ಮುಂಬೈ:ಪೋಲೀಸರು ಇರೋದು ಜನರನ್ನ ಕಾಪಾಡೋಕೆ ಅಂತ ನಿರೂಪಿಸುವಂಥ ಕೆಲಸವೊಂದನ್ನು ಪೋಲೀಸ್ ಪೇದೆಯೊಬ್ಬರು ಬಹಳ ಸರಾಗವಾಗಿ ಮಾಡಿದ ಘಟನೆ ಇದು. ಅದಕ್ಕಾಗೇ ಮುಂಬಯಿ ಪೋಲೀಸ್ ತಮ್ಮ ಟ್ವಿಟರ್ ಖಾತೆಯಲ್ಲಿ ಈ ಮೈನವಿರೇಳಿಸುವ ಸಿಸಿಟಿವಿ ಕ್ಲಿಪ್ಪಿಂಗ್ಅನ್ನು ಶೇರ್ ಮಾಡಿದೆ!
ಇದನ್ನೂ ಓದಿ:ಮುಂಬೈ ಯುವಕ ಕುತ್ತಿಗೆ ಸೀಳಿಕೊಂಡ… ಐರ್ಲೆಂಡ್​ನಲ್ಲಿ ಕೂತವ ಬಚಾವ್​ ಮಾಡಿದ… ಅಬ್ಬಬ್ಬಾ ಎಂಥ ವಿಚಿತ್ರವಿದು!
ಮುಂಬಯಿಯ ದಾಹಿಸಾರ್ ರೈಲು ನಿಲ್ದಾಣದಲ್ಲಿ ಎಂದಿನಂತೆ ಪ್ರಯಾಣಿಕರ ಆಗುಹೋಗುಗಳು ನಡೆಯುತ್ತಿದ್ದವು. ಪೋಲೀಸ್ ಕಾನ್​ಸ್ಟಬಲ್ ಯೋಗೇಶ್ ಹಿರೇಮಠ್ ತಮ್ಮಷ್ಟಕ್ಕೆ ನಡೆದುಕೊಂಡು ಹೋಗುತ್ತಿದ್ದರು. ಆಗ ನಿಲ್ದಾಣ ಬಿಟ್ಟು ಹೊರಟಿದ್ದ ರೈಲನ್ನು ಹತ್ತಲು ವ್ಯಕ್ತಿಯೊಬ್ಬರು ಧಾವಿಸಿಬಂದರು. ಚಲಿಸುತ್ತಿದ್ದ ರೈಲನ್ನು ಪ್ರವೇಶಿಸಲು ಹೋದಾಗ ದಿಢೀರ್ ಆಗಿ ಹಿಡಿತ ತಪ್ಪಿ ಬಿದ್ದರು. ಅವರು ಬಿದ್ದದ್ದು ರೈಲು ಮತ್ತು ಪ್ಲಾಟ್​ಫಾರಂ ನಡುವೆ ಅಡ್ಡಲಾಗಿ!
ದೇವದೂತನಂತೆ ತಕ್ಷಣ ಕಾರ್ಯಪ್ರವೃತ್ತರಾದ ಹಿರೇಮಠ್, ಬಿದ್ದವರ ಕಾಲು ಹಿಡಿದು ಬಲವಾಗಿ ಹಿಂದಕ್ಕೆಳೆದರು. ಕೂದಲೆಳೆಯಲ್ಲಿ ಪ್ರಾಣಾಪಾಯ ತಪ್ಪಿಸಿದರು.
ಇದನ್ನೂ ಓದಿ:ಬಾಲಕನನ್ನು ಕೆರೆಯೊಳಗೆ ಎಳೆದೊಯ್ದ ಆಕಳು! 12 ವರ್ಷದ ಬಾಲಕ ದುರ್ಮರಣ
ಚಲಿಸುತ್ತಿದ್ದ ರೈಲು ಹತ್ತಲು ಪ್ರಯತ್ನಿಸಿ ಜಾರಿ ಬಿದ್ದ ಯುವಕನನ್ನು ಉಳಿಸಿದ ಪುಣ್ಯ ಹಿರೇಮಠ್ ಪಾಲಾದರೆ, ಈ ದೃಶ್ಯವನ್ನು ಟ್ವಿಟರ್​ನಲ್ಲಿ “ಯುವರ್ ಸೇಫ್ಟಿ ಇಸ್ ಇನ್ ಗುಡ್ ಹ್ಯಾಂಡ್ಸ್​” ಎಂಬ ಶೀರ್ಷಿಕೆ ಕೊಟ್ಟು ಹೆಮ್ಮೆಯಿಂದ ಹಂಚಿಕೊಂಡಿದ್ದಾರೆ ಮುಂಬಯಿ ಪೋಲೀಸರು. (ಏಜೆನ್ಸೀಸ್​)
Your Safety Is In Good Hands!
PC Yogesh Hiremath was at Dahisar Railway Station when a young man almost fell in the platform gap while trying to board a moving train.
The alert officer managed to pull him out before anything untoward happened.#MumbaiFirstpic.twitter.com/1qFToEmceE
— मुंबई पोलीस – Mumbai Police (@MumbaiPolice)January 4, 2021

‘ಸಿದ್ದರಾಮಯ್ಯನವರು ನಮ್ಮೂರಿಗೆ ಏನೂ ಮಾಡಿಲ್ಲ’ ಸಿದ್ದರಾಮಯ್ಯ ಎದುರೇ ಅಸಮಾಧಾನ ತೋಡಿಕೊಂಡ ಗ್ರಾ.ಪಂ ಸದಸ್ಯ! ವೇದಿಕೆಯಿಂದ ಕೆಳಕ್ಕೆ ನೂಕಿದ ಸಿದ್ದರಾಮಯ್ಯ!

ತಂಗಿಗಾಗಿ ಅಕ್ಕನನ್ನೇ ನಗ್ನಗೊಳಿಸಿದ! ಸಹಾಯಕ್ಕೆ ಕೇಳಿ ಬರಲಿ ಎಂದು ಕಾದಿದ್ದವನಿಗೆ ಕಾದಿತ್ತು ದೊಡ್ಡ ಶಾಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
