ನವದೆಹಲಿ:ಭಾರತವು 2028ರಲ್ಲಿ ಇಣಕ33 (ಕಾನ್ಪರೆನ್ಸ್ ಆಫ್ ಪಾರ್ಟೀಸ್) ಆಯೋಜಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆಶಯ ವ್ಯಕ್ತಪಡಿಸಿದ್ದಾರೆ. ಅವರು ಶುಕ್ರವಾರ ದುಬೈನಲ್ಲಿ ಏರ್ಪಡಿಸಲಾದ ವಿಶ್ವಸಂಸ್ಥೆಯ 28ನೇ ಹವಾಮಾನ ಶೃಂಗಸಭೆಯ (ಇಣಕ28) ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಜಾಗತಿಕ ಹವಾಮಾನ ಕುರಿತ ಮಾತುಕತೆ ನಡೆಸಲು ವಿವಿಧ ದೇಶಗಳ ನೂರಾರು ವಿಶ್ವ ನಾಯಕರು ಶೃಂಗಸಭೆಯಲ್ಲಿ ಭಾಗವಹಿಸಿದ್ದಾರೆ.
ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಮತ್ತು ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅವರು ಮೋದಿಯವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು.
ಇಣಕ33ನ್ನು ಜಾಗತಿಕ ಹವಾಮಾನ ಕುರಿತು ಕ್ರಮ ಕೈಗೊಳ್ಳುವ ಪ್ರಮುಖ ವೇದಿಕೆ ಎಂದು ಬಣ್ಣಿಸಿದ ಪಿಎಂ ಮೋದಿ, ಮೊದಲ ದಿನದಂದು ತೆಗೆದುಕೊಂಡ ನಷ್ಟ ಮತ್ತು ಹಾನಿ ನಿಧಿ ಬಗೆಗಿನ ನಿರ್ಧಾರ ಹೊಸ ಭರವಸೆ ಮೂಡಿಸಿದೆ. ಅಭಿವೃದ್ಧಿಶೀಲ ರಾಷ್ಟ್ರಗಳಿಗೂ ಕಾರ್ಬನ್ ಬಜೆಟ್​ನಲ್ಲಿ ನ್ಯಾಯಯುತ ಪಾಲು ಇರಬೇಕು. ಜಾಗತಿಕ ದಕ್ಷಿಣ (ಗ್ಲೋಬಲ್ ಸೌತ್) ವ್ಯಾಪ್ತಿಯಲ್ಲಿ ಬರುವ ಜನರು ಹವಾಮಾನ ಬದಲಾವಣೆ ವಿನಾಶಕಾರಿ ಪರಿಣಾಮಗಳನ್ನು ಎದುರಿಸುತ್ತಿದ್ದಾರೆ. ಕಾರ್ಬನ್ ಬಜೆಟ್​ನಲ್ಲಿ ನ್ಯಾಯಯುತ ಪಾಲಿನ ಜತೆಗೆ ತಾಪಮಾನ ತಗ್ಗಿಸುವಿಕೆಯಲ್ಲಿ ಸೂಕ್ತ ಕ್ರಮಗಳ ಅಳವಡಿಸುವಿಕೆ, ನಷ್ಟ-ಹಾನಿ, ತಂತ್ರಜ್ಞಾನ ವರ್ಗಾವಣೆ ಮತ್ತು ಹಣಕಾಸು… ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಸಮತೋಲಿತ ರೀತಿಯಲ್ಲಿ ನಾವು ಮುಂದುವರಿಯಬೇಕಿದೆ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಹವಾಮಾನಕ್ಕೆ ಪೂರಕವಾದ, ಜನರ ಸಹಭಾಗಿತ್ವದೊಂದಿಗೆ ನಡೆಸುವ ಭಾರತದ ಗ್ರೀನ್ ಕ್ರೆಡಿಟ್ ಕಾರ್ಯಕ್ರಮದ ಬಗ್ಗೆಯೂ ಅವರು ಘೊಷಿಸಿದರು. ಸಂಪ್ರದಾಯ ಮತ್ತು ಸಂರಕ್ಷಣೆಯಲ್ಲಿ ಬೇರೂರಿರುವ ಪರಿಸರ ಸ್ನೇಹಿ ಅಭ್ಯಾಸಗಳನ್ನು ಪೋ›ತ್ಸಾಹಿಸುವುದು ಗ್ರೀನ್ ಕ್ರೆಡಿಟ್ ಉಪಕ್ರಮದ ಉದ್ದೇಶವಾಗಿದೆ.
ಏನಿದು ಕಾರ್ಬನ್ ಬಜೆಟ್?:ನಿಗದಿ ಮಾಡಿದ ಜಾಗತಿಕ ತಾಪಮಾನ ಮಿತಿ ದಾಟದೆ ಹೊರಸೂಸುವ ಇಂಗಾಲದ ನಿವ್ವಳ ಪ್ರಮಾಣವನ್ನು ಇದು ಸೂಚಿಸುತ್ತದೆ. ವರ್ಷ ಕಳೆದಂತೆ ಇಂಗಾಲ ಹೊರಸೂಸುವಿಕೆ ಹೆಚ್ಚುತ್ತಿರುವುದರಿಂದ ಬಜೆಟ್ ಪ್ರಮಾಣವೂ ತಗ್ಗಿದೆ. ವಿಶ್ವದ ಜನಸಂಖ್ಯೆಯಲ್ಲಿ ಭಾರತದ ಪಾಲು 17% ಆಗಿದ್ದರೂ, ಜಾಗತಿಕ ಸಂಚಿತ ಇಂಗಾಲ ಹೊರಸೂಸುವಿಕೆಯಲ್ಲಿ ಭಾರತದ ಪಾಲು 4% ಮಾತ್ರ ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಅಂದರೆ, ನ್ಯಾಯಯುತ ಮತ್ತು ಸಮಾನ ಇಂಧನ ಪರಿವರ್ತನೆಯ ಅಗತ್ಯವಿದೆ ಎಂದವರು ತಿಳಿಸಿದರು.
ಗುರಿ ಸಾಧಿಸುವ ಹಾದಿಯಲ್ಲಿ:ಭಾರತವು ಜಾಗತಿಕ ತಾಪಮಾನ ತಗ್ಗಿಸುವಿಕೆಗೆ ಸಂಬಂಧಿಸಿದ ಉದ್ದೇಶಗಳನ್ನು ತಲುಪುವ ಹಾದಿಯಲ್ಲಿರುವ ವಿಶ್ವದ ಕೆಲವೇ ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದ ಪ್ರಧಾನಿ, 2070ರ ವೇಳೆಗೆ ನಿವ್ವಳ ಶೂನ್ಯ ಹೊರಸೂಸುವಿಕೆ ಸಾಧಿಸುವ ಭಾಗವಾಗಿ ಕಳೆದ ವರ್ಷ ಭಾರತ ವಿದ್ಯುತ್ ಶಕ್ತಿಯ ಸ್ಥಾಪಿತ ಸಾಮರ್ಥ್ಯದ ಶೇ. 50ನ್ನು ಪಳೆಯುಳಿಕೆಗಳಲ್ಲದ ವಸ್ತುಗಳಿಂದ ಪಡೆದುಕೊಂಡಿದೆ ಎಂದರು. ಭಾರತ ತನ್ನನ್ನು ಜಾಗತಿಕ ದಕ್ಷಿಣದ ಧ್ವನಿ ಎಂದು ಪರಿಗಣಿಸಿದ್ದು, ಎ20 ಅಧ್ಯಕ್ಷತೆಯಲ್ಲಿ 2030ರ ವೇಳೆಗೆ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಮೂರು ಪಟ್ಟು ಹೆಚ್ಚಿಸುವ ಸಲುವಾಗಿ ಬೃಹತ್ ಆರ್ಥಿಕತೆಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮೇಲಾಗಿ, ತನ್ನ ಎ20 ಅಧ್ಯಕ್ಷತೆಯಲ್ಲಿ ಭಾರತ ಹವಾಮಾನ ಸಮಸ್ಯೆಗೇ ಹೆಚ್ಚು ಪ್ರಾಶಸ್ಱ ನೀಡಿತು ಎಂದು ವಿವರಿಸಿದರು.
7 ದ್ವಿಪಕ್ಷೀಯ ಸಭೆ, 4 ಭಾಷಣ:ಶೃಂಗಸಭೆ ಭಾಗವಾಗಿ ಪ್ರಧಾನಿ ಮೋದಿ ದುಬೈನಲ್ಲಿ ಸುಮಾರು 21 ಗಂಟೆಗಳ ಕಾಲ ಏಳು ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ. ಇದರಲ್ಲಿ ಕೆಲವು ಈಗಾಗಲೇ ಪೂರ್ಣಗೊಂಡಿವೆ. ನಾಲ್ಕು ಭಾಷಣಗಳ ಜತೆ ಹವಾಮಾನ ಕುರಿತ ಎರಡು ವಿಶೇಷ ಉಪಕ್ರಮಗಳ ಭಾಗವಾಗಲಿದ್ದಾರೆ. ವಿವಿಧ ದೇಶಗಳ ನಾಯಕರ ಜತೆಗೆ ಅನೌಪಚಾರಿಕ ಸಭೆಯನ್ನೂ ನಡೆಸಿದ್ದಾರೆ.
ಭರ್ಜರಿ ಸ್ವಾಗತ:ಗುರುವಾರ ರಾತ್ರಿ ಪ್ರಧಾನಿ ಮೋದಿ ದುಬೈಗೆ ತಲುಪುತ್ತಿದ್ದಂತೆಯೇ ಅವರನ್ನು ಭರ್ಜರಿಯಾಗಿ ಸ್ವಾಗತಿಸಲಾಯಿತು. ‘ಅಬ್ಕಿ ಬಾರ್ ಮೋದಿ ಸರ್ಕಾರ್’, ‘ಅಬ್ಕಿ ಬಾರ್ 400 ಪಾರ್’ ಮತ್ತು ‘ಹರ್ ಹರ್ ಮೋದಿ’ ಎಂಬ ಘೊಷಣೆಗಳ ಮೂಲಕ ಅನಿವಾಸಿ ಭಾರತೀಯರಿಂದ ಪ್ರಧಾನಿಗೆ ಆತ್ಮೀಯ ಸ್ವಾಗತ ದೊರೆಯಿತು. ‘ಸಾರೆ ಜಹಾನ್ ಸೆ ಅಚ್ಛಾ’, ವಂದೇ ಮಾತರಂ ಹಾಡುತ್ತಾ ಭಾರತ್ ಮಾತಾ ಕಿ ಜೈ ಘೊಷಣೆ ಹಾಕಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, ದುಬೈನಲ್ಲಿರುವ ಭಾರತೀಯ ಸಮುದಾಯ ನೀಡಿದ ಸ್ವಾಗತ ಹೃದಯರ್ಸ³ಯಾಗಿತ್ತು.
ಅಮೆರಿಕ, ಚೀನಾ ಅಧ್ಯಕ್ಷರು ಗೈರು:ಇದು ಹವಾಮಾನ ಕುರಿತ ನಿರ್ಣಾಯಕ ಶೃಂಗಸಭೆ ಯಾಗಿದ್ದರಿಂದ ನೂರಾರು ವಿಶ್ವ ನಾಯಕರು ದುಬೈಗೆ ಬಂದಿದ್ದಾರೆ. ಆದರೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಮಾತ್ರ ಗೈರಾಗಿದ್ದರು.
ಎನರ್ಜಿ ಸ್ವರಾಜ್ ಯಾತ್ರೆ:ಸೌರ ಶಕ್ತಿ ಮತ್ತು ಹವಾಮಾನ ಬದಲಾವಣೆಯ ಅಪಾಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು 2020ರಿಂದ ಸೌರಶಕ್ತಿ ಚಾಲಿತ ಬಸ್​ನಲ್ಲಿ ದೇಶ ಪ್ರವಾಸ ಮಾಡುತ್ತಿರುವ ಐಐಟಿ ಬಾಂಬೆಯ ಪ್ರಾಧ್ಯಾಪಕ ಪೊ›ಫೆಸರ್ ಚೇತನ್ ಸಿಂಗ್ ಸೋಲಂಕಿ, ಹವಾಮಾನ ಬದಲಾವಣೆಯ ದುಷ್ಪರಿಣಾಮಗಳಿಗೆ ಒಳಗಾಗುವ ಅಗ್ರ ರಾಷ್ಟ್ರಗಳಲ್ಲಿ ಭಾರತವೂ ಒಂದು ಎಂದು ಹೇಳಿದ್ದಾರೆ.
ಪರಿಹಾರ ಪ್ರಕಟ:ಕ್ಲೈಮೇಟ್ ಫೈನಾನ್ಸ್ ಲೀಡರ್​ಶಿಪ್ ಇನಿಶಿಯೇಟಿವ್ ಇಂಡಿಯಾ ಸಂಸ್ಥೆ ಭಾರತದ ಇಂಗಾಲ ತಗ್ಗಿಸುವಿಕೆ, ಹವಾಮಾನ ಸ್ಥಿತಿಸ್ಥಾಪಕ ಅಭಿವೃದ್ಧಿಯನ್ನು ಬೆಂಬಲಿಸಲು 6.5 ಶತಕೋಟಿ ಅಮೆರಿಕನ್ ಡಾಲರ್​ಗಿಂತ ಹೆಚ್ಚಿನ ಮೊತ್ತವನ್ನು ಸಜ್ಜುಗೊಳಿಸುವ ಸಾಮರ್ಥ್ಯ ದೊಂದಿಗೆ ಹಣಕಾಸು ಪರಿಹಾರಗಳನ್ನು ಪ್ರಕಟಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
