ನವದೆಹಲಿ:ಸಂಸತ್ತಿನ ಮುಂಗಾರು ಅಧಿವೇಶನ ಶುರುವಾದ ದಿನದಿಂದಲೂ ಪ್ರತಿಭಟನೆ ನಡೆಸುತ್ತಿರುವ ವಿಪಕ್ಷ ಸದಸ್ಯರ ವರ್ತನೆ ಮಂಗಳವಾರ ಪುನಃ ಸಂಸದೀಯ ನಡವಳಿಕೆಯ ಚೌಕಟ್ಟು ಮೀರಿದೆ. ಕಾಂಗ್ರೆಸ್ ಸದಸ್ಯ ಪ್ರತಾಪ್ ಸಿಂಗ್ ಬಜ್ವಾ ಮೇಜಿನ ಮೇಲೇರಿ ಕಡತ ಒಂದನ್ನು ರಾಜ್ಯಸಭಾ ಅಧ್ಯಕ್ಷರ ಪೀಠದೆಡೆಗೆ ಎಸೆದು ಅಸಂಸದೀಯ ನಡವಳಿಕೆ ಪ್ರದರ್ಶಿಸಿದರು. ಈ ಹೈಡ್ರಾಮಾದ ಶುರುವಾದ ಸಂದರ್ಭದಲ್ಲೇ ಆಮ್ ಆದ್ಮಿ ಪಕ್ಷದ ಸದಸ್ಯ ಸಂಜಯ್ ಸಿಂಗ್ ಕೂಡ ರಿಪೋರ್ಟರ್ಸ್ ಟೇಬಲ್ ಮೇಲೇರಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದರು. ಕಾಂಗ್ರೆಸ್ ಪಕ್ಷದ ದೀಪೇಂದರ್ ಹೂಡಾ, ರಾಜಮಣಿ ಪಟೇಲ್, ಸಿಪಿಐನ ಬಿನೋಯ್ ವಿಶ್ವಂ, ಸಿಎಂನ ವಿ.ಶಿವದಾಸನ್ ಅವರು ಟೇಬಲ್ ಮೇಲೇರಿ ಕುಳಿತು ಘೋಷಣೆ ಕೂಗತೊಡಗಿದರು.ಈ ಘಟನೆ ನಡೆದಾಗ ಸಭಾಧ್ಯಕ್ಷರ ಪೀಠದಲ್ಲಿ ಭುಬನೇಶ್ವರ ಕಲಿಟಾ ಇದ್ದರು. ಕಲಾಪವನ್ನು 15 ನಿಮಿಷ ಕಾಲ ಮುಂದೂಡಿದ್ದರು. ಪ್ರತಿಪಕ್ಷ ಸದಸ್ಯರ ಗದ್ದಲ ಮುಂದುವರಿದ ಕಾರಣ ಬಳಿಕ ರಾಜ್ಯಸಭೆ ಕಲಾಪವನ್ನು ದಿನದಮಟ್ಟಿಗೆ ಮುಂದೂಡಲಾಗಿದೆ.
ಇದೇ ಮೊದಲ ಬಾರಿಗೆ ಡಿಜಿಟಲ್​ ಜನಗಣತಿ:ಈ ವರ್ಷ ನಡೆಯುವ ಸಾರ್ವತ್ರಿಕ ಜನಗಣತಿಯು ಡಿಜಿಟಲ್ ಸ್ವರೂಪದ್ದಾಗಿರಲಿದೆ. ಇದೇ ಮೊದಲ ಬಾರಿಗೆ ದೇಶದಲ್ಲಿ ಈ ವಿಧಾನದ ಗಣತಿ ಕಾರ್ಯ ನಡೆಯಲಿದೆ. ಗಣಿದಾರರಿಗೆ ಈ ಮೊಬೈಲ್ ಆಪ್ ಬಳಸುವ ಬಗ್ಗೆ ತರಬೇತಿ ನೀಡಲಾಗುತ್ತದೆ ಎಂದು ಸರ್ಕಾರ ಸಂಸತ್​ಗೆ ತಿಳಿಸಿದೆ. ಗಣತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಜಾತಿಯನ್ನು ಮಾತ್ರ ನಮೂದು ಮಾಡಲಾಗುತ್ತದೆ. ಇತರ ಜಾತಿಗಳನ್ನು ಅಲ್ಲ ಎಂದು ಸ್ಪಷ್ಟ ಪಡಿಸಿದೆ.
ಕಾಶ್ಮೀರದಲ್ಲಿ ಇಬ್ಬರು ಹೊರಗಿನವರಿಂದ ಆಸ್ತಿ ಖರೀದಿ:ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಯ ನಂತರ ಅಲ್ಲಿ ಈವರೆಗೆ ಹೊರಗಿನವರು ಇಬ್ಬರು ಮಾತ್ರ ಆಸ್ತಿ ಖರೀದಿ ಮಾಡಿದ್ದಾರೆ ಎಂದು ಗೃಹ ಸಚಿವ ನಿತ್ಯಾನಂದ ರೈ ಲೋಕಸಭೆಗೆ ಲಿಖಿತ ಉತ್ತರ ನೀಡಿದ್ದಾರೆ.
ಬಿಜೆಪಿಯ ಸದಸ್ಯರ ಗೈರಿನ ಬಗ್ಗೆ ಪ್ರಧಾನಿ ಅಸಮಾಧಾನ:ರಾಜ್ಯಸಭೆಯಲ್ಲಿ ಸೋಮವಾರ ಕಲಾಪ ನಡೆದ ವೇಳೆ ಬಿಜೆಪಿಯ ಸದಸ್ಯರು ಗೈರು ಹಾಜರಾಗಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಕರ್ತವ್ಯ ನಿರ್ಲಕ್ಷ್ಯ ತೋರಿದ ಬಿಜೆಪಿ ಸದಸ್ಯರ ಪಟ್ಟಿ ನೀಡುವಂತೆ ಅವರು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಸೂಚಿಸಿದ್ದಾರೆ. ಪಕ್ಷದ ಸಂಸದೀಯ ಸಭೆಯನ್ನು ಉದ್ದೇಶಿಸಿದ ಮಾತನಾಡಿದ ಪ್ರಧಾನಿ ಮೋದಿ, ರಾಜ್ಯಸಭೆಯಲ್ಲಿ ಸದಸ್ಯಬಲ ಇಲ್ಲದ ಕಾರಣ ಮಸೂದೆ ಅಂಗೀಕಾರವಾಗಲಿಲ್ಲ. ಈಗ ಗೈರಾದವರ ವಿವರ ಪಡೆಯುವುದೊಂದೇ ದಾರಿ ಉಳಿದಿರುವುದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
20 ಸದಸ್ಯರು ಗೈರಾಗಿದ್ದೇಕೆ?:ಲೋಕಸಭೆಯಲ್ಲಿ ನ್ಯಾಯಾಧಿಕರಣ ಸುಧಾರಣಾ ಮಸೂದೆ 2021 ಆಗಸ್ಟ್ 3ರಂದು ಅಂಗೀಕಾರವಾಗಿದೆ. ರಾಜ್ಯಸಭೆ ಯಲ್ಲಿ ನ್ಯಾಯಾಧಿಕರಣ ಸುಧಾರಣಾ ಮಸೂದೆ ಮಂಡನೆ ವೇಳೆ 20ರಷ್ಟು ಬಿಜೆಪಿ ಸದಸ್ಯರು ಗೈರಾಗಿದ್ದರು. ಇದಕ್ಕೆ ಕಾರಣವೇನು ಎಂಬುದು ಕುತೂಹಲ ಕೆರಳಿಸಿದೆ.
ಕರ್ನಾಟಕ ಸೇರಿ 17 ರಾಜ್ಯಗಳಿಗೆ ಐದನೇ ಕಂತಿನ ಆದಾಯ ಕೊರತೆ ಅನುದಾನವಾಗಿ 9,871 ಕೋಟಿ ರೂ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಇದರೊಂದಿಗೆ ಪ್ರಸಕ್ತ ವರ್ಷ ಒಟ್ಟು 49,355 ಕೋಟಿ ರೂ. ಆದಾಯ ಕೊರತೆ ಅನುದಾನವನ್ನು ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ತೆರಿಗೆ ವರ್ಗಾವಣೆ ನಂತರ ರಾಜ್ಯಗಳ ಆದಾಯ ಖೋತಾವನ್ನು ತುಂಬಲು ಹದಿನೈದನೇ ಹಣಕಾಸು ಆಯೋಗದ ಶಿಫಾರಸುಗಳ ಅನುಸಾರ ಮಾಸಿಕ ಕಂತುಗಳಲ್ಲಿ ಅನುದಾನಗಳನ್ನು ಬಿಡುಗಡೆ ಮಾಡಲಾಗು ತ್ತದೆ. ಆಯೋಗವು 2021-22ರ ಅವಧಿಯಲ್ಲಿ 17 ರಾಜ್ಯಗಳಿಗೆ ಪಿಡಿಆರ್​ಡಿ ಅನುದಾನ ಶಿಫಾರಸು ಮಾಡಿದೆ. ಈ ಅನುದಾನವನ್ನು ಸ್ವೀಕರಿಸಲು ರಾಜ್ಯಗಳ ಅರ್ಹತೆ, ಅನುದಾನದ ಪ್ರಮಾಣವನ್ನು ಆಯೋಗವು ಆದಾಯದ ಮೌಲ್ಯಮಾಪನ, ರಾಜ್ಯದ ಖರ್ಚಿನ ನಡುವಿನ ಅಂತರವನ್ನು ಆಧರಿಸಿ ನಿರ್ಧರಿಸುತ್ತದೆ. 2021-22ನೇ ಆರ್ಥಿಕ ವರ್ಷಕ್ಕೆ ತೆರಿಗೆ ಹಂಚಿಕೆ ಮೌಲ್ಯಮಾಪನವನ್ನು ಆಯೋಗವು ಗಣನೆಗೆ ತೆಗೆದುಕೊಂಡಿದೆ. ಹದಿನೈದನೇ ಹಣಕಾಸು ಆಯೋಗವು 2021-22ರ ಆರ್ಥಿಕ ವರ್ಷದಲ್ಲಿ 17 ರಾಜ್ಯಗಳಿಗೆ ಒಟ್ಟು 1,18,452 ಕೋಟಿ ರೂ.ಗಳ ತೆರಿಗೆ ಹಂಚಿಕೆ ನಂತರದ ಆದಾಯ ಕೊರತೆ ಅನುದಾನವನ್ನು ಶಿಫಾರಸು ಮಾಡಿದೆ.
ರಾಜ್ಯಕ್ಕೆ 135.92 ಕೋಟಿ ರೂ.:ಕರ್ನಾಟಕಕ್ಕೆ ಐದನೇ ಕಂತಿನಲ್ಲಿ 135.92 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, ಇದುವರೆಗೆ ಈ ವರ್ಷ 679.58 ಕೋಟಿ ರೂಪಾಯಿ ಬಿಡುಗಡೆಯಾಗಿದೆ.
ಶಿಫಾರಸು ಮಾಡಲ್ಪಟ್ಟ ರಾಜ್ಯಗಳು:ಆಂಧ್ರಪ್ರದೇಶ, ಅಸ್ಸಾಂ, ಹರಿಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಕೇರಳ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತ್ರಿಪುರಾ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + four =
Remember me
