|ಜಗನ್ ರಮೇಶ್ಬೆಂಗಳೂರು
‘ವ್ಯಾಪಾರಂ ದ್ರೋಹ ಚಿಂತನಂ’ ಎಂಬುದು ಲೋಕೋಕ್ತಿ. ವರ್ತಕರ ಅತಿಯಾದ ಲಾಭದ ಆಸೆಗೆ ಗ್ರಾಹಕರು ಅನಾದಿ ಕಾಲದಿಂದ ಬಲಿಪಶುಗಳಾಗುತ್ತಲೇ ಇದ್ದಾರೆ. ಹಣ ಪಾವತಿಸಿ ಸರಕು ಅಥವಾ ಸೇವೆಗಳನ್ನು ಪಡೆದುಕೊಳ್ಳುವ ಗ್ರಾಹಕ ವ್ಯಾಪಾರಿಗಳಿಂದ ವಿವಿಧ ರೂಪಗಳಲ್ಲಿ ಮೋಸ ಹೋಗುತ್ತಿದ್ದಾನೆ. ಸೇರು, ಪಾವು, ತಕ್ಕಡಿಗಳಿಂದ ಅಳೆದು ಮಾರಾಟ ಮಾಡುತ್ತಿದ್ದ ಕಾಲದಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಮೋಸ ನಡೆಯುತ್ತಲೇ ಇದೆ. ಆದರೆ ಇದೀಗ ಕಾಲ ಬದಲಾಗಿದೆ. ಗ್ರಾಹಕರಿಗೂ ಅವರದ್ದೇ ಆದ ಹಕ್ಕುಗಳಿವೆ. ಅಳತೆಯಲ್ಲಿ ವ್ಯತ್ಯಾಸ, ನಕಲಿ ವಸ್ತುಗಳು, ಕಲಬೆರಕೆ ಅನೇಕ ಕಾರಣಗಳಿಂದ ವ್ಯಾಪಾರಿಗಳಿಂದ ಗ್ರಾಹಕರ ಮೇಲಾಗುತ್ತಿರುವ ಶೋಷಣೆಗೆ ಕಡಿವಾಣ ಹಾಕಲು ಹಾಗೂ ವ್ಯಾಪಾರದಲ್ಲಿನ ವಂಚನೆಗಳನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ 1986ರಲ್ಲಿ ‘ಗ್ರಾಹಕರ ಸಂರಕ್ಷಣಾ ಕಾಯ್ದೆ’ಯನ್ನು ಜಾರಿಗೊಳಿಸಿದೆ. ಈ ಮೂಲಕ, ಹಣ ಪಾವತಿಸಿ ಖರೀದಿಸುವ ವಸ್ತು ಅಥವಾ ಸೇವೆಯಲ್ಲಿ ಯಾವುದೇ ರೀತಿಯ ಲೋಪದೋಷಗಳಿದ್ದರೆ ಅದನ್ನು ಪ್ರಶ್ನಿಸುವ ಹಕ್ಕನ್ನು ಗ್ರಾಹಕರಿಗೆ ಒದಗಿಸಲಾಗಿದೆ. ಗ್ರಾಹಕರಿಗಾಗಿ ಏನೆಲ್ಲ ಹಕ್ಕುಗಳಿವೆ, ಅದನ್ನು ಪಡೆಯುವುದೇಗೆ ಎಂಬುದರ ಸಮಗ್ರ ಮಾಹಿತಿ ಇಲ್ಲಿದೆ.
ಖರೀದಿಸಿದ ವಸ್ತು ಅಥವಾ ಪಡೆದ ಸೇವೆಯಿಂದ ಗ್ರಾಹಕನಿಗೆ ನಿರೀಕ್ಷಿತ ಪ್ರಮಾಣದಲ್ಲಿ ತೃಪ್ತಿ ಸಿಗದಿದ್ದರೆ, ಗ್ರಾಹಕನಾಗಿ ಅನ್ಯಾಯಕ್ಕೊಳಗಾಗಿದ್ದೇನೆ ಎನಿಸಿದಾಗ ಪರಿಹಾರ ಕೋರಿ ಕೋರ್ಟ್ ಮೊರೆ ಹೋಗಬಹುದು. ಆದರೆ, ಅದಕ್ಕೂ ಮುನ್ನ ವರ್ತಕರಿಗೆ ಖುದ್ದಾಗಿ ಅಥವಾ ವಕೀಲರ ಮೂಲಕ ನೋಟಿಸ್ ಜಾರಿಗೊಳಿಸಿ, ಅವರಿಗಾದ ಸಮಸ್ಯೆ ಹಾಗೂ ಆ ಸಮಸ್ಯೆಗೆ ಪರಿಹಾರ ಕೋರಬೇಕು. ನೋಟಿಸ್ ನೀಡಿದ 15 ದಿನಗಳ ಒಳಗೆ ಉತ್ತರ ಬಾರದಿದ್ದಲ್ಲಿ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿ ಪರಿಹಾರ ಕೋರಬಹುದು. ಈ ವೇಳೆ, ವಸ್ತುಗಳನ್ನು ಇಂಥ ವರ್ತಕರಿಂದಲೇ ಖರೀದಿಸಲಾಗಿದೆ ಎಂಬುದನ್ನು ಸಾಬೀತು ಪಡಿಸುವ ರಸೀದಿ ಹಾಗೂ ಇತರ ದಾಖಲೆಗಳನ್ನು ಕಡ್ಡಾಯವಾಗಿ ದೂರಿನೊಂದಿಗೆ ಲಗತ್ತಿಸಬೇಕು. ಮೋಸ ಹೋದ ದಿನದಿಂದ 2 ವರ್ಷಗಳ ಒಳಗೆ ಯಾವಾಗ ಬೇಕಿದ್ದರೂ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಬಹುದು. ಇದೊಂದು ಸರಳವಾದ ಕಾನೂನು ಪ್ರಕ್ರಿಯೆಯಾಗಿದ್ದು, ಸಿವಿಲ್ ಪ್ರೊಸೀಜರ್ ಕೋಡ್​ನಲ್ಲಿರುವ ಕಠಿಣ ನಿಯಮಗಳಾಗಲಿ, ಸಾಕ್ಷ್ಯಾಧಾರ ಕಾಯ್ದೆಯ ನಿಯಮಗಳನ್ನಾಗಲಿ ಪಾಲನೆ ಮಾಡಬೇಕೆಂದಿಲ್ಲ. ಗ್ರಾಹಕ ವೇದಿಕೆಯಲ್ಲಿ ದೂರುದಾರರಿಗೆ ಸುಲಭವಾಗಿ ಹಾಗೂ ತ್ವರಿತವಾಗಿಯೂ ನ್ಯಾಯ ಸಿಗಲಿದೆ.
ಸರಕು ಅಥವಾ ಸೇವೆಗಳನ್ನು ಹಣ ನೀಡಿ ಪಡೆದುಕೊಳ್ಳುವ ಪ್ರತಿಯೊಬ್ಬರಿಗೂ ಮೂಲ ಅಗತ್ಯಗಳನ್ನು ಪೂರೈಸುವ ಹಕ್ಕು, ಸುರಕ್ಷತೆಯ ಹಕ್ಕು, ಮಾಹಿತಿ ಪಡೆಯುವ ಹಕ್ಕು, ಆಯ್ಕೆ ಹಕ್ಕು, ಕೇಳಿಸಿಕೊಳ್ಳುವ ಹಕ್ಕು, ಪರಿಹಾರ ಪಡೆಯುವ ಹಕ್ಕು, ಗ್ರಾಹಕ ಶಿಕ್ಷಣದ ಹಕ್ಕು ಹಾಗೂ ಆರೋಗ್ಯಕರ ಮತ್ತು ಉತ್ತಮ ಪರಿಸರದ ಹಕ್ಕುಗಳು ಇರುತ್ತವೆ. ಈ 8 ಹಕ್ಕುಗಳಲ್ಲಿ ಪರಿಹಾರ ಪಡೆಯುವ ಹಕ್ಕುಗಳ ಅನ್ವಯ 1986ರಲ್ಲಿ ಗ್ರಾಹಕ ಸಂರಕ್ಷಣಾ ಅಧಿನಿಯಮವನ್ನು ಜಾರಿಗೆ ತರಲಾಗಿದೆ. ಈ ಕಾನೂನಿನ ಅಡಿಯಲ್ಲಿ ಯಾವುದೇ ವ್ಯಕ್ತಿ ತಾನು ಖರೀದಿಸಿದ ವಸ್ತು ದೋಷಪೂರಿತವಾಗಿದ್ದರೆ ಅಥವಾ ಪಡೆದ ಸೇವೆಯಲ್ಲಿ ನ್ಯೂನತೆ ಇದ್ದರೆ ಪರಿಹಾರ ಪಡೆಯಲು ಅರ್ಹನಾಗಿರುತ್ತಾನೆ. ಕಾನೂನು ಅನುಷ್ಠಾನಕ್ಕೆಂದೇ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ, ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಹಾಗೂ ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಗಳೆಂಬ ಮೂರು ಹಂತದ ಗ್ರಾಹಕ ನ್ಯಾಯಾಲಯಗಳನ್ನು ರಚಿಸಲಾಗಿದೆ.
ಕಾಲ ಬದಲಾದಂತೆ ವ್ಯಾಪಾರ ಪದ್ಧತಿಯಲ್ಲೂ ಬದಲಾವಣೆಗಳಾಗುತ್ತಿವೆ. ಸೇರು, ತಕ್ಕಡಿಗಳ ಜಾಗದಲ್ಲಿ ಡಿಜಿಟಲ್ ಮಾಪಕಗಳು ಬಂದಿವೆ. ವ್ಯಾಪಾರದಲ್ಲಿ ವಂಚಿಸುವ ರೀತಿಯೂ ಬದಲಾಗುತ್ತಿವೆ. ಅಂತೆಯೇ, ಕಾಲಕ್ಕೆ ತಕ್ಕಂತೆ ಕಾಯ್ದೆ ಕಾನೂನುಗಳಲ್ಲಿ ಬದಲಾವಣೆ ತರುವುದೂ ಅತ್ಯಗತ್ಯವಾಗಿರುತ್ತದೆ. ಹಳೆಯ ಕಾನೂನುಗಳನ್ನು ಬದಲಿಸುವುದು ಅಥವಾ ಅವುಗಳಿಗೆ ತಿದ್ದುಪಡಿ ತಂದು ಈ ಕಾಲದ ಅಗತ್ಯತೆಗಳಿಗೆ ತಕ್ಕಂತೆ ನವೀಕರಿಸಬೇಕಾಗುತ್ತದೆ. ಇನ್ನು ಗ್ರಾಹಕ ಹಿತರಕ್ಷಣಾ ಕಾಯ್ದೆ ಜಾರಿಗೆ ಬಂದಾಗ ಆನ್​ಲೈನ್ ಮಾರುಕಟ್ಟೆಗಳಿರಲಿಲ್ಲ. ಆಗೇನಿದ್ದರೂ ನೇರ ವ್ಯಾಪಾರವಿತ್ತು. ಇತ್ತೀಚಿನ ದಿನಗಳಲ್ಲಿ ಆನ್​ಲೈನ್ ಪ್ಲಾಟ್​ಫಾಮರ್್​ಗಳೂ ಬಂದಿವೆ. ಇದನ್ನು ಗಮನದಲ್ಲಿಟ್ಟುಕೊಂಡು 2019ರಲ್ಲಿ ಕಾಯ್ದೆಗೆ ತಿದ್ದುಪಡಿ ತಂದು ಆನ್​ಲೈನ್ ವೇದಿಕೆಗಳನ್ನೂ ಕಾಯ್ದೆಯ ವ್ಯಾಪ್ತಿಗೆ ತರಲಾಗಿದೆ.
ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

ಹತ್ತನೇ ತರಗತಿ ವಿದ್ಯಾರ್ಥಿನಿಗೆ ಹೃದಯಾಘಾತ; ಫ್ರೆಂಡ್ ಜತೆ ಮಾತನಾಡುತ್ತಲೇ ಕುಸಿದು ಬಿದ್ದು ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 1 =
Remember me
