ಬಕ್ಸರ್​:ಕರೊನಾ ಸೋಂಕಿನ ಲಕ್ಷಣಗಳಿರುವ ಹಿನ್ನೆಲೆಯಲ್ಲಿ ಜನರನ್ನು ಕ್ವಾರಂಟೈನ್​ನಲ್ಲಿ ಇರಿಸುವುದು ಸಾಮಾನ್ಯ. ಅಲ್ಲಿ ಅವರಿಗೆ ಔಷಧದ ಜತೆಗೆ ಆಹಾರವನ್ನೂ ಒದಗಿಸಲಾಗುತ್ತದೆ. ಅವರೆಲ್ಲರೂ ನಿಯಮಿತವಾಗಿ ಆಹಾರ ಸೇವಿಸುವುದರಿಂದ ಹೆಚ್ಚಿನ ಸಮಸ್ಯೆಯಾಗುತ್ತಿಲ್ಲ. ಆದರೆ, ಬಕ್ಸರ್​ನಲ್ಲಿರುವ ಕ್ವಾರಂಟೈನ್​ ಕೇಂದ್ರದಲ್ಲಿ ಮಾತ್ರ ಒಬ್ಬ ವ್ಯಕ್ತಿಗಾಗಿ ಚಪಾತಿ, ಅನ್ನ ಬೇಯಿಸಿ ಬಾಣಸಿಗರು ಸುಸ್ತಾಗಿದ್ದಾರಂತೆ. ಅಲ್ಲದೆ, ಈ ಕೇಂದ್ರದಲ್ಲಿ ಆಹಾರಧಾನ್ಯಗಳ ಒಂದು ತಿಂಗಳ ಕೋಟ ಕೆಲವೇ ದಿನಗಳಲ್ಲಿ ಖಾಲಿಯಾಗುತ್ತಿದೆಯಂತೆ!
ಹೌದು, ಈ ಕೇಂದ್ರದಲ್ಲಿ ಒಬ್ಬ ಬಕಾಸುರ ಇದ್ದಾನೆ. ಬೆಳಗಿನ ಉಪಹಾರಕ್ಕೆ 40 ಚಪಾತಿಗಳನ್ನು ಸಲೀಸಾಗಿ ತಿನ್ನುವ ಈತ ಇನ್ನೂ ಬೇಕು ಅನ್ನುತ್ತಾನಂತೆ! ಊಟ ಮಾಡಲು ಕುಳಿತರೆ 10 ಜನರಿಗೆ ಬೇಕಾಗುವುದಕ್ಕಿಂತಲೂ ಹೆಚ್ಚಿನ ಅನ್ನವನ್ನು ಈತ ತಿನ್ನುತ್ತಾನಂತೆ!
ಇದು ಅನೂಪ್​ ಓಜಾ ಎಂಬ 23 ವರ್ಷದ ಬಕಾಸುರನ ಕಥೆ. ಬಿಹಾರ ಮೂಲದ ಈತ ರಾಜಸ್ಥಾನದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ. ತವರಿಗೆ ಮರಳುತ್ತಿರುವ ಇತರೆ ವಲಸೆ ಕಾರ್ಮಿಕರಂತೆ ಈತನೂ ತನ್ನ ರಾಜ್ಯ ಬಿಹಾರಕ್ಕೆ ಮರಳಿದ್ದ. ಆದರೆ, ಆತನಲ್ಲಿ ಕರೊನಾ ಸೋಂಕಿನ ಲಕ್ಷಣಗಳು ಕಾಣಿಸಿದ್ದರಿಂದ ಆತನನ್ನು ಬಕ್ಸರ್​ನ ಕ್ವಾರಂಟೈನ್​ ಕೇಂದ್ರದಲ್ಲಿ ಇರಿಸಲಾಗಿದೆ.
ಇದನ್ನೂ ಓದಿ:ರೋಗಿಗಳು ರೈಲು ಹತ್ತಲೇಬೇಡಿ; ರೈಲ್ವೆ ಇಲಾಖೆ
ಈ ಕೇಂದ್ರದಲ್ಲಿ ಬೆರಳೆಣಿಕೆಯಷ್ಟು ಜನರನ್ನು ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಇವರಿಗೆ ಅವಶ್ಯಕವಾಗುವಷ್ಟು ಆಹಾರಧಾನ್ಯಗಳನ್ನು ಅಧಿಕಾರಿಗಳು ಪೂರೈಸಿದ್ದಾರೆ. ಆದರೆ, ಈ ದಾಸ್ತಾನು ಕೆಲವೇ ದಿನಗಳಲ್ಲಿ ಖಾಲಿಯಾಗುತ್ತಿರುವುದನ್ನು ಗಮನಿಸಿದ ಅಧಿಕಾರಿಗಳು ಏಕೆ ಹೀಗೆ ಎಂದು ಅನುಮಾನಗೊಂಡು, ಆ ಕ್ವಾರಂಟೈನ್​ ಕೇಂದ್ರಕ್ಕೆ ದಿಢೀರ್​ ಭೇಟಿ ನೀಡಿದರಂತೆ. ಅಲ್ಲಿದ್ದ ಬಾಣಸಿಗನನ್ನು ಈ ಬಗ್ಗೆ ಪ್ರಶ್ನಿಸಿದಾಗ ಅನೂಪ್​ ಓಜಾ ಎಂಬ ಬಕಾಸುರನ ಕಥೆ ಅರುಹಿದನಂತೆ. ಈ ಕೇಂದ್ರದಲ್ಲಿರುವ ಆತನಿಗಾಗಿ ಚಪಾತಿ, ಅನ್ನ ಬೇಯಿಸಿ ಸುಸ್ತಾಗಿರುವುದಾಗಿ ಅಸಹಾಯಕತೆ ವ್ಯಕ್ತಪಡಿಸಿದನಂತೆ.
ಓಜಾನ ಕ್ವಾರಂಟೈನ್​ ಅವಧಿ ಮುಗಿಯುವುದಕ್ಕೆ ಬರುತ್ತಿದೆ. ಆದ್ದರಿಂದ ಆತ ಎಷ್ಟೇ ತಿಂದರೂ, ಅಷ್ಟೂ ಆಹಾರವನ್ನು ಒದಗಿಸುವಂತೆ ಬಾಣಸಿಗನಿಗೆ ಸೂಚಿಸಿದ್ದೇವೆ ಎಂದು ಬಿಡಿಒ ಎ.ಕೆ. ಸಿಂಗ್​ ಎಂಬುವರು ತಿಳಿಸಿದ್ದಾರೆ.
ಅಮ್ಮನಿಗೆ ಅಂದು ಮೋದಿ ಬರೆದ ಪತ್ರಗಳು ಇದೀಗ ಪುಸ್ತಕ ರೂಪದಲ್ಲಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + fifteen =
Remember me
