ಭೋಪಾಲ್​:ಮಧ್ಯಪ್ರದೇಶದ ಗ್ವಾಲಿಯರ್ ಕೇಂದ್ರ ಕಾರಾಗೃಹದಲ್ಲಿ ಕೈದಿಯೊಬ್ಬ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡಿದ್ದು, ಇದೀಗ ಸಾವು- ಬದುಕಿನ ನಡುವೆ ಹೋರಾಟ ನಡೆಸಿದ್ದಾನೆ.
ವಿಷ್ಣು ಕುಮಾರ್ ಎಂಬ 25 ವರ್ಷದ ಯುವಕ ಈ ಕೃತ್ಯ ಎಸಗಿದ್ದಾನೆ. ಈತನ ಮೇಲೆ ಕೊಲೆ ಮತ್ತು ಡಕಾಯಿತಿ ಆರೋಪವಿತ್ತು. ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ. ಇವನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಇದನ್ನೂ ಓದಿ:ಎಣ್ಣೆ ಪ್ರಿಯರ ಈ ಗುಟ್ಟು ನಿಮಗೆ ಗೊತ್ತೆ? ಕೇಂದ್ರ ಸರ್ಕಾರ ಏನ್​ ಹೇಳಿದೆ ನೋಡಿ…
ರಾಜ್ವತ್​ನ ಬಿಂದ್​ ನಗರದ ನಿವಾಸಿಯಾಗಿರುವ ಈತ 2018ರಿಂದ ಜೈಲಿನಲ್ಲಿ ಇದ್ದಾನೆ. ಇಂದು ಬೆಳಗ್ಗೆ 6.30ಕ್ಕೆ ಜೈಲಿನ ಆವರಣದಲ್ಲಿರುವ ದೇವಸ್ಥಾನಕ್ಕೆ ಹೋಗಿದ್ದ ಈತ ಅಲ್ಲಿಯೇ ಹರಿತವಾಗಿರುವ ಚಾಕುವಿನಿಂದ ಮರ್ಮಾಂಗ ಕತ್ತರಿಸಿಕೊಂಡಿರುವುದಾಗಿ ಜೈಲು ಅಧೀಕ್ಷಕ ಮನೋಜ್ ಸಾಹು ಹೇಳಿದ್ದಾರೆ.
ಈತ ಮರ್ಮಾಂಗವನ್ನು ಕತ್ತರಿಸಿಕೊಂಡದ್ದು ಏಕೆ ಎಂಬುದು ಕೂಡ ಬಲು ವಿಚಿತ್ರವಾಗಿದೆ. ದೇವಸ್ಥಾನದ ಆವರಣದಲ್ಲಿ ಹೋಗಿ ಈ ಕೃತ್ಯ ಎಸಗಿರುವ ಹಿಂದೆ ವಿಚಿತ್ರ ಕಾರಣವೂ ಇದೆ ಎಂದು ಮನೋಜ್​ ಹೇಳಿದ್ದಾರೆ. ಅದೇನೆಂದರೆ, ಈತ ರಾತ್ರಿ ಮಲಗಿದ್ದಾಗ ಕನಸಿನಲ್ಲಿ ಶಿವ ಬಂದಿದ್ದನಂತೆ. ತನಗೆ ಮರ್ಮಾಂಗವನ್ನು ಅರ್ಪಿಸು ಎಂದು ಅವನು ಹೇಳಿದ್ದನಂತೆ. ಅದಕ್ಕಾಗಿಯೇ ಬೆಳಗ್ಗೆಯೇ ದೇವಸ್ಥಾನಕ್ಕೆ ಹೋಗಿದ್ದ ಆತ ಈ ಕೃತ್ಯ ಎಸಗಿದ್ದಾನೆ!
ಇದನ್ನೂ ಓದಿ:ಬಾರ್​ಗಳ ಮುಂದೆ ಮಹಿಳೆಯರದ್ದೂ ಕಾರುಬಾರು!
ತೀವ್ರ ನೋವಿನಿಂದ ಅಳುತ್ತಿದ್ದ ವಿಷ್ಣು ಕುಮಾರ್​ನನ್ನು ಗಮನಿಸಿದ ಸಹ ಕೈದಿಗಳು ಜೈಲು ಅಧೀಕ್ಷಕರಿಗೆ ಸುದ್ದಿ ಮುಟ್ಟಿಸಿದ್ದಾರೆ. ಅಲ್ಲಿಗೆ ಬಂದ ಅಧಿಕಾರಿಗಳು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು ಆತನ ಪರಿಸ್ಥಿತಿ ಗಂಭೀರವಾಗಿದೆ. ಆಸ್ಪತ್ರೆಯಲ್ಲಿ ಕೂಡ ಪೊಲೀಸರಿಗೆ ಕನಸಲ್ಲಿ ಶಿವ ಬಂದಿರುವ ಬಗ್ಗೆ ವಿವರಣೆ ನೀಡಿದ್ದಾನೆ.
ಈತನಿಗೆ ಹರಿತ ಚಾಕು ಸಿಕ್ಕಿದ್ದು ಹೇಗೆ? ಇಂಥ ಕೃತ್ಯವನ್ನು ಎಸಗುವಾಗ ಒಬ್ಬರೂ ಇರಲಿಲ್ಲ ಎಂದರೆ ಹೇಗೆ? ಇದು ಭದ್ರತಾ ಲೋಪವನ್ನು ಎತ್ತಿತೋರಿಸುತ್ತದೆ ಎನ್ನಲಾಗಿದ್ದು, ಈ ಕುರಿತು ಕೂಡ ತನಿಖೆ ನಡೆಯುತ್ತಿದೆ. ಸದ್ಯ ಈತನ ವಿರುದ್ಧ ಆತ್ಮಹತ್ಯೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.(ಏಜೆನ್ಸೀಸ್​)
ಇದನ್ನೂ ಓದಿ:ದಿನಸಿ ತರಲು ಕಳುಹಿಸಿದರೆ ಹೊಸ ಹೆಂಡತಿಯನ್ನೂ ಕರೆತರುವುದೆ? ಮಗ ರಾಕ್​, ಅಮ್ಮ ಶಾಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − thirteen =
Remember me
