ನವದೆಹಲಿ :ಮೂವತ್ತೊಂದು ವರ್ಷ ವಯಸ್ಸಿನ ಪೊಲೀಸ್​ ಅಧಿಕಾರಿಯೊಬ್ಬರು ಠಾಣೆಯ ಒಳಗೇ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯಿಂದ ವರದಿಯಾಗಿದೆ. ಪೂರ್ವ ದೆಹಲಿಯ ಪಾಂಡವನಗರ ಪೊಲೀಸ್​ ಠಾಣೆಯ ಸಬ್​ಇನ್ಸ್​ಪೆಕ್ಟರ್ ರಾಹುಲ್ ಸಿಂಗ್​ ಎಂಬುವರು ಮೃತ ದುರ್ದೈವಿ.
ಐದು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ರಾಹುಲ್​ ಸಿಂಗ್, ಆಗ್ರಾ ಮೂಲದವರಾಗಿದ್ದರು. ತಮ್ಮ ಕುಟುಂಬದೊಂದಿಗೆ ದೆಹಲಿಯಲ್ಲೇ ವಾಸವಾಗಿದ್ದರು. ಶುಕ್ರವಾರ ಬೆಳಿಗ್ಗೆ ಎಂದಿನಂತೆ ಕೆಲಸಕ್ಕೆ ಹಾಜರಾದ ಸಿಂಗ್, ಗುಂಡು ಹಾರಿಸಿಕೊಂಡು ಸಾವಪ್ಪಿದರು ಎನ್ನಲಾಗಿದೆ.
ಹಿರಿಯ ಅಧಿಕಾರಿಗಳ ಶೋಷಣೆಯಿಂದ ಬೇಸತ್ತು ಸಿಂಗ್​ ಸಾವಿಗೆ ಶರಣಾಗಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದು, ಇಂದು ಠಾಣೆಯ ಹೊರಗೆ ಪ್ರತಿಭಟನೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.(ಏಜೆನ್ಸೀಸ್)
ಲಾಭಕ್ಕಾಗಿ ಕರೊನಾ ಲಸಿಕೆ ಮಾರಿಕೊಂಡ ಸರ್ಕಾರ… ಇದೀಗ ಹೊರಡಿಸಿದೆ ತಿದ್ದುಪಡಿ ಆದೇಶ!

ಬಿಬಿಎಂಪಿ ಕಮಿಷನರ್ ಟ್ವಿಟರ್​ ಖಾತೆ ಹ್ಯಾಕ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
