ನವದೆಹಲಿ:ಜಿ20 ಶೃಂಗಸಭೆ ವೇಳೆ ಕೈಗೊಳ್ಳಲಾದ ದೆಹಲಿ ಸುಂದರೀಕರಣ ಪ್ರಕ್ರಿಯೆಯನ್ನು ಮುಂದುವರಿಸುವುದಾಗಿ ದೆಹಲಿ ಸರ್ಕಾರ ಹೇಳಿದೆ. ಶೃಂಗಸಭೆಯ ಅವಧಿಯಲ್ಲಿ ಸೃಷ್ಟಿಸ ಲಾದ ಆಸ್ತಿಗಳ ರಕ್ಷಣೆಗೆ ನಿರ್ವಹಣಾ ಸಂಸ್ಥೆಯೊಂದನ್ನು ನೇಮಿಸಲಾಗುತ್ತದೆ. ನಗರದ ಉಳಿದ ಭಾಗಗಳಲ್ಲಿ ಸುಂದರೀಕರಣ ಪ್ರಕ್ರಿಯೆ ಮುಂದುವರಿಯಲಿದೆ ಎಂದು ದೆಹಲಿಯ ಲೋಕೋಪಯೋಗಿ ಸಚಿವೆ ಅತಿಷಿ ಸೋಮವಾರ ತಿಳಿಸಿದರು. ಅತಿಷಿ ಹಾಗೂ ಇನ್ನೊಬ್ಬ ಸಚಿವ ಸೌರಭ್ ಭಾರದ್ವಾಜ್, ಜಿ20 ಶೃಂಗಸಭೆಯನ್ನು ಯಶಸ್ವಿಗೊಳಿಸಿದ್ದಕ್ಕಾಗಿ ದೆಹಲಿ ಜನರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ರಾಷ್ಟ್ರ ರಾಜಧಾನಿಯಲ್ಲಿ ಕೈಗೊಳ್ಳಬೇಕಾಗಿರುವ ಸುಂದರೀಕರಣ ಕಾರ್ಯದ ಕುರಿತು ಅತಿಷಿ ಸೋಮವಾರ ಸಂಬಂಧಿತ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಪಿಡಬ್ಲು್ಯಡಿ ಅಧಿಕಾರಿಗಳು ಮಂಗಳವಾರದಿಂದಲೇ ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ. ರಸ್ತೆ ಗುಡಿಸುವ ಯಾಂತ್ರೀಕೃತ ಪ್ರಕ್ರಿಯೆ ಶೃಂಗಸಭೆ ವೇಳೆಯಲ್ಲಿ ವ್ಯವಸ್ಥಿತ ರೀತಿಯಲ್ಲಿ ನಡೆದಿದ್ದು ಅದನ್ನು ಎಂಸಿಡಿ ಮುಂದುವರಿಸಲಿದೆ ಎಂದು ಅತಿಷಿ ತಿಳಿಸಿದ್ದಾರೆ. ಅಗತ್ಯ ಬಿದ್ದರೆ ದೆಹಲಿಯನ್ನು ಸ್ವಚ್ಛವಾಗಿಡಲು ಇನ್ನಷ್ಟು ಯಂತ್ರಗಳ ಖರೀದಿಗೆ ದೆಹಲಿ ಸರ್ಕಾರ ಬೆಂಬಲ ನೀಡಲಿದೆ. ಅದಕ್ಕಾಗಿ ಒಂದು ದಿನವೂ ಕಾಯುವುದಿಲ್ಲ ಎಂದು ಹೇಳಿದರು. ರಾಷ್ಟ್ರ ರಾಜಧಾನಿಯ ಸೌಂದರ್ಯವನ್ನು ಭವಿಷ್ಯದಲ್ಲೂ ಉಳಿಸಿಕೊಳ್ಳಲು ಪಿಡಬ್ಲು್ಯಡಿ ಮತ್ತು ದೆಹಲಿ ಮಹಾ ನಗರಪಾಲಿಕೆ (ಎಂಸಿಡಿ) ಒಟ್ಟಾಗಿ ಕೆಲಸ ಮಾಡಲಿವೆ ಎಂದು ನಗರಾಭಿವೃದ್ಧಿ ಸಚಿವ ಭಾರದ್ವಾಜ್ ಹೇಳಿದರು.
ದೆಹಲಿ ಘೊಷಣೆಯಲ್ಲಿ ಅನೇಕ ವಿಚಾರಗಳಲ್ಲಿ ಒಮ್ಮತ ಮೂಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಜಿ20 ಶೆರ್ಪಾ ಅಮಿತಾಬ್ ಕಾಂತ್ ಅವರನ್ನು ಉದ್ಯಮಿ ಆನಂದ್ ಮಹೀಂದ್ರಾ ಶ್ಲಾಘಿಸಿದ್ದಾರೆ. ಎಕ್ಸ್ ಪೋಸ್ಟ್​ನಲ್ಲಿ ಮಹೀಂದ್ರಾ, ರಾಜತಾಂತ್ರಿಕ ಅಧಿಕಾರಿ ಅಮಿತಾಬ್ ಕಾಂತ್​ಗೆ ‘ಎಕೆ-87: ಸಾಮೂಹಿಕ ರಾಜತಾಂತ್ರಿಕತೆಯ ಒಂದು ಸಾಧನ’ ಎಂದು ಬಿರುದು ನೀಡಿದ್ದಾರೆ.
ಟರ್ಕಿ ಬ್ಯಾಟಿಂಗ್: ಈ ನಡುವೆ, ಭಾರತದಂಥ ದೇಶ ವಿಶ್ವ ಸಂಸ್ಥೆ ಭದ್ರತಾ ಮಂಡಳಿಯ ಕಾಯಂ ಸದಸ್ಯವಾದರೆ ತಮ್ಮ ದೇಶಕ್ಕೆ ಹೆಮ್ಮೆಯೆನಿಸುತ್ತದೆ ಎಂದು ಟರ್ಕಿ ಅಧ್ಯಕ್ಷ ರೆಸಿಪ್ ತಯ್ಯಿಪ್ ಎಡೋಗನ್ ಭಾನುವಾರ ಹೇಳಿದ್ದಾರೆ.
ಜಿ-20 ನವದೆಹಲಿ ಘೊಷಣೆ, ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ‘ಧನಾತ್ಮಕ ಸಂದೇಶ’ ರವಾನಿಸಿದೆ ಎಂದು ಚೀನಾ ಸೋಮವಾರ ವರ್ಣಿಸಿದೆ. ಜಾಗತಿಕ ಸವಾಲುಗಳು ಮತ್ತು ಆರ್ಥಿಕ ಸಮಸ್ಯೆಯನ್ನು ಎದುರಿಸಲು ಪ್ರಭಾವಿ ಕೂಟದ ಸದಸ್ಯ ದೇಶಗಳು ಕೈಜೋಡಿಸುತ್ತಿವೆ ಎಂಬುದೇ ಆ ಸಂದೇಶವಾಗಿದೆ ಎಂದು ಅದು ಹೇಳಿದೆ. ಭಾರತದ ಅಧ್ಯಕ್ಷತೆಯಲ್ಲಿ ನಡೆದ ಶೃಂಗಸಭೆಯ ಮೊದಲ ದಿನವಾದ ಶನಿವಾರವೇ ಅಂಗೀಕರಿಸಿದ ದೆಹಲಿ ಘೊಷಣೆ, ರಷ್ಯಾ ಮತ್ತು ಉಕ್ರೇನ್ ಕುರಿತ ವಿಚಾರವನ್ನು ರಾಜತಾಂತ್ರಿಕವಾಗಿ ನಿರ್ವಹಿಸಿದ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ‘ಜಾಗತಿಕ ವಿಶ್ವಾಸದ ಕೊರತೆ’ಯನ್ನು ಅಂತ್ಯಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಈ ಸಂದರ್ಭ ಕರೆ ನೀಡಿದ್ದರು. ಭಾನುವಾರ ಮುಕ್ತಾಯವಾದ ಶೃಂಗಸಭೆಯ ಫಲಶೃತಿ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್, ಅಲ್ಲಿ ಬಿಡುಗಡೆಯಾದ ಘೊಷಣೆ ಉತ್ತಮ ಸೂಚನೆಯಾಗಿದೆ ಎಂದು ಹೇಳಿದರು. ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಪ್ರತಿನಿಧಿಸಿ ಪ್ರಧಾನಿ ಲೀ ಕ್ಸಿಯಾಂಗ್ ದೆಹಲಿ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು.
ಅಂತಾರಾಷ್ಟ್ರೀಯ ಮಹತ್ವದ ಜಿ-20 ಶೃಂಗಸಭೆ ಮುಕ್ತಾಯಗೊಂಡಿರುವುದರಿಂದ ನರೇಂದ್ರ ಮೋದಿ ಸರ್ಕಾರ ಈಗ ಹಣದುಬ್ಬರ, ನಿರುದ್ಯೋಗ ಮತ್ತು ಮಣಿಪುರ ಹಿಂಸಾಚಾರದಂಥ ಆಂತರಿಕ ಸಮಸ್ಯೆಗಳತ್ತ ಗಮನ ಹರಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಆಗ್ರಹಿಸಿದ್ದಾರೆ. 2024ರ ಸಾರ್ವತ್ರಿಕ ಚುನಾವಣೆಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ನಿರ್ಗಮನದ ದಾರಿ ತೋರಿಸಲು ಜನರು ಈಗಾಗಲೇ ಆರಂಭಿಸಿದ್ದಾರೆ ಎಂದು ತಮ್ಮ ಎಕ್ಸ್ ಖಾತೆಯ ಪೋಸ್ಟ್​ನಲ್ಲಿ ಖರ್ಗೆ ಬರೆದಿದ್ದಾರೆ. ಜೀವನಾವಶ್ಯಕ ವಸ್ತುಗಳ ಬೆಲೆಗಳು ಮತ್ತು ನಿರುದ್ಯೋಗದ ಏರಿಕೆಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ನೇತಾರ, ಸತ್ಯವನ್ನು ‘ಬಚ್ಚಿಡಲು’ ಪ್ರಧಾನಿ ನರೇಂದ್ರ ಮೋದಿ ಪ್ರಯತ್ನಿಸುತ್ತಿದ್ದಾರೆಂದು ಆರೋಪಿಸಿದ್ದಾರೆ. ವಿಮುಖಗೊಳಿಸುವ ವಿಷಯಗಳಿಗೆ ಗಮನ ಹರಿಸುವ ಬದಲು ಸತ್ಯವನ್ನು ಕೇಳಲು ಮತ್ತು ಕಾಣಲು ಸಾರ್ವಜನಿಕರು ಕಾತರರಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಾಮಾನ್ಯ ಥಾಲಿ ದರ ಶೇಕಡ 24ರಷ್ಟು ಹೆಚ್ಚಾಗಿದೆ. ನಿರುದ್ಯೋಗ ದರ ಶೇ. 8 ಆಗಿದೆ. ಯುವಜನರ ಭವಿಷ್ಯ ಮಂಕಾಗಿದೆ. ಮೋದಿ ಸರ್ಕಾರದ ‘ದುರಾಡಳಿತದಡಿ ಭ್ರಷ್ಟಾಚಾರದ ಪ್ರವಾಹ ಉಕ್ಕೇರಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ. ದೇಶದ ಮಹಾ ಲೆಕ್ಕ ಪರಿಶೋಧಕರು (ಸಿಎಜಿ) ಅನೇಕ ವರದಿಗಳಲ್ಲಿ ಬಿಜೆಪಿಯ ಭ್ರಷ್ಟತೆಯನ್ನು ಬಯಲುಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + fifteen =
Remember me
