ಚೆನ್ನೈ:ಪರಾರಿಯಾಗಲು ಯತ್ನಿಸಿದ ಆರೋಪಿ ಕಾಲಿಗೆ ಮಹಿಳಾ ಪೊಲೀಸ್​ ಅಧಿಕಾರಿಯೊಬ್ಬರು ಗುಂಡೇಟು ನೀಡಿ ಬಂಧಿಸಿರುವ ಘಟನೆ ಚೆನ್ನೈನ ಅಯಾನವರಂನಲ್ಲಿ ನಡೆದಿದೆ. ಗಮನಿಸಬೇಕಾದ ಸಂಗತಿ ಏನೆಂದರೆ, ಆರೋಪಿಯೊಬ್ಬನ ಮೇಲೆ ಮಹಿಳಾ ಪೊಲೀಸ್​ ಅಧಿಕಾರಿಯೊಬ್ಬರು ಓಪನ್​ ಆಗಿ ಫೈರಿಂಗ್​ ಮಾಡಿದ ರಾಜ್ಯದ ಮೊದಲ ಪ್ರಕರಣ ಇದಾಗಿದೆ.
ಗುಂಡೇಟು ತಿಂದ ಆರೋಪಿಯನ್ನು 22 ವರ್ಷದ ಸೂರ್ಯ ಅಲಿಯಾಸ್​ ಬೆಂಡ್​ ಸೂರ್ಯ ಎಂದು ಗುರುತಿಸಲಾಗಿದೆ. ಇನ್​ಸ್ಪೆಕ್ಟರ್​ ಮೀನಾ ಅವರು ಆರೋಪಿಯ ಮೊಣಕಾಲಿನ ಕೆಳಗೆ ಗುಂಡು ಹಾರಿಸಿ ಸೆರೆಹಿಡಿದಿದ್ದಾರೆ. ಪೊಲೀಸ್​ ಕಸ್ಟಡಿಯಲ್ಲಿದ್ದ ಆರೋಪಿ ಸೂರ್ಯ ಪೊಲೀಸ್​ ಸಿಬ್ಬಂದಿ ಮೇಲೆ ದಾಳಿ ಮಾಡಿ ಪರಾರಿಯಾಗಲು ಯತ್ನಿಸಿದ್ದ. ದಾಳಿಯ ವೇಳೆ ಇಬ್ಬರು ಪೊಲೀಸ್​ ಸಿಬ್ಬಂದಿಗೆ ಗಾಯಳಾಗಿವೆ.
ಇದನ್ನೂ ಓದಿ:ಸಾಲದ ಹೊರೆಗೆ ಒಂದೇ ಕುಟುಂಬದ ಮೂವರು ಪ್ರಾಣ ತ್ಯಾಗ; ಮಗಳ ಮೇಲಿನ ಅತಿಯಾದ ಪ್ರೀತಿಯೇ ಮುಳುವಾಯ್ತಾ?
ಆರೋಪಿ ಮೇಲೆ ಓಪನ್​ ಆಗಿ ಫೈರಿಂಗ್​ ಮಾಡಿದ ರಾಜ್ಯದ ಮೊದಲ ಮಹಿಳಾ ಪೊಲೀಸ್​ ಎಂಬ ಹೆಗ್ಗಳಿಕೆಗೆ ಮೀನಾ ಅವರು ಪಾತ್ರರಾಗಿದ್ದಾರೆ.
ಭಾನುವಾರ ಬೆಳಗ್ಗೆ 4 ಗಂಟೆಗೆ ಕೊನ್ನೂರು ಹೆದ್ದಾರಿಯಲ್ಲಿ ವಾಹನ ತಪಾಸಣೆ ವೇಳೆ ಸೂರ್ಯ, ಗೌತಮ್​ ಮತ್ತು ಅಜಿತ್​ನನ್ನು ಪೊಲೀಸರು ತಡೆದರು. ಮೂವರು ಕೂಡ ಸ್ಥಳದಲ್ಲಿದ್ದ ಇನ್​ಸ್ಪೆಕ್ಟರ್​ ಶಂಕರ್​ ಅವರ ಮೇಲೆ ಕಬ್ಬಿಣ ಸಲಾಕೆಯಿಂದ ದಾಳಿ ಮಾಡಿ , ದ್ವಿಚಕ್ರ ವಾಹನದ ಮೂಲಕ ಪರಾರಿಯಾಗಿದ್ದರು. ಇದಾದ ಬಳಿಕ ಗೌತಮ್​ ಮತ್ತು ಅಜಿತ್​ನನ್ನು ಪೊಲೀಸರು ಬಂಧಿಸಿದ್ದರು.
ತಿರುವಳ್ಳೂರಿನ ಸಂಬಂಧಿಕರ ಮನೆಯಲ್ಲಿ ಆರೋಪಿ ಸೂರ್ಯ ಇರುವ ಬಗ್ಗೆ ಸುಳಿವು ಪಡೆದ ಪೊಲೀಸರು ಅಲ್ಲಿಗೆ ಒಂದು ತಂಡವಾಗಿ ನಿನ್ನೆ (ಫೆ.22) ಬೆಳಗ್ಗೆ ತೆರಳಿದ್ದರು. ಬಳಿಕ ಸೂರ್ಯನನ್ನು ಬಂಧಿಸಿ, ಪೊಲೀಸ್​ ಠಾಣೆಗೆ ಕರೆತರುವಾಗ, ಪ್ರಕೃತಿಗೆ ಕರೆಗಾಗಿ ವಾಹನವನ್ನು ನಿಲ್ಲಿಸಿದ. ರಸ್ತೆ ಪಕ್ಕದಲ್ಲಿ ಗಾಡಿ ನಿಲ್ಲಿಸಲಾಯಿತು. ಮೂತ್ರ ವಿಸರ್ಜನೆಗೆ ಹೋಗಿದ್ದ ಆರೋಪಿ ತಪ್ಪಿಸಿಕೊಂಡು, ಕಬ್ಬಿನ ಜ್ಯೂಸ್​ ಅಂಗಡಿಯತ್ತ ಓಡಿ ಹೋಗಿ, ಅಲ್ಲಿದ್ದ ಚಾಕು ತೆಗೆದುಕೊಂಡನು. ಈ ವೇಳೆ ಆತನನ್ನು ಹಿಡಿಯಲು ಹೋದ ಸರವಣ ಕುಮಾರ್​ ಮತ್ತು ಅಮಾನುದ್ಧೀನ್​ ಹೆಸರಿನ ಪೊಲೀಸ್​ ಸಿಬ್ಬಂದಿ ಮೇಲೆ ದಾಳಿ ಮಾಡಿದ.
ಇದನ್ನೂ ಓದಿ:ಬದುಕಿರುವಾಗಲೇ ಸಮಾಧಿ ನಿರ್ಮಿಸಿಕೊಂಡ ವೃದ್ಧ ದಂಪತಿ: ಕಾರಣ ಕೇಳಿದ್ರೆ ಹುಬ್ಬೇರೋದು ಖಚಿತ!
ದಾಳಿ ಮಾಡಿ ಎಸ್ಕೇಪ್​ ಆಗಲು ಯತ್ನಿಸಿದಾಗ ಮೀನಾ ಅವರು ಶರಣಾಗುವಂತೆ ಹೇಳಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೆ, ಆರೋಪಿ ಮೀನಾ ಅವರ ಮೇಲೆ ದಾಳಿ ಮಾಡಲು ಯತ್ನಿಸಿದಾಗ ಆತನ ಮೊಣಕಾಲಿನ ಕೆಳಗೆ ಮೀನಾ ಅವರ ಶೂಟ್​ ಮಾಡಿದ್ದಾರೆ. ಈ ವೇಳೆ ಗಾಯಗೊಂಡು ಕುಸಿದು ಬಿದ್ದ ಆರೋಪಿ ಸೂರ್ಯನನ್ನು ಕಿಲ್​ಪೌಕ್​ ಸರ್ಕಾರಿ ಮೆಡಿಕಲ್​ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿ ಸೂರ್ಯ, ಕೊಲೆ ಯತ್ನ, ಮೊಬೈಲ್​ ಹಾಗೂ ಸರಗಳ್ಳತನ ಸೇರಿದಂತೆ ಒಟ್ಟು 14 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.(ಏಜೆನ್ಸೀಸ್​)
ತಾವು ಮಾಡಿದ್ದ ವಾಂತಿಯನ್ನು ತಾವೇ ತಿನ್ನುವಂತಾಗಿದೆ: ಬಿಜೆಪಿ ನಾಯಕರ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಮಗುವಿನ ಚಿಕಿತ್ಸೆಗೆ ಅಪರಿಚಿತನಿಂದ 11.6 ಕೋಟಿ ರೂ. ನೆರವು: ಕೊನೆಗೂ ಸಿಕ್ತು ಪುಣ್ಯಾತ್ಮನ ಸುಳಿವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + fourteen =
Remember me
