ಕೋಲ್ಕತ:ವಯಸ್ಕ ಯುವತಿ ಅನ್ಯಧರ್ವಿುಯ ಪುರುಷನನ್ನು ತನ್ನಿಚ್ಛೆಯಂತೆ ಮದುವೆಯಾಗಿ, ಮತಾಂತರಗೊಂಡಿದ್ದರೆ ಆ ವಿಚಾರದಲ್ಲಿ ಯಾರೊಬ್ಬರ ಹಸ್ತಕ್ಷೇಪಕ್ಕೂ ಅವಕಾಶ ಇಲ್ಲ ಎಂದು ಕಲ್ಕತ್ತ್ತ ಹೈಕೋರ್ಟ್ ತೀರ್ಪು ನೀಡಿದೆ. ಪ್ರಭಾವ ಬಳಸಿ 19 ವಯಸ್ಸಿನ ಮಗಳನ್ನು ಮದುವೆ ಮಾಡಿಕೊಂಡು, ಮತಾಂತರ ಮಾಡಲಾಗಿದೆ ಎಂದು ತಂದೆಯೊಬ್ಬರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.
ಮ್ಯಾಜಿಸ್ಟ್ರೇಟ್ ಕೋರ್ಟ್​ನಲ್ಲಿ ಆಕೆ, ‘ತನ್ನಿಚ್ಛೆಯಂತೆ ಮದುವೆಯಾಗಿದ್ದೇನೆ’ ಎಂದು ಹೇಳಿಕೆ ನೀಡಿದ್ದರೂ, ಬಿಗಿಯಾದ ಸನ್ನಿವೇಶದ ಒತ್ತಡಕ್ಕೆ ಸಿಲುಕಿ ಆಕೆ ಹಾಗೆ ಹೇಳಿಕೆ ನೀಡಿದ್ದಾಳೆಂದು ತಂದೆ ಆಪಾದಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಪೀಠ ತನ್ನಿಷ್ಟದಂತೆ ಮದುವೆ, ಮತಾಂತರಗೊಂಡು ಹೆತ್ತವರ ಬಳಿ ವಾಪಸಾಗುವುದಿಲ್ಲ ಎಂಬ ಯುವತಿಯನ್ನು ನಾವು ತಡೆಯಲಾಗದು ಎಂದು ಅರ್ಜಿದಾರರಿಗೆ ತಿಳಿಸಿತು.
ಹಾಗಿದ್ದರೂ ತಂದೆಯ ಅನುಮಾನಗಳನ್ನು ಬಗೆಹರಿಸಲು ಯುವತಿಗೆ ಪಬ್ಲಿಕ್ ಪ್ರಾಸಿಕ್ಯೂಟರ್​ರನ್ನು ಭೇಟಿ ಮಾಡಿ ಹೇಳಿಕೆ ನೀಡುವಂತೆ ಹೈಕೋರ್ಟ್ ಸೂಚಿಸಿದೆ.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ಡಿಟಿಎಚ್​ ಪರಿಷ್ಕೃತ ಮಾರ್ಗದರ್ಶಿಗೆ ಸಚಿವ ಸಂಪುಟ ಒಪ್ಪಿಗೆ – ಪರವಾನಗಿ 20 ವರ್ಷಕ್ಕೆ, ಎಫ್​ಡಿಐ 100%

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
