ನವದೆಹಲಿ:ಈಗ ಬೇಸಿಗೆಯ ಕಾಲ. ನೆತ್ತಿ ಸುಡುವಂಥ ಬಿಸಿಲು. ಜತೆಗೆ ಕೋವಿಡ್​ 19ನಿಂದಾಗಿ ಮೇ 3ರವರೆಗೆ ಮನೆಗಳಲ್ಲೇ ಕೂರಬೇಕಾದ ಅನಿವಾರ್ಯತೆ. ಹೀಗಾಗಿ ನಮ್ಮ ಪ್ರಿಯವಾದ ಹೋಟೆಲ್​ಗೆ ಹೋಗಿ, ಇಷ್ಟವಾದ ಭಕ್ಷ್ಯವನ್ನು ಆಸ್ವಾದಿಸುವುದೂ ಕಷ್ಟವಾಗಿದೆ. ಹಾಗಾಗಿ ದೇಹಕ್ಕೂ ತಂಪಾದ, ಕರೊನಾ ಸೋಂಕಿನಿಂದ ದೂರವುಳಿಯಲು ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುವ ಪಾನೀಯ ಕುಡಿವುದು ಒಳ್ಳೆಯದಲ್ಲವೇ?
ಆ ಪಾನೀಯ ಯಾವುದು? ಹೇಗೆ ಮಾಡುವುದು ಎಂಬ ನಿಮ್ಮ ಕುತೂಹಲ ತಣಿಸುವ ಮಾಹಿತಿ ಇಲ್ಲಿದೆ.
ಈ ಜ್ಯೂಸ್​ ತಯಾರಿಸಲು ಮುಖ್ಯವಾಗಿ ಮೂರು ಸಾಮಗ್ರಿಗಳು ಬೇಕಾಗುತ್ತವೆ. ಬಾಳೆಹಣ್ಣು, ಪೀನಟ್​ ಬಟರ್​ ಮತ್ತು ಅರಿಷಿಣದ ಪುಡಿ.
ಒಟ್ಟಾರೆ ಬೇಕಾಗುವ ಸಾಮಗ್ರಿಗಳ ಪಟ್ಟಿ ಇಂತಿದೆ: ಒಂದು ಬಾಳೆಹಣ್ಣು, ಒಂದು ಟೇಬಲ್​ ಸ್ಪೂನ್​ ಪೀನಟ್​ ಬಟರ್​, ಒಂದು ಟೇಬಲ್​ ಸ್ಪೂನ್​ ಅರಿಷಿಣದ ಪುಡಿ, ಒಂದು ಟೇಬಲ್​ ಸ್ಪೂನ್​ ಹಸಿ ಶುಂಠಿ (ಚೆನ್ನಾಗಿ ಹೆಚ್ಚಿಕೊಂಡಿರಬೇಕು), ಒಂದು ಟೇಬಲ್​ ಸ್ಪೂನ್​ ಚಿಯಾ ಬೀಜ, ಕಾಲು ಕಪ್​ ಓಟ್ಸ್​, 1 ಕಪ್​ ಹಾಲು, ಒಂದು ಚಿಟಿಕೆ ಕಪ್ಪುಮೆಣಸಿನ ಪುಡಿ, ಕಾಲು ಕಪ್​ ಬ್ಲ್ಯೂಬೆರೀಸ್​ (ಬೇಕಾದರೆ)
ಮಾಡುವ ಬಗೆ:ಮೇಲೆ ಹೇಳಿದ ಎಲ್ಲ ಸಾಮಗ್ರಿಗಳನ್ನು ಮಿಕ್ಸಿ ಜಾರ್​ಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ಇದಕ್ಕೆ ಸ್ವಲ್ಪ ನೀರು ಮತ್ತು ಐಸ್​ ಕ್ಯೂಬ್​ ಹಾಕಿ ಕುಡಿದರೆ, ತಂಡಾ, ತಂಡಾ ಕೂಲ್​, ಕೂಲ್​ ಹಾಗೂ ರೋಗನಿರೋಧಕ ಶಕ್ತಿಯೂ ಸೊಂಪು.
ದೇಣಿಗೆಯಾಗಿ ಚೀನಾದಿಂದ ಬಂದವು ಪಿಪಿಇ, ಒಟ್ಟು 50 ಸಾವಿರ ಪಿಪಿಇಗಳ ಗುಣಮಟ್ಟ ಕಳಪೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × three =
Remember me
