ಉತ್ತರಪ್ರದೇಶ:ಕಳೆದ ಕೆಲವು ದಿನಗಳಿಂದ ತಾಪಮಾನದಲ್ಲಿ ತೀವ್ರ ಹೆಚ್ಚಳ ಕಂಡುಬಂದಿದ್ದು, ಬಿಸಿಲ ಶಾಖಕ್ಕೆ ಕೋತಿಯೊಂದು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಗಮನಿಸಿದ ವಿಕಾಸ್ ತೋಮರ್ ಎಂಬ ಪೊಲೀಸ್ ಅಧಿಕಾರಿಯೊಬ್ಬರು, ಹೇಗಾದರೂ ಮುಗ್ಧ ಜೀವವನ್ನು ಉಳಿಸಬೇಕು ಎಂದು ಬಿದ್ದ ಸ್ಥಳದಲ್ಲೇ ಅದಕ್ಕೆ ಸಿಪಿಆರ್ (ಕಾರ್ಡಿಯೋಪಲ್ಮನರಿ ರೆಸಸಿಟೇಶನ್) ಮಾಡಿ, ಜೀವ ಉಳಿಸಿದ ಘಟನೆ ಇಲ್ಲಿನ ಬುಲಂದ್‌ಶಹರ್‌ನಲ್ಲಿ ವರದಿಯಾಗಿದೆ.
ಇದನ್ನೂ ಓದಿ:ಮೆಣಸಿನಕಾಯಿಯನ್ನು ಕತ್ತರಿಸಿದ ನಂತರ ನಿಮ್ಮ ಕೈ ಉರಿಯುತ್ತಿದೆಯೇ? ಹಾಗಿದ್ರೆ ಹೀಗೆ ಮಾಡಿ ನೋಡಿ…
ಸಿಪಿಎಆರ್​ ಮೂಲಕ ಕೋತಿಗೆ ಮರುಜೀವ ನೀಡಿದ ಅಧಿಕಾರಿ, ಸ್ವಲ್ಪ ಸಮಯದ ಬಳಿಕ ಪ್ರಾಣಿಗೆ ಪ್ರಾಥಮಿಕ ಚಿಕಿತ್ಸೆ ಕೊಟ್ಟು, ನೀರು ಉಣಿಸಿದ್ದಾರೆ. ಕೋತಿಗೆ ವಿಕಾಸ್ ಅವರು ಮಾಡಿದ ಸಿಪಿಆರ್​ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದೆ. ಅಧಿಕಾರಿಗಳ ಸಮಯ ಪ್ರಜ್ಞೆಯನ್ನು ಕೊಂಡಾಡಿದ ನೆಟ್ಟಿಗರು, ನಿಮ್ಮಂತವರು ಈ ಸಮಾಜಕ್ಕೆ ಬೇಕು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮತ್ತೊಂದು ಆಶ್ಚರ್ಯಕರ ಸಂಗತಿ ಎಂದರೆ, ಈ ಘಟನೆಯ ಬಳಿಕ ಮರುಜೀವ ಪಡೆದ ಕೋತಿ, ಇದೀಗ ಪೊಲೀಸ್ ಅಧಿಕಾರಿ ವಿಕಾಸ್ ಇರುವ ಛತಾರಿ ಪೊಲೀಸ್ ಠಾಣೆಗೆ ಪ್ರತಿದಿನ ಭೇಟಿ ಕೊಡುತ್ತದೆಯಂತೆ. ಜೀವ ಉಳಿಸಿದವರಿಗೆ ಕೃತಜ್ಞತೆ ಸಲ್ಲಿಸುವ ಗುಣ ಇದಕ್ಕಿರುವುದು ನಿಜಕ್ಕೂ ಮೆಚ್ಚುವಂತದ್ದು. ಪ್ರಾಣಿಗಳ ಮುಂದೆ ಮನುಷ್ಯ ಬಹಳ ಚಿಕ್ಕವನು ಎಂಬುದು ಈ ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ ಎಂದು ನೆಟ್ಟಿಗರು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).
ನನಗಿರುವುದು ಇದೊಂದೇ ಆಸೆ… ‘3’ರ ಹಿಂದೆ ಬಿದ್ದ ಕೆಕೆಆರ್​ ಮೆಂಟರ್ ಗೌತಮ್​ ಗಂಭೀರ್​!

ಅಂಥದ್ದೇನು ನಾ ಹೇಳಿಲ್ಲ.. ವಿರಾಟ್ ಫ್ಯಾನ್ಸ್​ಗಳಿಂದ ಕೊಲೆ ಬೆದರಿಕೆ ಇದೆ! ಅಳಲು ತೋಡಿಕೊಂಡ ಮಾಜಿ ಕ್ರಿಕೆಟಿಗ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:thirteen − seven =
Remember me
