ಪಂಜಾಬ್‌:ಎಎಸ್​​ಐ ಒಬ್ಬರು ತಮ್ಮ ಸರ್ವೀಸ್ ರಿವಾಲ್ವರ್​ನಿಂದ ಪತ್ನಿ ಹಾಗೂ ಮಗನನ್ನು ಹತ್ಯೆ ಮಾಡಿದ್ದಾರೆ. ಜತೆಗೆ ಸಾಕು ನಾಯಿಗೂ ಗುಂಡು ಹಾರಿಸಿದ್ದಾರೆ. ಅಮೃತಸರದಲ್ಲಿ ನಿಯೋಜನೆಗೊಂಡಿದ್ದ ಎಎಸ್‌ಐ ಭೂಪಿಂದರ್ ಸಿಂಗ್ ಕೊಲೆ ಆರೋಪಿ. ಎಎಸ್​ಐ ಪತ್ನಿ ಬಲ್ಜಿತ್ ಕೌರ್(40) ಹಾಗೂ ಪುತ್ರ ಲವ್‌ಪ್ರೀತ್ ಸಿಂಗ್ (19) ಮೃತರು.
ಪತ್ನಿ ಮತ್ತು ಮಗನನ್ನು ಕೊಲೆ ಮಾಡಿ ಎಎಸ್​​ಐ ಭೂಪಿಂದರ್ ಸಿಂಗ್ ಪರಾರಿಯಾಗಿದ್ದಾರೆ. ಸದ್ಯ ನಾಪತ್ತೆಯಾಗಿರುವ ಆರೋಪಿಗಾಗಿ ವಿಶೇಷ ತಂಡ ರಚಿಸಿ ಶೋಧ ಕಾರ್ಯ ನಡೆಯುತ್ತಿದೆ. ಭೂಪಿಂದರ್ ಸಿಂಗ್ ತನ್ನ ಪತ್ನಿ ಮತ್ತು ಮಗನನ್ನು ಕೊಲ್ಲಲು ಕಾರಣವೇನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಆರೋಪಿಯ ಪತ್ತೆಗೆ ಗ್ರಾಮದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಗುರುದಾಸ್‌ಪುರ ಎಸ್‌ಎಸ್‌ಪಿ ಹರೀಶ್ ಕುಮಾರ್ ದೈಮಾ ತಿಳಿಸಿದ್ದಾರೆ.
ಇದನ್ನೂ ಓದಿ:ಹಾಸನ | ರೇಗಿಸಿದ ಯುವಕನಿಗೆ ಚಪ್ಪಲಿಯೇಟು ನೀಡಿದ ಯುವತಿ
ಪತ್ನಿ-ಪುತ್ರನನ್ನು ಹತ್ಯೆ ಮಾಡಿದ ಬಳಿಕ ಸ್ಥಳದಿಂದ ಕಾಲ್ಕಿತ್ತಿರುವ ಆರೋಪಿ ಭೂಪಿಂದರ್ ಸಿಂಗ್ ಬಬ್ಲಿ ಗ್ರಾಮದ ಯುವತಿಯೊಬ್ಬಳನ್ನು ಅಪಹರಿಸಿದ್ದಾನೆ. ಈ ಕೃತ್ಯವನ್ನು ಸ್ಥಳೀಯರು ನೋಡಿರುವುದ ವರದಿಯಾಗಿದೆ. ಸದ್ಯ ಬಾಲಕಿಯನ್ನು ಪೊಲೀಸರು ಸುರಕ್ಷಿತವಾಗಿ ರಕ್ಷಿಸಿದ್ದು, ವೈದ್ಯಕೀಯ ತಪಾಸಣೆಗಾಗಿ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಗುರುದಾಸ್‌ಪುರ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ವರದಿಗಳ ಪ್ರಕಾರ, ಆರೋಪಿ ಭೂಪಿಂದರ್ ಸಿಂಗ್ ಬಾಲಕಿಯನ್ನು ತನ್ನ ಕಾರಿನಲ್ಲಿ ಭುಮ್ಲಿಯಿಂದ 35 ಕಿಮೀ ದೂರದಲ್ಲಿರುವ ಶಹಪುರ್ ಜಜ್ಜನ್ ಗ್ರಾಮಕ್ಕೆ ಕರೆದೊಯ್ದು ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ವರದಿಯಾಗಿದೆ.ಇದನ್ನೂ ಓದಿ:ಬಿಜೆಪಿ ಟಿಕೆಟ್‌ಗಾಗಿ CPI ಹುದ್ದೆಗೆ ರಾಜೀನಾಮೆ; ನಾಗಠಾಣ ಮೀಸಲು ಕ್ಷೇತ್ರದಿಂದ ಸ್ಪರ್ಧೆಗೆ ಸಿದ್ಧ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + eight =
Remember me
