ಭೋಪಾಲ್:ಕರೊನಾ ಬಿಕ್ಕಟ್ಟಿಗೆ ಸಿಲುಕಿರುವ ಸಂತ್ರಸ್ಥರಿಗೆ ನೆರವು ನೀಡುವ ನೆಪದಲ್ಲಿ ಅವರನ್ನು ಮತಾಂತರ ಮಾಡುತ್ತಿರುವ ಘಟನೆ ಭೋಪಾಲ್​ನಲ್ಲಿ ಸಾಗರ್ ಜಿಲ್ಲೆಯಲ್ಲಿ ಇದೀಗ ಬೆಳಕಿಗೆ ಬಂದಿದೆ.
ಲಾಕ್​ಡೌನ್ ಸಂತ್ರಸ್ತರಿಗೆ ರೇಷನ್​ ನೀಡುವ ನೆಪದಲ್ಲಿ ಅವರ ಅರಿವಿಗೆ ಬಾರದೇ ಮತಾಂತರ ಮಾಡುತ್ತಿರುವ ಪ್ರಕರಣ ಇದಾಗಿದೆ. ಆದರೆ ಅಚ್ಚರಿಯ ವಿಷಯ ಎಂದರೆ ತಾವು ಮತಾಂತರಕ್ಕೊಳಗಾಗುತ್ತಿದ್ದೇವೆ ಎಂಬ ಅರಿವೇ ಇಲ್ಲದ ಈ ಜನರು, ಇದುವರೆಗೆ ದೂರನ್ನೂ ದಾಖಲು ಮಾಡಿಲ್ಲ!
ಮಾನವ್ ವಿಕಾಸ್ ಸೇವಾ ಸಂಘ ಎಂಬ ಹೆಸರಿನಲ್ಲಿರುವ ಕ್ರೈಸ್ತ ಮಿಷನರಿ ಈ ಕೆಲಸವನ್ನು ಮಾಡುತ್ತಿರುವುದು ಪೊಲೀಸ್​ ತನಿಖೆಯಿಂದ ಬಹಿರಂಗಗೊಂಡಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಮಧ್ಯಪ್ರದೇಶದ ಐದು ಜಿಲ್ಲೆಗಳಲ್ಲಿ ಕಳೆದ ಮೂರು ದಶಕಗಳಿಂದ ಕಾರ್ಯನಿರ್ವಹಿಸುತ್ತಿದೆ ಈ ಸಂಘ.
ಇದನ್ನು ಓದಿ:ಚೀನಾಕ್ಕೆ ಗುದ್ದು: ₹5 ಸಾವಿರ ಕೋಟಿ ಒಪ್ಪಂದಕ್ಕೆ ತಡೆ ನೀಡಿದ ಮಹಾರಾಷ್ಟ್ರ
ಅಷ್ಟಕ್ಕೂ ಮತಾಂತರ ಹೇಗೆ ನಡೆಯುತ್ತಿದೆ ಎನ್ನುವುದೇ ವಿಚಿತ್ರವಾದದ್ದು. ದಲಿತರು ಮತ್ತು ಬುಡಕಟ್ಟು ಜನಾಂಗದವರು ಹೆಚ್ಚಿಗೆ ಇರುವ ಈ ಭಾಗದಲ್ಲಿ ಕಾರ್ಮಿಕರ ಸಂಖ್ಯೆ ಹೆಚ್ಚಿದೆ. ಲಾಕ್​ಡೌನ್​ ನಂತರ ದೆಹಲಿ, ಮಹಾರಾಷ್ಟ್ರ ಮತ್ತು ಗುಜರಾತ್‌ನಿಂದ 50 ಸಾವಿರಕ್ಕೂ ಅಧಿಕ ವಲಸಿಗರು ಇಲ್ಲಿಗೆ ವಾಪಸಾಗಿದ್ದಾರೆ.
ಇಂಥ ಕಾರ್ಮಿಕರ ಪೈಕಿ ಹೆಚ್ಚಿನವರು ತಾವು ತೊಟ್ಟುಕೊಂಡಿರುವ ಬಟ್ಟೆಗಳನ್ನು ಹೊರತುಪಡಿಸಿದರೆ ಹೆಚ್ಚಿನ ಸಾಮಗ್ರಿಗಳೇನೂ ತಂದಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಮಾನವ್ ವಿಕಾಸ್ ಸೇವಾ ಸಂಘ, ಈ ಜನರಿರುವಲ್ಲಿ ಬಂದು ಪಡಿತರನ್ನು ನೀಡಿದೆ. ಪಡಿತರ ನೀಡುವ ಸಮಯದಲ್ಲಿ ಅವರ ಅರಿವಿಗೆ ಬಾರದೇ ಮತಾಂತರ ಮಾಡುತ್ತಿರುವ ಆರೋಪ ಇದೆ.
ಈ ಬಗ್ಗೆ ತಮಗಾಗಿರುವ ಅನುಭವವನ್ನು ಮಹಿಳೆಯೊಬ್ಬರು ಹೀಗೆ ಹೇಳಿಕೊಂಡಿದ್ದಾರೆ.’ನನಗೆ ಗೋಧಿ ಹಿಟ್ಟು, ಅಕ್ಕಿ, ಬೇಳೆಕಾಳುಗಳು ಮತ್ತು 1 ಕೆಜಿ ಈರುಳ್ಳಿ ಮತ್ತು ಆಲೂಗಡ್ಡೆ ನೀಡಲಾಯಿತು, ಪಡಿತರ ಕಿಟ್ ನೀಡುವ ಸಮಯದಲ್ಲಿ ಪ್ರಾರ್ಥನೆ ಸಲ್ಲಿಸುವಂತೆ ಅವರು ಹೇಳಿದರು. ನಾನು ಹಾಗೇ ಮಾಡಿದೆ. ಆಗ ಇನ್ನೊಬ್ಬರು ನನ್ನ ಬಳಿ ಬಂದು, ನನ್ನ ಕಣ್ಣುಗಳನ್ನು ಮುಚ್ಚುವಂತೆ ಹೇಳಿದರು. ನಂತರ ಪಡಿತರ ಕಿಟ್ ಅನ್ನು ನನಗೆ ಹಸ್ತಾಂತರಿಸಿದ ವ್ಯಕ್ತಿ ಹೇಳಿದ ವಾಕ್ಯಗಳನ್ನು ಪುನರಾವರ್ತಿಸಲು ನನ್ನನ್ನು ಕೇಳಲಾಯಿತು ಎಂದು ಹೇಳಿದ್ದಾರೆ. ಆದರೆ ಈ ರೀತಿ ಯಾಕೆ ಮಾಡಿದರು ಎಂದು ತಮಗೂ ಗೊತ್ತಿಲ್ಲ ಎಂದು ಮಹಿಳೆ ಹೇಳಿದ್ದಾರೆ.
ಈ ಬಗ್ಗೆ ಸ್ಥಳೀಯ ಮಾಧ್ಯಮಗಳು ಮತಾಂತರದ ಕುರಿತಂತೆ ವರದಿ ಮಾಡಿದಾಗ ಪೊಲೀಸ್​ ಇಲಾಖೆ ಈ ಬಗ್ಗೆ ತನಿಖೆ ನಡೆಸಿದೆ. ಆಗ ಕ್ಯಾಥೊಲಿಕ್ ಸಂಘಟನೆಯು ಬಡವರಿಗೆ ಆಮಿಷ ಒಡ್ಡಿ ಅವರನ್ನು ಪ್ರಯತ್ನಿಸುತ್ತಿದೆ ಎಂಬ ಬಗ್ಗೆ ಮೇಲ್ನೋಟಕ್ಕೆ ಕಂಡುಬಂದಿದೆ. ಆದರೆ ಈ ಸಂಘಟನೆಯು ಆರೋಪವನ್ನು ನಿರಾಕರಿಸಿದೆ. ಆದರೆ ತಾವು ಮತಾಂತರಗೊಳ್ಳುತ್ತಿದ್ದೇವೆ ಎಂಬ ಬಗ್ಗೆ ಅರಿವು ಇಲ್ಲದ ಜನರು ಈ ಬಗ್ಗೆ ದೂರು ದಾಖಲು ಮಾಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ.(ಏಜೆನ್ಸೀಸ್​)
ಚೀನಾಕ್ಕೆ ಗುದ್ದು: ₹5 ಸಾವಿರ ಕೋಟಿ ಒಪ್ಪಂದಕ್ಕೆ ತಡೆ ನೀಡಿದ ಮಹಾರಾಷ್ಟ್ರ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 + ten =
Remember me
