ರಾಯ್​ಪುರ:ಒತ್ತುವರಿ ತೆರವು ಕಾರ್ಯಾಚರಣೆಯನ್ನು ವಿರೋಧಿಸಿ ಪ್ರತಿಭಟನೆಗೆ ಮುಂದಾದ ಮಹಿಳೆಯರ ಮೇಲೆ ಪೊಲೀಸರು ಹಲ್ಲೆ ನಡೆಸಿ ದೌಜನ್ಯ ಎಸಗಿರುವ ಘಟನೆ ಛತ್ತೀಸ್​ಗಢದ ಸೂರಜ್​ಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳ್ಲಲಿ ವೈರಲ್​ ಆಗಿದ್ದು ನೆಟ್ಟಿಗರು ಪೊಲೀಸರು ನಡೆಗೆ ಕಿಡಿಕಾರಿದ್ದಾರೆ ಮತ್ತು ನ್ಯಾಯಾಕ್ಕಾಗಿ ಆಗ್ರಹಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್​ ಅಧಿಕಾರಿಗಳು ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾದ ಕಂದಾಯ ಇಲಾಖೆ ಅಧಿಕಾರಿಗಳ ಮೇಲೆ ತಿಲಸಿವಾ ಗ್ರಾಮದ ಮಹಿಳೆಯರು ದಾಳಿ ಮಾಡಿದ್ದರು. ಅಧಿಕಾರಿಗಳ ದೂರಿನ ಮೇರೆಗೆ ಅವರನ್ನು ಬಂಧಿಸಿದ್ದೇವೆ ಎಂದು ತಿಳಿಸಿದ್ದಾರೆ.
A policeman was seen pulling a woman’s hair and kicking her as she fell to the ground,The appalling scene unfolded during an anti-encroachment drive in Tilsiva village in the Surajpur,police said they just retaliated after the women attacked some local revenue officials.pic.twitter.com/HyNmrIiSzP— Anurag Dwary (@Anurag_Dwary)May 26, 2023

A policeman was seen pulling a woman’s hair and kicking her as she fell to the ground,The appalling scene unfolded during an anti-encroachment drive in Tilsiva village in the Surajpur,police said they just retaliated after the women attacked some local revenue officials.pic.twitter.com/HyNmrIiSzP
ಇದನ್ನೂ ಓದಿ:ಚುನಾವಣೆಗೂ ಮುನ್ನ ಅಭ್ಯರ್ಥಿ ಕೊಟ್ಟಿದ್ದ ಕುಕ್ಕರ್​ ಸ್ಪೋಟ; ಬಾಲಕಿಗೆ ಗಂಭೀರ ಗಾಯ
ಜಾನುವಾರುಗಳಿಗೆ ನಿರ್ಮಿಸಲಾಗಿದ್ದ ಶೆಡ್​ನಲ್ಲಿ ಕೆಲವರು ಅತಿಕ್ರಮಣ ಮಾಡಿದ್ದರು ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಈ ವೇಳೆ ಅಧಿಕಾರಿಗಳ ಮೇಲೆ ದಾಳಿ ಮಾಡಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಧುಲಿಕಾ ಶರ್ಮಾ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಗಾಯಾಳು ಮಹಿಳೆ ಒಬ್ಬರು ನಾವು ಹಲವು ವರ್ಷಗಳಿಂದ ಈ ಜಾಗದಲ್ಲಿ ವಾಸವಿದ್ದೇವೆ ಆಗ ಯಾರು ಬಂದು ಖಾಲಿ ಮಾಡಿ ಎಂದು ಹೇಳಿರಲಿಲ್ಲ. ಪೊಲೀಸ್​ ಅಧಿಕಾರಿಗಳು ಗರ್ಭಿಣಿ ಮಹಿಳೆಯರ ಮೇಲೂ ಹಲ್ಲೆ ನಡೆಸಿ ವಿಕೃತಿ ಮೆರೆದಿದ್ದಾರೆ ಎಂದು ಹೇಳಿದ್ದಾರೆ.
ಸದ್ಯ ಮಹಿಳೆಯರ ಮೇಲಿನ ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಹಿರಿಯ ಅಧಿಕಾರಿಗಳು ಹಾಗೂ ಸಚಿವರು ಈ ಕುರಿತು ಪ್ರತಿಕ್ರಿಯೆ ನೀಡಿಲ್ಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
