕ್ಕನ್ನು ಕಲ್ಪಿಸುವುದಿಲ್ಲ. ಆದರೆ ತಮ್ಮ ಧರ್ಮದ ತತ್ವಗಳನ್ನು ಬಹಿರಂಗಪಡಿಸಿ, ಹರಡುವ ಹಕ್ಕನ್ನು ಕಲ್ಪಿಸುತ್ತದೆ ಎಂದು ಸುಪ್ರೀಂಕೋರ್ಟ್ ಬೇರೊಂದು ಪ್ರಕರಣದ ತೀರ್ಪಿನಲ್ಲಿ ಹೇಳಿದೆ. 25ನೇ ಪರಿಚ್ಛೇದದ ಅಡಿಯಲ್ಲಿ ಬರುವ ಪ್ರಚಾರ ಪದದ ಅರ್ಥ ಮತ್ತು ಉದ್ದೇಶವನ್ನು ಸಂವಿಧಾನ ಸಭೆಯಲ್ಲಿ ಬಹಳ ವಿವರವಾಗಿ ರ್ಚಚಿಸಲಾಗಿತ್ತು. ಈ ಪದದ ಸೇರ್ಪಡೆಯನ್ನು ಸಂವಿಧಾನ ಸಭೆಯು ಅಂಗೀಕರಿಸಿದ ನಂತರವೇ ಸಂವಿಧಾನದ ಅಡಿಯಲ್ಲಿ ಮೂಲಭೂತ ಹಕ್ಕು ಮತಾಂತರಗೊಳ್ಳುವ ಹಕ್ಕನ್ನು ಒಳಗೊಂಡಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಯಿತು ಎಂದು ಹೇಳಲಾಗಿದೆ.
ನ್ಯಾಯಪೀಠ ಹೇಳಿದ್ದೇನು?:ನಾವು ಸ್ವಇಚ್ಛೆಯ ಮತಾಂತರದ ವಿರುದ್ಧವಿಲ್ಲ ಎಂದ ನ್ಯಾಯಪೀಠ, ಬಲವಂತದ ಮತಾಂತರಕ್ಕೆ ಒಪ್ಪಿಗೆಯಿಲ್ಲ. ಎಲ್ಲಾ ರಾಜ್ಯಗಳಿಂದ ಮಾಹಿತಿ ಪಡೆದು ನಂತರ ಸಮಗ್ರವಾದ ಅಫಿಡವಿಟ್ ಸಲ್ಲಿಸುವಂತೆ ಕೇಂದ್ರಕ್ಕೆ ಸೂಚನೆ ನೀಡಿತು. ಡಿ.5ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿಪಡಿಸಿದೆ.
5 ಜೈಷ್ ಉಗ್ರರಿಗೆ ಜೀವಾವಧಿ ಶಿಕ್ಷೆ:ದೇಶದಾದ್ಯಂತ ಭಯೋತ್ಪಾದನೆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಯುವಜನರನ್ನು ಪ್ರೇರೇಪಿಸಿ ತರಬೇತಿ ನೀಡುತ್ತಿದ್ದ ಅಪರಾಧಕ್ಕೆ ಜೈಷ್-ಎ-ಮೊಹಮದ್ ಸಂಘಟನೆಯ ಐವರು ಉಗ್ರರಿಗೆ ದೆಹಲಿ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಉಗ್ರಗಾಮಿಗಳಾದ ಸಜ್ಜದ್ ಅಹಮದ್ ಖಾನ್, ಬಿಲಾಲ್ ಅಹಮದ್ ಮೀರ್, ಮುಜಾಫರ್ ಅಹಮದ್ ಭಟ್, ಇಶ್ಪಾಕ್ ಅಹಮದ್ ಭಟ್ ಮತ್ತು ಮೆಹ್ರಾಜುದ್ದೀನ್ ಛೋಪನ್ ಕೋರ್ಟ್​ನಲ್ಲಿ ತಪ್ಪನ್ನು ಒಪ್ಪಿಕೊಂಡಿದ್ದರು. ಇದೇ ಪ್ರಕರಣದಲ್ಲಿ ತನ್ವೀರ್ ಅಹಮದ್ ಗನಿ ಎಂಬಾತನಿಗೆ ಕೋರ್ಟ್ ಐದು ವರ್ಷದ ಸೆರೆವಾಸವನ್ನೂ ವಿಧಿಸಿತು. ಈ ಅಪರಾಧಿಗಳು ಭಾರತದ ವಿರುದ್ಧ ಸಮರ ಸಾರಲು ಸಂಚು ಹೂಡಿದ್ದರು ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.
ನವದೆಹಲಿ:ಉನ್ನತ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ನೇಮಕ್ಕೆ ಕೊಲಿಜಿಯಂ ಶಿಫಾರಸು ಮಾಡಿದ ಹೆಸರುಗಳಿಗೆ ಒಪ್ಪಿಗೆ ನೀಡಲು ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿರುವ ಬಗ್ಗೆ ಸುಪ್ರೀಂಕೋರ್ಟ್ ಸೋಮವಾರ ಬೇಸರ ವ್ಯಕ್ತಪಡಿಸಿದೆ. ಇದು ನೇಮಕಾತಿ ವಿಧಾನವನ್ನು ಪರಿಣಾಮಕಾರಿಯಾಗಿ ನಿರಾಸೆಗೊಳಿಸುತ್ತದೆ ಎಂದು ಅದು ಹೇಳಿದೆ. ಇದೇ ವೇಳೆ, ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಮಯ ನಿಗದಿಪಡಿಸಿದೆ. ಈ ಸಮಯ ಪಾಲನೆಗೆ ಬದ್ಧವಾಗಿರಬೇಕು ಎಂದು ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್ ಮತ್ತು ಎ.ಎಸ್. ಓಕಾ ಅವರ ಪೀಠ ಹೇಳಿದೆ.
ಸುಪ್ರೀಂ ಕೋರ್ಟ್ ಕೊಲಿಜಿಯಂ ಪುನರುಚ್ಚರಿಸಿದ ಹೆಸರುಗಳು ಸೇರಿದಂತೆ ಶಿಫಾರಸು ಮಾಡಿದ ಹೆಸರುಗಳಿಗೆ ಸರ್ಕಾರವು ಅನುಮತಿ ನೀಡುತ್ತಿಲ್ಲ ಎಂಬುದು ವಾಸ್ತವ ಎಂದು ಅಟಾರ್ನಿ ಜನರಲ್ ಆರ್ ವೆಂಕಟ ರಮಣಿ ಅವರಿಗೆ ಪೀಠ ತಿಳಿಸಿತು. ಕೊಲಿಜಿಯಂ ಕುರಿತು ಕೇಂದ್ರ ಕಾನೂನು ಸಚಿವ ನೀಡಿದ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠ. ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (ಎನ್​ಜೆಎಸಿ) ಕಾಯ್ದೆಯನ್ನು ಅಂಗೀಕರಿಸ ದಿರುವ ಬಗ್ಗೆ ಸರ್ಕಾರವು ಅತೃಪ್ತಿ ಹೊಂದಿರಬಹುದು. ಆದರೆ, ಇದು ದೇಶದ ಕಾನೂನನ್ನು ಅನುಸರಿಸದಿರಲು ಕಾರಣವಾಗಬಾರದು ಎಂದು ಹೇಳಿತು. ಸಂವಿಧಾನ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು, ಕೊಲಿಜಿಯಂ ವ್ಯವಸ್ಥೆ ಹೆಚ್ಚು ಪ್ರಜಾಸತಾತ್ಮಕವಾಗಿ ಇಲ್ಲ. ಉನ್ನತ ಕೋರ್ಟ್​ಗಳ ಜಡ್ಜ್​ಗಳ ನೇಮಕಕ್ಕೆ ಕೆಲವು ಸದಸ್ಯರು ಇರುವ ಸಮಿತಿ ಆಯ್ಕೆ ಮಾಡುವುದು ಜನರಿಗೆ ಸರಿಕಾಣುತ್ತಿಲ್ಲ. ಈಗಿನ ಸ್ಪರ್ಧಾತ್ಮಕತೆಗೆ ತಕ್ಕಂತೆ ಹೊಸ ವ್ಯವಸ್ಥೆ ಅಪೇಕ್ಷಣೀಯ. ಹೊಸದೊಂದು ವ್ಯವಸ್ಥೆ ಜಾರಿಯಾಗುವವರೆಗೂ ಸರ್ಕಾರ ಕೊಲಿಜಿಯಂನನ್ನು ಕಡೆಗಣಿಸುವುದಿಲ್ಲ ಎಂದಿದ್ದರು.
ಸುಪ್ರೀಂಕೋರ್ಟ್ 2015 ರ ತೀರ್ಪಿನಲ್ಲಿ ಎನ್​ಜೆಎಸಿ ಕಾಯ್ದೆ ಮತ್ತು ಸಂವಿಧಾನ (99 ನೇ ತಿದ್ದುಪಡಿ) ಕಾಯ್ದೆ 2014 ಅನ್ನು ರದ್ದುಗೊಳಿಸಿತ್ತು. ಇದು ಉನ್ನತ ನ್ಯಾಯಾಲಯಗಳಿಗೆ ನ್ಯಾಯಾಧೀಶರನ್ನು ನೇಮಿಸುವ ಅಸ್ತಿತ್ವದಲ್ಲಿರುವ ನ್ಯಾಯಾಧೀಶರ ಕೊಲಿಜಿಯಂ ವ್ಯವಸ್ಥೆಯ ಪುನರುಜ್ಜೀವನಕ್ಕೆ ಕಾರಣವಾಯಿತು.
ನೀರಿಗೆ ಬಿತ್ತು ಪ್ರಪೋಸ್ ಮಾಡಲೆಂದು ತಂದ ಉಂಗುರ; ಸಮುದ್ರಕ್ಕೇ ಧುಮುಕಿದ ಪ್ರಿಯಕರ: ಆಮೇಲೇನಾಯ್ತು!

ರಾಜ್ಯದಲ್ಲಿ ಒಂದೇ ದಿನ 108 ಇನ್​ಸ್ಪೆಕ್ಟರ್​ಗಳ ವರ್ಗಾವಣೆ; ನಿಮ್ಮೂರಿಗೆ ಯಾರು ಇನ್​ಸ್ಪೆಕ್ಟರ್? ಇಲ್ಲಿದೆ ಪೂರ್ತಿ ಪಟ್ಟಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
