ಛತ್ತೀಸಗಢ:ಕಂಟೈನ್​ಮೆಂಟ್​ ಝೋನ್​ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ವ್ಯಕ್ತಿಗಳನ್ನು ರಾಯ್​ಪುರದ ಪೊಲೀಸ್​ ಒಬ್ಬರು ಥಳಿಸಿದ್ದು, ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕೇಸ್​ ದಾಖಲಾಗಿದೆ.
ಉರ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಬಿರ್ಗಾಂವ್ ಪ್ರದೇಶದಲ್ಲಿ ಭಾನುವಾರ ಬೆಳಿಗ್ಗೆ ಈ ಘಟನೆ ನಡೆದಿತ್ತು. ಈ ಭಾಗದಲ್ಲಿ ಕರೊನಾ ಸೋಂಕಿತರ ಸಂಖ್ಯೆ ವಿಪರೀತ ಹೆಚ್ಚಾಗಿರುವ ಕಾರಣ, ಅದನ್ನು ನಿಷೇಧಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಆದರೆ ಇಲ್ಲಿಯ ಜನರು ನಿಯಮವನ್ನು ಪಾಲಿಸದೇ ಎರ್ರಾಬಿರ್ರಿ ಓಡಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ:ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ರಲ್ಲಿ ಕೊವಿಡ್​-19 ಲಕ್ಷಣಗಳು: ನಾಳೆ ಬೆಳಗ್ಗೆ ತಪಾಸಣೆ
ಭಾನುವಾರ ಈ ಪ್ರದೇಶದ ಡ್ಯೂಟಿಯಲ್ಲಿದ್ದ ಉರ್ಲಾ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ನಿತಿನ್ ಉಪಾಧ್ಯಾಯ ಅವರು ಈ ಜನರನ್ನು ನೋಡಿ ಸಿಟ್ಟಿಗೆದ್ದಿದ್ದರು. ಲಾಕ್​ಡೌನ್​ ನಿಯಮ ಉಲ್ಲಂಘಿಸಿದ ಹುಡುಗನೊಬ್ಬನನ್ನು ಲಾಠಿಯಿಂದ ಥಳಿಸಿದ್ದರು. ಆತನ ತಾಯಿ ಗೋಗರೆದರೂ ಕೇಳಿಸಿಕೊಳ್ಳದ ಇವರು ಚೆನ್ನಾಗಿ ಥಳಿಸುತ್ತಿದ್ದರು.ಇದನ್ನು ಅಲ್ಲಿಯೇ ಇದ್ದವರೊಬ್ಬರು ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದು ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಪೊಲೀಸ್​ ವಿರುದ್ಧ ಶಿಸ್ತಿನ ಕ್ರಮ ತೆಗೆದುಕೊಳ್ಳುವ ಒತ್ತಾಯ ಹೆಚ್ಚಿತು.
ಇದಕ್ಕೆ ಮಣಿದಿರುವ ಸರ್ಕಾರ, ಇದೀಗ ಪೊಲೀಸ್​ ವಿರುದ್ಧ ದೂರು ದಾಖಲು ಮಾಡಿಕೊಂಡು, ಅವರ ವಿರುದ್ಧ ತನಿಖೆಗೆ ಆದೇಶಿಸಿದೆ. ಇದು ತೀರಾ ಅಮಾನವೀಯವಾದುದು ಮತ್ತು ಪೊಲೀಸ್​ ಕ್ರಮವನ್ನು ಒಪ್ಪುವಂಥದ್ದಲ್ಲ. ಆದ್ದರಿಂದ ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ. ಜತೆಗೆ, ರಾಯ್‌ಪುರದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಅಡಿಯಲ್ಲಿ ಪ್ರತ್ಯೇಕ ವಿಚಾರಣೆಯೂ ನಡೆಸಲಾಗುತ್ತದೆ ಎಂದು ರಾಯ್‌ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಆರಿಫ್ ಶೇಖ್ ಹೇಳಿದ್ದಾರೆ.
ಇದನ್ನೂ ಓದಿ:ಸೆಕ್ಸ್​ ತಪ್ಪು, ರೇಪ್​ ಓಕೆನಾ ಎಂದು ನಿರ್ಮಾಪಕಿ ಏಕ್ತಾ ಕಪೂರ್​ ಪ್ರಶ್ನಿಸಿದ್ಯಾಕೆ?
ಬಿರ್ಗಾಂವ್​ ಪ್ರದೇಶದಲ್ಲಿ ವೈರಸ್​ನಿಂದ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಇದರ ಹೊರತಾಗಿಯೂ ಅಲ್ಲಿಯ ಜನರು ನಿಯಮ ಪಾಲಿಸದೇ ಮನಸೋಇಚ್ಛೆ ತಿರುಗಾಡುತ್ತಿದ್ದಾರೆ. ಇದು ದೊಡ್ಡ ತಲೆನೋವಾಗಿದೆ. ಇದರ ಹೊರತಾಗಿಯೂ ಪೊಲೀಸ್​ ಈ ರೀತಿ ಥಳಿಸಿರುವುದು ಕ್ಷಮಾರ್ಹವಲ್ಲ ಎಂದು ಅವರು ಹೇಳಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × three =
Remember me
