ತಿರುವನಂತಪುರಂ:ಜೈಲಿನಲ್ಲಿ ತನಗೆ ಕಡಿಮೆ ಊಟ ಬಡಿಸುತ್ತಿದ್ದಾರೆ ಎಂದು ಆರೋಪಿಸಿ ಕೈದಿಯೋರ್ವ ಪೊಲೀಸ್​ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿರುವ ಘಟನೆ ಕೇರಳದಲ್ಲಿ ನಡೆದಿದೆ.
ಡ್ರಗ್ಸ್​ ಪ್ರಕರಣದಲ್ಲಿ ಶಿಕ್ಷೆ ಎದುರಿಸುತ್ತಿರುವ ವಯನಾಡ್ ಮೂಲದ ಫೈಜಾಸ್ ಎಂಬ ಕೈದಿಯನ್ನು ಪೂಜಾಪುರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಜೈಲಿನ ಹಿರಿಯ ಅಧಿಕಾರಿ ಒಬ್ಬರು ಶನಿವಾರದ ಮೆನುವಿನ ಪ್ರಕಾರ ಕೈದಿಗಳಿಗೆ ಊಟಕ್ಕೆ ಮಟನ್​ ಕರಿಯನ್ನು ನೀಡಲಾಗಿತ್ತು. ಈ ವೇಳೆ ಫೈಜಾಸ್ ತನಗೆ ಕಡಿಮೆ ಆಹಾರ ಬಡಿಸಲಾಗಿದೆ ಎಂದು ಆರೋಪಿಸಿ ತಟ್ಟೆಯನ್ನು ಕಸದ ಬುಟ್ಟಿಗೆ ಎಸೆದಿದ್ದಾನೆ.
ಇದನ್ನೂ ಓದಿ:ಅಡುಗೆಮನೆಯಲ್ಲಿ ಶುರುವಾದ ವಾಗ್ವಾದ; ಪ್ರಿಯಕರನನ್ನು ಚುಚ್ಚಿ ಕೊಂದ ಪ್ರಿಯತಮೆ
ಆಹಾರವನ್ನು ಎಸೆದಿದ್ದನ್ನು ಪ್ರಶ್ನಿಸಿದ ಅಧಿಕಾರಿಗಳ ಮೇಲೆ ಆರೋಪಿಯೂ ಏಕಾಏಕಿ ದಾಳಿ ಮಾಡಿದ್ದು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಜೈಲಿನ ಅಧಿಕಾರಿಗಳ ದೂರಿನ ಮೇರೆಗೆ ಪೈಜಾಸ್​ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೂಜಾಪುರ ಪೊಲೀಸರು ತಿಳಿಸಿದ್ದಾರೆ.
ಆರೋಪಿಯೂ ಈ ಹಿಂದೆ ತಾನಿದ್ದ ಜೈಲುಗಳಲ್ಲಿ ಅಧಿಕಾರಿಗಳ ಮೇಲೆ ಹಲವು ಭಾರಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಪೈಜಾಸ್​ನನ್ನು ಪ್ರಸ್ತುತ ವಿಶೇಷ ಸೆಲ್​​ನಲ್ಲಿ ಇರಿಸಲಾಗಿದೆ ಎಂದು ಜೈಲಿನ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
