ಕಾನ್ಪುರ: ಪೊಲೀಸರೇ ನನ್ನ ಎನ್​ಕೌಂಟರ್​ ಮಾಡ್ತಾರೆ, ನನಗೆ ಹಾಗೂ ನನ್ನ ಹೆಂಡತಿಗೆ ರಕ್ಷಣೆ ನೀಡಿ…!
ಇಂಥದ್ದೊಂದು ಮನವಿ ಮಾಡ್ತಾ ಇರೋದು ಯಾರೋ ಸಾಮಾನ್ಯ ವ್ಯಕ್ತಿಯಲ್ಲ ಅಥವಾ ಕುಖ್ಯಾತ ಅಪರಾಧಿಯೂ ಅಲ್ಲ. ಬದಲಿಗೆ ಒಬ್ಬ ಪೊಲೀಸ್​ ಸಬ್​ ಇನ್​ಸ್ಪೆಕ್ಟರ್​. ರಕ್ಷಣೆ ಕೋರಿ ಆತ ಸುಪ್ರೀಂ ಕೋರ್ಟ್​ ಮೊರೆ ಹೋಗಿದ್ದಾನೆ.
ಇದನ್ನೂ ಓದಿ;ಎಂಟು ಪೊಲೀಸರನ್ನು ಕೊಂದ ವಿಕಾಸ್​ ದುಬೆಯದ್ದು ಮನೆಯಲ್ಲ, ಮದ್ದುಗುಂಡಿನ ಕಾರ್ಖಾನೆ; ಇಡೀ ಪ್ರದೇಶ ಸ್ಫೋಟಕ್ಕೆ ಸಂಚು
ಉತ್ತರಪ್ರದೇಶದ ಭಿಕ್ರು ಠಾಣೆಯ ಎಸ್​ಐ ಕೆ. ಕೆ. ಶರ್ಮಗೆ ಜೀವ ಭಯ ಉಂಟಾಗಿದೆ. ಕಾರಣವೆನೆಂದರೆ, ಜುಲೈ 2 ರಂದು ಎಂಟು ಪೊಲೀಸರನ್ನು ಕೊಂದ ಗ್ಯಾಂಗ್​ಸ್ಟರ್​ ವಿಕಾಸ್​ ದುಬೆ ಪರಾರಿಯಾಗಲು ಈತನೇ ಮಾಹಿತಿ ನೀಡಿದ್ದ. ಸದ್ಯ ವಿಶೇಷ ತನಿಖಾ ತಂಡ ಈತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ.
ವಿಕಾಸ್​ ದುಬೆಯನ್ನು ಬಂಧಿಸಿದ ದಿನವೇ, ಆತನ ಎನ್​ಕೌಂಟರ್​ ನಡೆಯುವ ಭೀತಿ ಇರುವುದಾಗಿ ಸುಪ್ರೀಂ ಕೋರ್ಟ್​ಗೆ ಅರ್ಜಿ ದಾಖಲಾಗಿತ್ತು. ದುಬೆಯನ್ನು ಮಧ್ಯಪ್ರದೇಶದ ಉಜ್ಜೈನಿಯಲ್ಲಿ ಬಂಧಿಸಿ ಕರೆತರುವಾಗ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ ಗ್ಯಾಂಗಸ್ಟರ್​ನನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಇದೇ ರೀತಿ ನನ್ನನ್ನು ಕೊಲ್ಲಲಿದ್ದಾರೆ ಎಂದು ಆತ ಸುಪ್ರೀಂ ಕೋರ್ಟ್​ಗೆ ಸಲ್ಲಿಸಿರುವ ಅರ್ಜಿಯಲ್ಲಿ ಶರ್ಮಾ ತಿಳಿಸಿದ್ದಾನೆ.
ಇದನ್ನೂ ಓದಿ;ಆತ ಬ್ರಾಹ್ಮಣನಾಗಿದ್ದರಿಂದಲೇ ಇಷ್ಟೆಲ್ಲ ಚರ್ಚೆ; ವಿಕಾಸ್​ ದುಬೆ ಎನ್​ಕೌಂಟರ್​ಗೆ ಕಾಂಗ್ರೆಸ್​ ಹೊಸ ವ್ಯಾಖ್ಯಾನ
ಶರ್ಮಾ ಮಾತ್ರವಲ್ಲದೇ, ಚೌಬೆಪುರ ಠಾಣಾಧಿಕಾರಿ ವಿನಯ್​ ತಿವಾರಿ ಕೂಡ ಪೊಲೀಸ್​ ವಶದಲ್ಲಿದ್ದಾನೆ. ಈತನೂ ವಿಕಾಸ್​ ದುಬೆ ಜತೆ ನಂಟು ಹೊಂದಿದ್ದಕ್ಕೆ ಸಾಕ್ಷ್ಯಗಳು ದೊರೆತಿವೆ.
ಸೋಮವಾರದಿಂದ ದೇಶದ 12 ಕಡೆಗಳಲ್ಲಿ ಕೋವಿಡ್​ ರೋಗಿಗಳಿಗೆ ದೇಶೀಯ ಕರೊನಾ ಲಸಿಕೆ ಪ್ರಯೋಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − seven =
Remember me
