ಜೈಪುರ:ರಾಜಸ್ಥಾನ ಕಾಂಗ್ರೆಸ್​ ಎರಡು ಬಣವಾಗಿ ಬೇರ್ಪಟ್ಟಿದೆ. ಒಂದು ಬಣ ಸಿಎಂ ಅಶೋಕ್​ ಗೆಹ್ಲೋಟ್​ರದ್ದು, ಮತ್ತೊಂದು ಮಾಜಿ ಡಿಸಿಎಂ ಸಚಿನ್​ ಪೈಲಟ್​ ಅವರದ್ದು. ಒಂದು ಕಡೆ ಸಚಿನ್​ ಪೈಲಟ್​ ಅವರ ಬಣ ಅನರ್ಹತೆಯ ಭೀತಿ ಎದುರಿಸುತ್ತ, ಕಾನೂನು ಹೋರಾಟದಲ್ಲಿ ತೊಡಗಿಕೊಂಡಿದ್ದರೆ, ಅಶೋಕ್ ಗೆಹ್ಲೋಟ್ ಬಣ ಐಷಾರಾಮಿ ಹೋಟೆಲ್​ನಲ್ಲಿ ಫುಲ್​ ರಿಲ್ಯಾಕ್ಸ್​​ ಮೂಡ್​​ನಲ್ಲಿದೆ. ಸಂಭ್ರಮದಲ್ಲಿದೆ.
ಸದ್ಯ ಅಶೋಕ್​ ಗೆಹ್ಲೋಟ್​ ಬಣಕ್ಕೆ ಬಿಜೆಪಿ ಭಯ ಎದುರಾಗಿದೆ. ಹೇಗೂ ಕಾಂಗ್ರೆಸ್​ ಎರಡು ಭಾಗವಾಗಿದೆ, ಇದೇ ಸಮಯದಲ್ಲಿ ಬಿಜೆಪಿ ಶಾಸಕರ ಕುದುರೆ ವ್ಯಾಪಾರ ನಡೆಸಬಹುದು ಎಂಬ ಆತಂಕದಿಂದ ಎಲ್ಲರೂ ಜೈಪುರದಲ್ಲಿರುವ ಐಷಾರಾಮಿ ಫೇರ್​​ಮಾಂಟ್​ ಹೋಟೆಲ್​ನಲ್ಲಿ ಅಡಗಿದ್ದಾರೆ. ಹಾಗೇ ಫೈವ್​ ಸ್ಟಾರ್ ಹೋಟೆಲ್​ ಸೇರಿದವರು, ಪಾಕಶಾಲೆಯ ಪ್ರಯೋಗಗಳನ್ನು ಕಲಿಯುತ್ತಿದ್ದಾರೆ.
ಯೋಗಾಭ್ಯಾಸ ಮಾಡುತ್ತ, ಸಿನಿಮಾ ನೋಡುತ್ತ ಭರ್ಜರಿ ಮನರಂಜನೆ ಮೂಡ್​​ನಲ್ಲಿದ್ದಾರೆ. ಅವರ ಫೋಟೋಗಳೂ ವೈರಲ್​ ಆಗಿವೆ.ಕೆಲವರು ಹೋಟೆಲ್​ನ ಚೆಫ್​ರಿಂದಲೇ ಅಡುಗೆ ಕಲಿಯುತ್ತಿದ್ದಾರೆ. ಪಾಸ್ತಾ ಸೇರಿ, ವಿವಿಧ ಅಡುಗೆಗಳನ್ನು ಮಾಡುವುದನ್ನು ಕಲಿಯುತ್ತಿದ್ದಾರೆ. ಹಾಗೇ ಮತ್ತೊಂದಷ್ಟು ಜನ ಹೋಟೆಲ್​ ಆವರಣದ ಹಸಿರು ಹುಲ್ಲಿನಲ್ಲಿ ಯೋಗಾಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ಯಾವುದೇ ಸೋಷಿಯಲ್​ ಡಿಸ್ಟನ್ಸ್​ ಇಲ್ಲದೆ, ಮಾಸ್ಕ್​ ಕೂಡ ಧರಿಸದೆ ಬಿಂದಾಸ್​ ಆಗಿ ಮಜಾ ಮಾಡುತ್ತಿದ್ದಾರೆ. ಈ ಮಧ್ಯೆ ಒಂದಷ್ಟು ಜನ ಶಾಸಕರು ಬಾಲಿವುಡ್​ ಸಿನಿಮಾ ನೋಡುವುದರಲ್ಲಿ ಬಿಜಿಯಾಗಿದ್ದಾರೆ.ಇದನ್ನೂ ಓದಿ:ಪತಂಜಲಿ ಕರೊನಾ ಔಷಧಕ್ಕೆ ಮತ್ತೊಂದು ಸಂಕಟ, ಬ್ರ್ಯಾಂಡ್​ ನೇಮ್​ ಬಳಕೆಗೆ ಹೈಕೋರ್ಟ್​ ತಡೆ
ಹೊರಗೆಲ್ಲ ಕರೊನಾ ಭೀತಿಯಿಂದ ಜನಸಾಮಾನ್ಯರೆಲ್ಲ ಆತಂಕದಲ್ಲಿದ್ದಾರೆ. ಆದರೆ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಪರಿಸಥೀತಿ ನಿಭಾಯಿಸಬೇಕಾದ ಜನಪ್ರತಿನಿಧಿಗಳು ಹೋಟೆಲ್​ ಸೇರಿ, ಐಷಾರಾಮಿ ಜೀವನ ನಡೆಸುತ್ತಿರುವುದು ಎಷ್ಟು ಸರಿ ಎಂದು ಅಲ್ಲಿನ ಜನರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.(ಏಜೆನ್ಸೀಸ್​)
ಉತ್ಪಾದನೆ ಇಲ್ಲದೆ ಕಂಪನಿಗಳು ಕಂಗಾಲು, ಕರೊನಾದಿಂದ ಸಂಕಷ್ಟ ಕೆಲಸ ಕಳೆದುಕೊಳ್ಳುತ್ತಿರುವ ಕಾರ್ಮಿಕರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 4 =
Remember me
